ಕೊಳೆತ ಸ್ಥಿತಿಯಲ್ಲಿ ತೇಲಿ ಬಂದ ಶವ
(CHIKKAMAGALURU): ಭದ್ರಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ತೇಲಿ ಬಂದ ಶವ, ಶೌರ್ಯ ವಿಪತ್ತು ನಿರ್ವಹಣಾ ಘಟಕದವರು ಕೊಳೆತು ನಾರುತ್ತಿದ್ದ ಶವವನ್ನು ನದಿಯಿಂದ ಮೇಲಕ್ಕೆತ್ತಿ ಪೊಲೀಸರಿಗೆ ಒಪ್ಪಿಸಿದ್ದ ಘಟನೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವ್ಯಾಪ್ತಿಯ ಬನ್ನೂರು ಕೂಡಿಗೆ ಬಳಿ ಸುಮಾರು ದಿನದ ಹಿಂದೆ ಕೊಳೆತು ನಾರುತ್ತಿದ್ದ ಶವವೊಂದು ಭದ್ರಾ ನದಿಯಲ್ಲಿ ತೇಲಿ ಬಂದಿತ್ತು ಸ್ಥಳೀಯರು ಬಾಳೆಹೊನ್ನೂರು ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಪೊಲೀಸ್ ಇಲಾಖೆಯಾವರು ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಬಾಳೆಹೊನ್ನೂರು ಶೌರ್ಯ ವಿಪತ್ತು ನಿರ್ವಹಣ ಘಟಕ ಜಂಟಿಯಾಗಿ ಕಾರ್ಯಾಚರಣೆ ಮಾಡಿ ಶವವನ್ನು ದಡಕ್ಕೆ ಮುಟ್ಟಿಸಿ ತದನಂತರ ಆಂಬುಲೆನ್ಸ್ ಗೆ ರವಾನೆ ಮಾಡಿ, ಬಾಳೆಹೊನ್ನೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿಸಲಾಗಿದೆ. ಈ ಘಟನೆಯು ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ.
ಬಾಳೆಹೊನ್ನೂರು ಪೊಲೀಸ್ ಇಲಾಖೆ ಸಿಬ್ಬಂದಿ ಜತೆಯಾಗಿ ಇದ್ದರು ಸ್ವಯಂ ಸೇವಕರಾದ ಚಂದ್ರಶೇಖರ್ ರೈ, ಸುರೇಶ್ ಕೋಟಿಯನ್, ಪ್ರದೀಪ್, ರಂಜಿತ್, ರಾಕೇಶ್ ಮುಂತಾದ ಸ್ವಯಂ ಸೇವಕರು ಇದ್ದರು.