ತಾಲೂಕಿನ ತುಮಟಗೆರೆ ಗ್ರಾಮದ ಬಾಲಕ ಜ್ವರದಿಂದ ಸಾವು
(KOLARA): ಬಂಗಾರಪೇಟೆ: ತಾಲೂಕಿನ ತುಮಟಗೆರೆ ಗ್ರಾಮದ ಬಾಲಕ ಜ್ವರದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ದುರ್ದೇವಿ ಭರತ್ 15 ವರ್ಷ 9ನೇ ತರಗತಿ ಓದುತ್ತಿದ್ದ ಎಂದು ತಿಳಿದುಬಂದಿದೆ. ಕಳೆದ ಮೂರು ದಿನದಿಂದ ಜ್ವರ ಕಾಣಿಸಿಕೊಂಡಿದೆ. ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಜ್ವರ ಜಾಸ್ತಿ ಆದ ನಂತರ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾನೆ.
ವರದಿ: ವಿಷ್ಣು ಕೋಲಾರ