ನ್ಯೂಸ್ಶಿವಮೊಗ್ಗ

ಅ.ಭಾ.ವೀ.ಲಿಂ.ಮಹಾಸಭಾ ಸೊರಬ ತಾಲೂಕು ಘಟಕದ ಚುನಾವಣೆ

ಅ.ಭಾ.ವೀ.ಲಿಂ.ಮಹಾಸಭಾ ಸೊರಬ ತಾಲೂಕು ಘಟಕದ ಚುನಾವಣೆ

(SHIVAMOGA): ಸೊರಬ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸೊರಬ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಗೆ ಜುಲೈ 21 ರಂದು ಮತದಾನ ನಡೆಯಲಿದೆ ಎಂದು ತಾಲೂಕು ಚುನಾವಣಾಧಿಕಾರಿ, ಹಿರಿಯ ವಕೀಲ ಶಿವಕುಮಾರ್.ಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 27 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಜುಲೈ 4 ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಜುಲೈ 8 ರಂದು ನಾಮಪತ್ರ ಹಿಂಪಡೆಯಬಹುದಾಗಿದ್ದು, ಜುಲೈ 21 ರ ಭಾನುವಾರ ಪಟ್ಟಣದ ಮುರುಘಾಮಠದಲ್ಲಿ ಮತದಾನ ನಡೆಯಲಿದೆ.
ಅಧ್ಯಕ್ಷ ಸ್ಥಾನ-1, ಸಾಮಾನ್ಯ ವರ್ಗ-13 ಮತ್ತು ಮಹಿಳೆಯರಿಗೆ 7 ಸ್ಥಾನಗಳು ಮೀಸಲಿದ್ದು, ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವವರು ಮತದಾರರ ಪಟ್ಟಿಯಲ್ಲಿರುವ ಒಬ್ಬರು ಸೂಚಕರು, 10 ಜನ ಅನುಮೋದಕರ ಸಹಿ ಮಾಡಿ ಅರ್ಜಿ ಸಲ್ಲಿಸಬೇಕು.


ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಅರ್ಜಿ ಸಲ್ಲಿಸುವವರು ಒಬ್ಬರು ಸೂಚಕರು, 5 ಜನ ಅನುಮೋದಕರ ಸಹಿಯೊಂದಿಗೆ ಅರ್ಜಿ ಸಲ್ಲಿಸಬೇಕು. ನಾಮಪತ್ರ ಸಲ್ಲಿಸುವಾಗ ಒಬ್ಬ ಸೂಚಕ, ಒಬ್ಬ ಅನುಮೋದಕರ ಜೊತೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬೇಕು.
ಅಧ್ಯಕ್ಷ ಸ್ಥಾನಕ್ಕೆ ಒಂದು, ಸಾಮಾನ್ಯ ವರ್ಗಕ್ಕೆ 13 ಮತ್ತು ಮಹಿಳೆಯರಿಗೆ 7 ಮತಗಳನ್ನು ಹಾಕಬೇಕು. ಇದಕ್ಕಿಂತ ಹೆಚ್ಚು ಮತಗಳನ್ನು ಚಲಾಯಿಸಿದಲ್ಲಿ ಮತ ತಿರಸ್ಕೃತವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಚುನಾವಣಾಧಿಕಾರಿಗಳು, ವಕೀಲರಾದ ಚಂದ್ರಶೇಖರ ಸಿ.ಬಿ (9980749847), ವಿವೇಕ ಎಸ್.ಎಸ್ (9591554024) ರವರನ್ನು ಸಂಪರ್ಕಿಸಬಹುದಾಗಿದೆ.

ವರದಿ: ಸಂದೀಪ ಯು.ಎಲ್ ಸೊರಬ

Leave a Reply

Your email address will not be published. Required fields are marked *

Scan the code