ಮಲೆನಾಡಿನ ಹೃದಯವಂತ…
ಆಗದ ಕೆಲಸಕ್ಕೆ ಸಾವಿರಾರು ಲಕ್ಷಾಂತರ ರೂಪಾಯಿಗಳನ್ನು ಕಸಿದುಕೊಳ್ಳುವವರ ಬಗ್ಗೆ ನಾವು ಕೇಳಿರುತ್ತೇವೆ…ಆದರೆ ತಮಗಿಷ್ಟ ಬಂದಷ್ಟು ಕೊಡಿ ಎಂಬಂತಹ ಮಾತುಗಳು ಇತ್ತೀಚಿನ ದಿನಗಳಲ್ಲಿ ತೀರಾ ವಿರಳ…ಇದರ ಮಧ್ಯೆ ಮಲೆನಾಡಿನ ಹೃದಯ ಭಾಗ ಶೃಂಗೇರಿ ಧನ್ವಂತರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಂಜುನಾಥ ಹೊಳೆಕೊಪ್ಪರವರ ಬಗ್ಗೆ ತಿಳಿದುಕೊಳ್ಳೋಣ.
ಈಗಿನ ಕಾಲದಲ್ಲೂ ಇಂತಹ ನಿಸ್ವಾರ್ಥ ಸೇವಾ ಮನೋಭಾವದವರು ಇದ್ದಾರೆ ಎಂಬುವುದು ನಂಬಲಸಾಧ್ಯ…ಇಂದು ಎಲ್ಲಾ ಕಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ… ನಮಗೆ ಎಷ್ಟು ಸಿಕ್ಕರೂ ಸಾಲದು ಯಾಮಾರಿಸುವುದೇ ಜೀವನದ ಧರ್ಮ ಎನ್ನುವ ಸಮಾಜ ಇಂತಹ ಸಂದರ್ಭದಲ್ಲೂ ಸೇವೆ ಅಂತ ಮಾಡುವವರನ್ನು ನೋಡಿದಾಗ ಆಶ್ಚರ್ಯ ಎನಿಸುತ್ತದೆ…ಶೃಂಗೇರಿಯ ಅಭಿನವ ವಿದ್ಯಾತೀರ್ಥದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಮಂಜುನಾಥ ಹೊಳೆಕೊಪ್ಪ ನಮ್ಮ ಮನೆಗೆ ಸುಮಾರು ನಾಲ್ಕೈದು ವರ್ಷಗಳಿಂದ ರಕ್ತಪರೀಕ್ಷೆಗೆ ಆಗಾಗ್ಗೆ ಬರುತ್ತಾರೆ…ಬಂದು ಹೋದ ಚಾರ್ಜ್ ತೆಗೆದುಕೊಳ್ಳುವುದಿಲ್ಲ… ಇಂದು ಮನೆಗೆ ಬಂದು ಕೆಲಸ ಆಗದಿದ್ದರೂ ಬಂದ ಚಾರ್ಜ್ 250-300ರೂ. ಮಾಡುತ್ತಾರೆ…(ಎಲ್ಲರೂ ಅಲ್ಲದಿರಬಹುದು)ಸಾಮಾನ್ಯವಾಗಿ ಹಾಗಿರುವಾಗ ಅದೇ ಚಾರ್ಜ್ ಗೆ ಮನೆಗೆ ತಂದುಕೊಡುವ ಜೊತೆಗೆ ನಯವಾದ ಮಾತುಗಳ ಮೂಲಕ ಮನಸ್ಸಿಗೂ ಸಂತೋಷ ಪಡಿಸುವ ಕಾರ್ಯ ಮೆಚ್ಚುವಂತದ್ದು…ಇನ್ನೂ ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮಾಡಿಕೊಂಡಾಗ ಅಲ್ಲಿ OT ರೂಂ ನಿಂದ ಗಮನಿಸಿದ್ದ ಪ್ರಶಾಂತ್ ಎಂಬುವವರು ಎರಡು ದಿನಕ್ಕೊಮ್ಮೆ ಡ್ರೆಸ್ಸಿಂಗ್‌ಗೆ ಮನೆಗೆ ಬರಲು ಕೋರಿ ಕೊಂಡಾಗ ಕ್ಲಪ್ತ ಸಮಯಕ್ಕೆ ಬಂದು ಡ್ರೆಸ್ಸಿಂಗ್ ಮಾಡಿ ಹಣ ಕೇಳಿದರೆ ಎಷ್ಟಾದರೂ ಕೊಡಿ(ಬಹಳ ಕಡಿಮೆ) ಎಂಬ ಅತ್ಯಂತ ಕಾಳಜಿಯಿಂದ ಅವರು ಮಾಡುವ ಕೆಲಸ ನಿಜವಾದ ಸೇವೆ… ನಮ್ಮ ತಾಲ್ಲೂಕು ಅಲ್ಲದೇ ಕೊಪ್ಪ ತಾಲ್ಲೂಕಿನವರೆಗೂ ಹಾಸಿಗೆ ಹಿಡಿದವರಿಗೆ ಸಮಯಕ್ಕೆ ಸರಿಯಾಗಿ ಹೋಗಿ ಅವರ ಸೇವೆ ನೋಡಿದರೆ ಇಂತಹ ಕಾಲದಲ್ಲೂ ಇಂತವರು ಇದ್ದಾರಲ್ಲ ಅನಿಸುತ್ತದೆ…ರೋಗಿಗಳು ಗುಣವಾಗುವುದನ್ನೇ ಉದ್ಧೇಶವಾಗಿಟ್ಟುಕೊಂಡು ಮುತುವರ್ಜಿ ಜೊತೆಗೆ ಅತ್ಯಂತ ಸಹನೆಯ ಮಾತುಗಳು ನಿಜಕ್ಕೂ ಆಶ್ಚರ್ಯ…ಎಂತೆಂತವರಿಗೋ ಸನ್ಮಾನ,ಅಭಿನಂದನೆ ಮಾಡುವಾಗ ಜೀವನಾಧಾರ ವೃತ್ತಿಗಳಲ್ಲೂ ಸೇವಾ ಮನೋಭಾವಕ್ಕೆ ಸೈ ಎನ್ನಲೇಬೇಕು…ಇಂತವರನ್ನು ಸಮಾಜ ಗುರುತಿಸಬೇಕಾಗಿದೆ…ಅದು ಯುವ ಪೀಳಿಗೆಯಲ್ಲಿ ಇಂತಹ ಸೇವಾ ಮನೋಭಾವ ಮೆಚ್ಚತಕ್ಕದ್ದು…ಇಂದು ದೊಡ್ಡ ಕೆಲಸಗಳಾದರೆ ಕೂಡಲೇ ಬರುವ ಸಣ್ಣ ಕೆಲಸಗಳಿಗೆ ಪುರುಸೊತ್ತಾಗದವರೇ ಹೆಚ್ಚಿರುವಾಗ ಸಮಾಜದಲ್ಲಿ ಇಂತಹವರ ಸಂಖ್ಯೆ ಹೆಚ್ಚಾಗಲಿ…ಸಮಾಜ ಇಂತಹವರನ್ನು ಗೌರವಿಸುವಂತೆ ಆಗಲಿ ಎಂದು ಆಶಿಸೋಣ..ಇವರಿಬ್ಬರಿಗೆ ಶುಭವಾಗಲಿ.
ಗಣಿತವನ ಶಿವಶಂಕರ್
ಹವ್ಯಾಸಿ ಬರಹಗಾರರು ಲೇಖಕರು ಚಿಂತನಾ ಬಳಗ
ವರದಿ:- ರಮೀಝ್ ಬಾಳೆಹೊನ್ನೂರು