ನ್ಯೂಸ್ಶಿವಮೊಗ್ಗ

ಸಾಗರ ತಾಲೂಕಿನ ಸರ್ಕಾರಿ ಶಾಲೆಯ ಆರಂಭಕ್ಕೆ ಸಕಲ ಸಿದ್ದತೆ.

ಸಾಗರ ತಾಲೂಕಿನ ಸರ್ಕಾರಿ ಶಾಲೆಯ ಆರಂಭಕ್ಕೆ ಸಕಲ ಸಿದ್ದತೆ.

(SHIVAMOGA): ಸಾಗರ ತಾಲೂಕಿನ ಎಲ್ಲಾ ಶಾಲೆಗಳು ಮೇ.29 ರಿಂದ ಶಾಲೆ ಪ್ರಾರಂಭಿಸಲಾಗುವುದು ಎಂದು ಸಾಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಇ. ಪರಶುರಾಮ ರವರು ಮಾತನಾಡಿದರು. ಅದೆ ದಿನದಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ‌ಪುಸ್ತಕಗಳನ್ನು ವಿತರಿಸುವ ಕೆಲಸವನ್ನು ಮಾಡಲಿದ್ದು ಈಗಾಗಲೆ ಸರ್ಕಾರದಿಂದ ಶೇಕಡಾ 65% ಪುಸ್ತಕ ಹಾಗೂ ಸಮವಸ್ತ್ರ ನಮ್ಮಲ್ಲಿ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಸಮವಸ್ತ್ರ ಪುಸ್ತಕ ಬರಲಿದೆ.

ತಾಲೂಕಿನ ಎಲ್ಲಾ ಶಾಲೆಗಳಿಗೂ ತಲುಪಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ‌. ಹಾಗೆಯೆ ಶಾಲೆಯಲ್ಲಿ ಬಣ್ಣ ಹಾಗೂ ಕಟ್ಟಡದ ಕೆಲಸವನ್ನು ಈಗಾಗಲೆ ಮುಗಿಸಿದ್ದು. ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ತಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವ ಕೆಲಸ ಮಾಡಬೇಕು ಎಂದರು.
ಎಸ್.ಎಸ್.ಎಲ್.ಸಿ.ಯಲ್ಲಿ ಕಳೆದ ಸಾಲಿಗಿಂತ ಅತೀ ಹೆಚ್ಚು ವಿದ್ಯಾರ್ಥಿಗಳು ನಮ್ಮ ಸರ್ಕಾರಿ ಶಾಲೆಯಲ್ಲಿ ಪಾಸಾಗಿದ್ದು ನಮ್ಮ ಇಲಾಖೆ ಅದೆ ರೀತಿಯಲ್ಲಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಶಿಕ್ಷಣವನ್ನು ನೀಡಲಿದೆ ಎಂದರು.


ವರದಿ : ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code