ಇಸ್ರೋದ ಆದಿತ್ಯ L -1 ಇಂದು ಸೂರ್ಯನಬಳಿಗೆ
( ಬೆಂಗಳೂರು ಸೆಪ್ಟಂಬರ್ – 02 ) ಚಂದ್ರನ ಅಂಗಳದಲ್ಲಿ ಇಸ್ರೋ ಅದೇ ಯಶಸ್ಸಿನಲ್ಲಿ ದೇಶದ ಚೊಚ್ಚಲ ಸೌರ ಮಿಷನ್ ಆದಿತ್ಯ-L1 ಶನಿವಾರ 11:50 ಕ್ಕೆ ಶ್ರೀಹರಿಕೋಟಾದ ಲಾಂಚ್ ಪ್ಯಾಡ್‌ನಿಂದ ಉಡಾವಣೆಯಾಗಲಿದೆ. ಉಡಾವಣಾ ಪೂರ್ವಾಭ್ಯಾಸ ಮತ್ತು ವಾಹನದ ಆಂತರಿಕ ತಪಾಸಣೆ ಎಲ್ಲವೂ ಪೂರ್ಣಗೊಂಡಿದೆ.
(ಭರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) (ISRO) ದೇಶದ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್ -1 ಉಡಾವಣೆಯ ನೇರ ಪ್ರವಾರ ವೀಕ್ಷಿಸಲು ನಗರದ ಬಿಎಂ ಬಿರ್ಲಾ ತಾರಾಲಯದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. (ಬಿಎಂ ಬಿರ್ಲಾ ತಾರಾಲಯದಲ್ಲಿ ಶನಿವಾರ ಆದಿತ್ಯ-ಎಲ್ -1 ಉಡಾವಣೆಯ ಲೈವ್ ಸ್ಟ್ರೀಮಿಂಗ್ ಅನ್ನು ನಾಗರಿಕರು ವೀಕ್ಷಿಸುತ್ತಾರೆ ಸೂರ್ಯ ಮತ್ತು ಆದಿತ್ಯ-ಎಲ್ – 1 ಮಿಷನ್’ ಕುರಿತು ವಿಜ್ಞಾನ ಉಪನ್ಯಾಸ ಕೂಡ ನಡೆಯಲಿದೆ) ಎಂದು ಬಿಎಂ ಬಿರ್ಲಾ ವಿಜ್ಞಾನ ಕೇಂದ್ರ ಮತ್ತು ತಾರಾಲಯದ ನಿರ್ದೇಶಕ ಕೆ ಜಿ ಕುಮಾರ್ ತಿಳಿಸಿದ್ದಾರೆ.
ಸೂರ್ಯನ ವಿವರವಾದ ಅಧ್ಯಯನ ನಡೆಸಲು ಏಳು ವಿಭಿನ್ನ ಪೇಲೋಡ್‌ಗಳನ್ನು ಒಯ್ಯುತ್ತದೆ. ಅದರಲ್ಲಿ ನಾಲ್ಕು ಸೂರ್ಯನ ಬೆಳಕನ್ನು ವೀಕ್ಷಿಸುತ್ತದೆ ಮತ್ತು ಇತರ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಇನ್-ಸಿಟು ನಿಯತಾಂಕಗಳನ್ನು ಅಳೆಯುತ್ತದೆ.