ಡಾಕ್ಟರ್ ಕೆಳದಿ ಗುಂಡಾ ಜೋಯ್ಸ್ ರವರಿಗೆ ಅಂತಿಮ ನಮನ
(SHIVAMOGA): ಇತಿಹಾಸ ಸಂಶೋಧಕ, ಕೈ ಬರಹಗಳ ತಜ್ಞ, ಉತ್ಸಾಹದ 94 ವರ್ಷದ ಡಾಕ್ಟರ್ ಕೆಳದಿ ಗುಂಡಾ ಜೋಯ್ಸ್ ರವರು ಇದೀಗ ತಾನೇ ಸ್ವರ್ಗಸ್ತರಾದರೆಂದು ತಿಳಿದುಬಂದಿದೆ. ಅಂತಿಮ ದರ್ಶನಕ್ಕಾಗಿ ದೇಹವನ್ನು ಅವರ ಪುತ್ರರಾದ ಕೆಳದಿ ಡಾಕ್ಟರ್ ವೆಂಕಟೇಶ್ ಜೋಯ್ಸ್ ರವರ ಸಾಗರದ ಅಣಲೇ ಕೊಪ್ಪ ಬಡಾವಣೆ ಮನೆಯಲ್ಲಿ ಇರಿಸಲಾಗಿದೆ. ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ (3/06/2024) ಸೋಮವಾರ 10 ಗಂಟೆಗೆ ಸಾಗರದ ಮಾರಿಕಾಂಬ ಚಿತಾಗಾರದಲ್ಲಿ ನಡೆಯಲಿದೆ. ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ನಮ್ ಸಮಾಚಾರ ಪಾಕ್ಷಿಕ ಪತ್ರಿಕೆಯ ಬಳಗ ಅವರ ನಿಧನಕ್ಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.
ವೆಂಕಟೇಶ್ ಜೋಯ್ಸ್ ನಂಬರ್ – 9448839739