ಜಿಲ್ಲೆನ್ಯೂಸ್


ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣ ಸಮೀಪ ವಸ್ತು ಸ್ಫೋಟ.

ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣ ಸಮೀಪ ವಸ್ತು ಸ್ಫೋಟ.


(SHIVAMOGA): ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣ ಸಮೀಪ ವಸ್ತು ಸ್ಫೋಟ, ಬಸ್ ನಿಲ್ದಾಣ ಬಳಿ ರಸ್ತೆಯ ಪುಟ್ ಪಾತ್ ನಲ್ಲಿ ನಡೆದ ಘಟನೆ. ಬ್ಲಾಸ್ಟ್ ನ ತೀವ್ರತೆಯಿಂದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಇಬ್ಬರನ್ನು ಶಿಕಾರಿಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಏಕಾಏಕಿ ಸ್ಫೋಟಗೊಂಡಿರುವ ಬ್ಯಾಗ್ ನಲ್ಲಿದ್ದ ವಸ್ತುವು ಬಸ್ ನಿಲ್ದಾಣದಲ್ಲಿದ್ದ ಜನರಿಗೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.


ಸ್ಥಳಕ್ಕೆ ಶಿರಾಳಕೊಪ್ಪ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಕಾರಿಗೆ ಬಳಸುವ ಸ್ಫೋಟಕ ವಸ್ತು ಬ್ಲಾಸ್ಟ್ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ರಾತ್ರಿಯ ಸಮಯ ಬೆಳೆ ನಾಶ ಮಾಡುವ ಹಂದಿ ಶಿಕಾರಿಗೆ ಬಳಸುವ ನಾಡ ಬಾಂಬ್ ಸ್ಫೋಟಗೊಂಡಿರುವ ಶಂಕೆ.

ಈ ಘಟನೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು.

ವರದಿ-ಸಂದೀಪ ಯು.ಎಲ್ ಸೊರಬ

Leave a Reply

Your email address will not be published. Required fields are marked *

Scan the code