ಸ್ಮಶಾನ ಭೂಮಿಯನ್ನು ಮಂಜೂರು ಮಾಡುವಂತೆ ಪಟ್ಟಣದಲ್ಲಿ ಗ್ರಾಮಸ್ಥರಿಂದ ಉಪತಹಶಿಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ.
(KOLARA): ಬಂಗಾರಪೇಟೆ ತಾಲೂಕಿನ ನೆರನಹಳ್ಳಿ ಗ್ರಾಮದ ಸ್ಮಶಾನಭೂಮಿಯನ್ನು ಮಂಜೂರು ಮಾಡುವಂತೆ ಗ್ರಾಮಸ್ಥರು ಹಾಗೂ ಡಿಎಸ್ಎಸ್ ನ ರಾಜ್ಯಾಧ್ಯಕ್ಷ ದಲಿತ್ ಕುಮಾರ್ ನೇತೃತ್ವದಲ್ಲಿ ಉಪತಾಶೀಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದವರು, ಗ್ರಾಮದ ಸರ್ವೆ ನಂಬರ್ 120 ರಲ್ಲಿ ಒಂದು ಎಕರೆ 27 ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡುವಂತೆ ಒತ್ತಾಯ ಮಾಡಿದರು.
ಗ್ರಾಮದಲ್ಲಿ ಇದುವರೆಗೂ ಸ್ಮಶಾನಭೂಮಿ ಇರುವುದಿಲ್ಲ ಪ್ರಸ್ತುತ ಶವ ಸಂಸ್ಕಾರ ಮಾಡಲು ಜಾಗವಿಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೊಡಲೇ ತಾಲೂಕು ಆಡಳಿತ ಸರ್ವೆ ನಂಬರ್ 120 ರಲ್ಲಿ ಒಂದು ಎಕರೆ 27 ಗುಂಟೆ ಸರ್ಕಾರಿ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ್,ಗ್ರಾಮಸ್ಥರಾದ ಸೋಮಶೇಖರ್,ಮುನಿ ವೆಂಕಟಪ್ಪ,ವೆಂಕಟಸ್ವಾಮಿ ಹಾಗೂ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ