ಕ್ರೈಂ ನ್ಯೂಸ್ಚಿಕ್ಕಮಗಳೂರುನ್ಯೂಸ್

ಕಾಫಿನಾಡಿಗೆ ಬಂದಿದ್ದ ಪಂಜಾಬ್ ಮೂಲದ ಮಹಿಳೆ ವೈದ್ಯ ಮೇಲೆ ಅತ್ಯಾಚಾರ ನಡೆಸಿದ ಯೋಗಗುರು

ಕಾಫಿನಾಡಿಗೆ ಬಂದಿದ್ದ ಪಂಜಾಬ್ ಮೂಲದ ಮಹಿಳೆ ವೈದ್ಯ ಮೇಲೆ ಅತ್ಯಾಚಾರ ನಡೆಸಿದ ಯೋಗಗುರು

(CHIKKAMAGALURU): ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಯಲ್ಲಿರುವ ಆಶ್ರಮದಲ್ಲಿ ಎನ್ ಆರ್ ಐ (NRI) ವೈದ್ಯ ಮೇಲೆ ಯೋಗ ಗುರುವಿನಿಂದ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಯೋಗ ಕಲಿಯಲೆಂದು ಮೂರು ತಿಂಗಳ ಹಿಂದೆ ಆಶ್ರಮಕ್ಕೆ ಪಂಜಾಬ್ ಮೂಲದ ಮಹಿಳಾ ವೈದ್ಯೆಯ ಮೇಲೆ ಆಶ್ರಮದ ಯೋಗ ಗುರುವಾದ ಪ್ರದೀಪ್ ಅತ್ಯಾಚಾರ ನಡೆಸಿರುವ ವಿಚಾರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡಿದ್ದರು. ಮೂರು ತಿಂಗಳ ಹಿಂದೆ ಕೇವಲ ಆಶ್ರಮಕ್ಕೆ ಬಂದು ನೆಲೆಸಿದ್ದ ವೈದ್ಯೆ ಯೋಗ ಹೇಳಿಕೊಡುವ ನೆಪದಲ್ಲಿ ಯೋಗದ ಜೊತೆಗೆ ದೈಹಿಕ ಸಂಬಂಧವೂ ಹೊಂದಿದ್ದರು ಎಂದು ತಿಳಿದುಬಂದಿದೆ.

ಯೋಗ ಗುರು ಪ್ರದೀಪ್  ಹಲವು ಮಹಿಳೆಯರ ಜೊತೆ ದೈಹಿಕ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದ ವೈದ್ಯೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾಳೆ.

ಚಿಕ್ಕಮಗಳೂರು ಪೊಲೀಸರು ಯೋಗ ಗುರು ಪ್ರದೀಪ್ ನನ್ನು ಬಂಧಿಸಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಸದ್ಯ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Scan the code