ಜಿಲ್ಲೆನ್ಯೂಸ್

ಶೋಕಿ ಜೀವನ ನಡೆಸಲು ಕಳ್ಳತನ ಮಾಡಿದ್ದ 200000/ರೂ (ಎರಡು ಲಕ್ಷ ರೂಪಾಯಿ) ನಗದನ್ನು ಅಮಾನತ್ತು ಪಡಿಸಿಕೊಂಡ ಪೊಲೀಸರು….!

ಶೋಕಿ ಜೀವನ ನಡೆಸಲು ಕಳ್ಳತನ ಮಾಡಿದ್ದ 200000/ರೂ (ಎರಡು ಲಕ್ಷ ರೂಪಾಯಿ) ನಗದನ್ನು ಅಮಾನತ್ತು ಪಡಿಸಿಕೊಂಡ ಪೊಲೀಸರು….!



(SHIVAMOGA): ಶಿಕಾರಿಪುರ: ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದ ಹನುಮಂತನಾಯ್ಕ ಎಂಬುವವರ ಮನೆಯಲ್ಲಿ ಹಾಡುಹಗಲೇ ನ್ಯಾಮತಿ ತಾಲೂಕಿನ ಚಿಲೂರು ನಿವಾಸಿ ಆಕಾಶ್ ಎಂಬ ವಿದ್ಯಾರ್ಥಿಯು ತನ್ನ ಲೈಫ್ ಸ್ಟೈಲ್ ನ್ನು ಹೆಚ್ಚಿಸಿಕೊಳ್ಳಲು ಐ- ಫೋನ್ ಮೊಬೈಲ್ ತೆಗೆದುಕೊಂಡು ಶೋಕಿ ಜೀವನಕ್ಕಾಗಿ 205000/ರೂ ನಗದು ಹಣವನ್ನು ಕಳ್ಳತನ ಮಾಡಿ ತಲೆ ಮರೆಸಿ ಕೊಂಡಿದ್ದ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ.

ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ IPS.ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾ‌ರ್ ಭೂಮ ರೆಡ್ಡಿ ಹಾಗೂ ಶಿವಮೊಗ್ಗ ಜಿಲ್ಲಾ 2ನೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪರವರ ಆದೇಶದಂತೆ

ಶಿಕಾರಿಪುರ ಪೊಲೀಸ್ ಉಪಾಧೀಕ್ಷಕ ರಾದ ಶಿವಾನಂದ ಎನ್. ಮದರ್‌ಖಂಢಿ ರವರ ಮಾರ್ಗದರ್ಶನದಂತೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆರ್.ಆರ್ ಪಾಟೀಲ್  ರವರ ನೇತೃತ್ವದದಲ್ಲಿ* *ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ASI ತೋಟಪ್ಪ,ಮತ್ತು ಕ್ರೈಮ್ ವಿಭಾಗದ ಸಿಬ್ಬಂದಿ ಗಳನ್ನೊಳಗೊಂಡ ವಿಶೇಷ ತಂಡವು ಕಳ್ಳತನದ ಪ್ರಕರಣವನ್ನು ಕೈಗೆತ್ತಿಕೊಂಡು.
ದೂರು ದಾಖಲಾದ ಕೇವಲ 4 ಗಂಟೆಯ ಒಳಗಾಗಿ ಕಳ್ಳತನ ಮಾಡಿದ ಆರೋಪಿ ಆಕಾಶ್ ಎಲ್ ತಂದೆ ಲಿಂಗಮೂರ್ತಿನಾಯ್ಕ ವಿದ್ಯಾರ್ಥಿ,ವಾಸ ಚೀಲೂರು ಕೆಂಗಟ್ಟೆ ಗ್ರಾಮ, ಈತನನ್ನು ದಸ್ತಗಿರಿ ಮಾಡಿ ಈತನಿಂದ ಕಳ್ಳತನವಾದ 200000/ರೂ (ಎರಡು ಲಕ್ಷ ರೂಪಾಯಿ) ನಗದು ಹಣವನ್ನು ಅಮಾನತ್ತುಪಡಿಸಿ ಕೊಂಡು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪ್ರಕರಣ ದಾಖಲಾದ ನಾಲ್ಕು ಗಂಟೆಯ ಒಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ತಂಡಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು,ವಿಶೇಷವಾಗಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ವರದಿ: ರಫೀಕ್ ಕೊಪ್ಪ

Leave a Reply

Your email address will not be published. Required fields are marked *

Scan the code