ದನ ನೋಡಿ ಚರಂಡಿಗೆ ಬಿದ್ದ ಯುವಕ ಸಾವು
(SHIVAMOGA): ದನ ಬರುವುದನ್ನು ನೋಡಿ ಹೆದರಿ ಚರಂಡಿಗೆ ಬಿದ್ದ ಯುವಕ ಮೃತಪಟ್ಟಿರುವ ಸೊರಬ ಘಟನೆ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದ ಶೋಕ್ ಸುಹೇಲ್ (18) ಮೃತ ಯುವಕ. ಯಲವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ನೋಡಿ ವಾಪಾಸ್ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಹಿಂಬದಿಯಿಂದ ದನ ಬರುವುದನ್ನು ನೋಡಿ ಹೆದರಿ ಓಡುವ ಯತ್ನದಲ್ಲಿ ರಸ್ತೆ ಪಕ್ಕದ ಚರಂಡಿಗೆ ಬಿದ್ದಿದ್ದಾನೆ. ಪರಿಣಾಮ ತಲೆ ಮತ್ತು ಪಕ್ಕೆ ಭಾಗಕ್ಕೆ ಗಾಯವಾಗಿರುತ್ತದೆ. ತಕ್ಷಣವೇ ಶಿರಾಳಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಶೇಖ್ ಸುಹೇಲ್ ಮೃತಪಟ್ಟಿದ್ದಾನೆ ಎಂದು ಆತನ ತಂದೆ ಸಿಖ್ಬತುಲ್ಲಾ ಅಬ್ದುಲ್ ಜಲೀಲ್ ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಸಂದೀಪ್ ಯು ಎಲ್ ಸೊರಬ