25 ವರ್ಷ ಹಳೆಯ ಸ್ಕೂಟರ್ನಲ್ಲಿ 75 ವರ್ಷದ ತಾಯಿಯೊಂದಿಗೆ ತೀರ್ಥಯಾತ್ರೆಗೆ ಹೊರಟ“ಆಧುನಿಕ ಶ್ರವಣಕುಮಾರ’
(SHIVAMOGGA) SAGARA: ಹೆತ್ತು ಹೊತ್ತುಸಾಕಿ ಸಲುಹಿ ವಿದ್ಯಾಭ್ಯಾಸಕೊಡಿಸಿ ಉನ್ನತ ಸ್ಥಾನಕ್ಕೆ
ಹೋದ ನಂತರ ಹೆತ್ತ ತಂದೆ ತಾಯಿಯನ್ನೇ ದೂರಮಾಡುವ ಮಕ್ಕಳಿರುವ ಇ೦ದಿನ ದಿನಗಳಲ್ಲಿ ತಾಯಿಗೋಸ್ಕರವೇ ಉದ್ಯೋಗವನ್ನು ತೊರೆದು ತೀರ್ಥಕ್ಷೇತ್ರ ಯಾತ್ರೆ ಕೈಗೊಳ್ಳುತ್ತಿರುವ ಅಪರೂಪದ ಮೈಸೂರಿನ ವ್ಯಕ್ತಿಯೊಬ್ಬರು ಸಾಕ್ಷಿಯಾಗಿದ್ದಾರೆ. ತನ್ನ ತಾಯಿಯನ್ನು ಸ್ಕೂಟರ್ನಲ್ಲಿ ಕೂರಿಸಿಕೊಂಡು ಭಾರತದ ಅನೇಕ ರಾಜ್ಯಗಳ ಸುತ್ತುತ್ತಾ, ಪುಣ್ಯಕ್ಷೇತ್ರವನ್ನು ದರ್ಶನ ಮಾಡಿಸುತ್ತಾ ಕಟ್ಟಿಕೊಳ್ಳುತ್ತಿದ್ದಾರೆ.
2018ರಲ್ಲೇ ಯಾತ್ರೆ ಆರಂಭಿಸಿದ ಇವರು ಸರಿ ಸುಮಾರು 62000 ಕಿ.ಮೀ.ಕ್ರಮಿಸಿ ವಿವಿಧ ಕಡೆ ಭೇಟಿ ನೀಡಿದ್ದಾರೆ.
ಅಂದು ಬರೋಬ್ಬರಿ ಎರಡು ವರ್ಷದ ಹತ್ತು ತಿಂಗಳ ಯಾತ್ರೆ ಕೈಗೊಂಡಿದ್ದರು. ಕೊವಿಡ್ ನಂತರ ಪುನಃ, ಆಗಸ್ಟ್ 15 2022ರಂದು ಮೈಸೂರಿನಿಂದ ಬೈಕ್ ಯಾತ್ರೆ ಆರಂಭಿಸಿ ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಕಾಶ್ಮೀರದವರೆಗೆ ತೆರಳಿ ಗುಜರಾತ, ಮಹಾರಾಷ್ಟ್ರ ಗೋವಾ ಮೂಲಕ ಕರ್ನಾಟಕಕ್ಕೆ ತಂದೆ ಅವರ ಮಗನಿಗೆ ನೀಡಿದ ಸ್ಕೂಟರ್ ನಲ್ಲೆ 25 ವರ್ಷದ ಸ್ಕೂಟರ್ ಮತ್ತು 73 ವರ್ಷದ ತಾಯಿ ಇವರು ಪ್ರಯಾಣಿಸುತ್ತಿರುವ ಬಜಾದ ಚೇತಕ ಸ್ಕೂಟರ್ಗೆ 25 ವರ್ಷ
ಸಂದಿದೆ. ಇದನ್ನು ಅವರ ತಂದೆಯವರು ಕೊಡಿಸಿದ್ದರಂತೆ ಆದರೆ ಈಗ ಸ್ಕೂಟರ್ ಇದೆ ಇದು ನನಗೆ ತಂದೆ ಇದ್ದಂತೆ, ಅಷ್ಟು
ಹಳೆಯದಾದ ವಾಹನವಾದರೂ ಪ್ರಯಾಣದಲ್ಲಿ ಕೆಟ್ಟು ನಿಂತಿಲ್ಲ ಎನ್ನುತ್ತಾರೆ ಕೃಷ್ಣಕುಮಾರ. ಇನ್ನೂ ಈ ಸ್ಕೂಟರ್ನಲ್ಲಿ 73 ವರ್ಷದ ಹಿರಿಯ ಜೀವ ಈ ಹಿಂದೆ 56522ಕಿ.ಮಿ, ಕ್ರಮಿಸಿದರೆ, ಎರಡನೇ ಪ್ರಯತ್ನದಲ್ಲಿ 62000 ಕಿ.ಮೀ. ಯಾತ್ರೆ ಪೂರೈಸಿರುವುದು ಮತ್ತೊಂದು ಸಾಹಸ.ತನ್ನ ತಾಯಿಗೋಸ್ಕರ ಮಾತೃ ಸೇವಾ ಸಂಕಲ್ಪಯಾತ್ರೆ ಹಮ್ಮಿಕೊಂಡಿದ್ದೇನೆ. 67 ವರ್ಷ
ಜೀವನವನ್ನು ತಂದೆ ಮಕ್ಕಳ ಪಾಲನೆಯೊಂದಿಗೆ ಅಡುಗೆ, ಮನೆಗೆಲಸಲ್ಲಿ ಕಳೆದಿದ್ದಾರೆ. 67 ವರ್ಷಗಳಲ್ಲಿ ಆದ ಕೊರತೆಯನ್ನು
ಮಗನಾಗಿ ತಾನು ಪ್ರಮಾಣಿಕವಾಗಿ ತುಂಬಿಕೊಡುವ ಪ್ರಯತ್ನದಿಂದ ಯಾತ್ರೆ ಆರಂಭಿಸಿದ್ದೆ.
ನಂತರ ಕೋವಿಡ್ ತಡೆ ನೀಡಿತ್ತು ಕಳೆದ ವರ್ಷ ಯಾತ್ರೆ ಆರಂಭಿಸಿ ಒಂದೂವರೆ ವರ್ಷದಿಂದ ವಿವಿಧ ಸ್ಥಳಗಳ ಭೇಟಿ ನೀಡುತ್ತಿದ್ದೇನೆ ಎಂದ ಅವರು ನಮ್ಮ ಹೆಂಡತಿ ಮಕ್ಕಳಿಗಿಂತ ಹೆಚ್ಚು ಹೆತ್ತ ತಾಯಿಯನ್ನು ನೋಡಿಕೊಳ್ಳಬೇಕು ಎಂಬ ಸಂದೇಶ ಸಾರುವ ತ೦ದೆ, ಉದ್ದೇಶದಿಂದ ಈ ಯಾತ್ರೆ ಕೈಗೊಳ್ಳುತ್ತಿದ್ದು,
ತಾಯಿಯನ್ನು ವೃದ್ಯಾಪ್ಯದಲ್ಲಿ ರೀತಿಯಲ್ಲಿ ಉತ್ತಮ ನೋಡಿಕೊಳ್ಳುವಂತೆ ಇಂದಿನ ಯುವ ಸಮುದಾಯಕ್ಕೆ ಕರೆ ನೀಡಿದರು. ಬಗ್ಗೆ ತಾಯಿ ಚೂಡಾ ರತ್ನಾರವರನ್ನು ಮಾತನಾಡಿಸಿದಾಗ ನನ್ನ ಮಗನ ಪ್ರೀತಿ ವಾತ್ಸಲ್ಯ ಪ್ರಯಾಣದ ಎಲ್ಲಾ ಆಯಾಸವನ್ನು ಮರೆಸಿದೆ.
ಅದೇ ನನ್ನ ಆರೋಗ್ಯವನ್ನು ನೋಡಿಕೊಂಡಿದೆ ಎoದು ಸಂತಸದಿಂದ ನುಡಿಯುತ್ತಾ ಹೆತ್ತ ಮಕ್ಕಳು ಈ ನೋಡಿಕೊಂಡರೆ ಅದೇ ನಮ್ಮಸೌಭಾಗ್ಯ, ಹೆಮ್ಮೆ ಎಂದರು. ಸಾಗರ ನಗರಕ್ಕೆ ಆಗಮಿಸಿದ ಇವರನ್ನು ನಮ್ಮ ವಾಹಿನಿಯ ಪರವಾಗಿ ಸಾಗರ ಉಪನೀರೀಕ್ಷಕರಾದ ಶ್ರೀ ಗೋಪಾಲ ಕೃಷ್ಣ ನಾಯಕ್ ಹಾಗೂ ಶ್ರೀಮತಿ ರಾಜನಂದಿನಿ ಕಾಗೋಡುರವರು ಸನ್ಮಾನಿಸಿದರು ,,ಇ ಸಮಯದಲ್ಲಿ ಅರಕ್ಷಕ ಇಲಾಖೆಯ ಸಿಂಬಂದಿಗಳು ಹಾಜರಿದ್ದರು.
ಸಾಗರದಿಂದ ಶಿವಮೊಗ್ಗ ಹೊಗಿ ಅಲ್ಲಿಂದ ಹಾಸನಾಂಬೆಯ ದರುಶನ ಮಾಡಿ ಅಲ್ಲಿಂದ ಮುಂದೆ ಪ್ರಯಾಣ ಬೇಳಸುವುದು ಎಂದ ತಿಳಿಸಿದರು.
ವರದಿ: ರಾಘವೇಂದ್ರ ತಾಳಗುಪ್ಪ