ಅಯೋಧ್ಯ ಆಸ್ತಾ ರೈಲ್ ಹೊಸಪೇಟೆಯಲ್ಲಿ ಕಾರ್ಯಕರ್ತರ ಪ್ರತಿಭಟನೆ.
(VIJAYANAGARA):ಹೊಸಪೇಟೆ: ಅಯೋದ್ಯೆಯಿಂದ ವಾಪಾಸ್ ಬರುವಾಗ ರೈಲು ಹೊಸಪೇಟೆ ನಿಲ್ದಾಣಕ್ಕೆ ಬಂದಾಗ ಕಾರ್ಯಕರ್ತರು ಎಂದಿನಂತೆ ಭಜನೆಯಲ್ಲಿ ನಿರತರಾದಾಗ ಓರ್ವ ಅನ್ಯಕೋಮಿಯ ಯುವಕ ಅವಾಚ್ಯಾ ಶಬ್ದಗಳಿಂದ ನಿಂಧಿಸಿ ರೈಲಿಗೆ ಬೆಂಕಿ ಹಚ್ಚುವುದಾಗಿ ಹೇಳಿದಾಗ ಕೆರಳಿದ ಕಾರ್ಯಕರ್ತರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆದರೇ ಪೊಲೀಸ್ ನವರು ಆತನನ್ನು ಬಂದಿಸದೆ ಅಲ್ಲಿಯೇ ಬಿಡುಗಡೆ ಗೊಳಿಸಿದ್ದು ಕಾರ್ಯಕರ್ತರನ್ನು ರೊಚ್ಚಿಗೇಳಿಸುವಂತಾಯಿತು ತಕ್ಷಣವೇ ರೈಲ್ವೆ ಸ್ಟೇಷನ್ ನಲ್ಲಿ ಪ್ರತಿಭಟನೆ ನೆಡೆಸಿದರು ಕಾರ್ಯಕರ್ತರ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವಹಂತ ತಲುಪಿದಾಗ ರೈಲಿಗೆ ಚಾಲನೆ ನೀಡಿದಾಗ ಕಾರ್ಯಕರ್ತರು 3 ಬಾರಿ ರೈಲಿನ ಚೈನ್ ಎಳೆದು ರೈಲನ್ನು ತಡೆದರು ನಂತರ ಹೊಸಪೇಟೆಯ ಸ್ಥಳೀಯ ವಿ ಎಚ್ ಪಿ ಕಾರ್ಯಕರ್ತರು ಬಂದ ನಂತರ ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ ಮೇಲೆ ಅಯೋದ್ಯೆ ಆಸ್ತಾ ರೈಲು ಹೊಸಪೇಟೆಯಿಂದ ಹೊರಟಿತು.