ಕೋಲಾರನ್ಯೂಸ್

ಶೋಷಿತ ಜನರ ಒಳತಿಗಾಗಿ ಶ್ರಮಿಸಿದ ಧೀಮಂತ ನಾಯಕ ಅಂಬೇಡ್ಕರ್

ಶೋಷಿತ ಜನರ ಒಳತಿಗಾಗಿ ಶ್ರಮಿಸಿದ ಧೀಮಂತ ನಾಯಕ ಅಂಬೇಡ್ಕರ್

(KOLARA): ಬಂಗಾರಪೇಟೆ: ಸಮಾಜದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ರವರಿಗೆ ನೀಡಿದ ಕಿರುಕುಳ ಬೇರೆಯವರಿಗೆ ನೀಡಿದ್ದರೆ ಅವರು ಸಹಿಯಿಸಿಕೊಳ್ಳುತ್ತಿರಲಿಲ್ಲ ಮಾನಸಿಕ ಹಿಂಸೆಯ ನಡುವೆಯೂ ಶೋಷಿತ ಜನರ ಒಳತಿಗಾಗಿ ಶ್ರಮಿಸಿದ ಧೀಮಂತ ನಾಯಕ ಅಂಬೇಡ್ಕರ್ ಎಂದು ದಲಿತ ಸಮಾಜ ಸೇನೆ ರಾಜ್ಯಧ್ಯಕ್ಷ ಸೂಲಿಕುಂಟೆ ಆನಂದ್ ಹೇಳಿದರು.


ಅವರು ತಾಲೂಕಿನ ಕೆಸರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಲಿಂಗಾಪುರ ಗ್ರಾಮದಲ್ಲಿ ಅಂಬೇಡ್ಕರ್ ಹಾಗೂ ಭಗತ್ ಸಿಂಗ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಂಬೇಡ್ಕರ್ ಎಲ್ಲರಂತೆ ತಾನು ತನ್ನ ಸಂಸಾರ ಎನ್ನುವ ಪದ್ದತಿಗೆ ಕಟ್ಟು ಬಿದ್ದಿದ್ದರೆ ದಲಿತರು, ಹಿಂದುಳಿದ ವರ್ಗದ ಜನರು ಹಾಗೂ ಶೋಷಿತ ಸಮಾಜದವರು ಇಂದು ಸಮಾಜದ ಮುಖ್ಯವಾಹಿನಿಗೆ ಬರುತ್ತಿರಲಿಲ್ಲ ಮತ್ತಷ್ಟು ಶೋಷಣೆಗೆ ಒಳಾಗುತ್ತಿದ್ದರು. ಆದರೆ ಅಂಬೇಡ್ಕರ್ ಎಲ್ಲಾ ವರ್ಗದ ಜನರಿಗೆ ಸಮಾಜದಲ್ಲಿ ಸಮಾನ ಕಾನೂನು ಮೀಸಲಾತಿ ತಂದು ಎಲ್ಲರೂ ಸಹಭಾಳ್ವೆ ಮಾಡುವಂತೆ ಮಾಡಿದ್ದಾರೆ.
ಮಹಿಳೆಯರಿಗೂ ಸಮಾನ ಹಕ್ಕು ದೊರೆಕಿದೆ ಎಂದರೆ ಅದಕ್ಕೆ ಕಾರಣ ಅಂಬೇಡ್ಕರ್ ಸಂವಿಧಾನ ರಚನೆಗೂ ಮೊದಲು ದೇಶದಲ್ಲಿ ಮನೋಧರ್ಮ ಇತ್ತು, ಅದರಲ್ಲಿ ಯಾರಿಗೂ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಇಂದು ಪುರುಷರ ಸಮಾನವಾಗಿ ಅಧಿಕಾರ ಚಲಾಯಿಸಲು ಹಕ್ಕು ನೀಡಿದ್ದೂ ಅಂಬೇಡ್ಕರ್‌ರವರೇ ಆದರೆ ಕೆಲವರು ಪರಿಜ್ಙಾನವಿಲ್ಲದವರು ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ಸೀಮಿತವಾದವರು ಎನ್ನುವ ರೀತಿ ಬಿಂಬಿಸಲಾಗುತ್ತಿದೆ ಎಂದು ಖಂಡಿಸಿದರು. ಅಂಬೇಡ್ಕರ್ ಬಗ್ಗೆ ಜನರಿಗೆ ಅದರಲ್ಲಿಯೂ ಗ್ರಾಮೀಣ ಜನರಿಗೆ ಅರಿವು ಮೂಡಿಸಬೇಕು ಪ್ರತಿ ಗ್ರಾಮದಲ್ಲಿಯೂ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಬೇಕು ಆಗಲೇ ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದರು.


ಅದೇ ರೀತಿ ಭಗತ್ ಸಿಂಗ್ ಒಬ್ಬ ಸ್ವಾತಂತ್ರö್ಯ ಸಂಗ್ರಾಮದ ಕ್ರಾಂತಿಕಾರಿ ಮತ್ತು ಸ್ವಾತಂತ್ರö್ಯ ಹೋರಾಟಗಾರ ಬಾಲ್ಯದಿಂದಲೇ ದೇಶ ಪ್ರೇಮ ಭಗತ್ ಸಿಂಗ್ ಮೇಲೆ ಪ್ರಭಾವ ಬೀರಿತು ಬ್ರಿಟೀಷರ ದಬ್ಬಾಳಿಕೆ ದೌರ್ಜನ್ಯಗಳ ವಿರುದ್ದ ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಭಗತ್ ಸಿಂಗ್ ದೇಶ ಪ್ರೇಮ ಇಂದಿನ ಯುವಕರಿಗೆ ಆದರ್ಶವಾಗಿದೆ, ಎಲ್ಲರೂ ಭಗತ್ ಸಿಂಗ್‌ರ ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಇದೇ ವೇಳೆ ಶಾಲಾ ಮಕ್ಕಳಿಗೆ ಲೇಖನಿ ಸಾಮಾಗ್ರಿಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಚನ್ನದಾಸರ್ ಸಂಘದ ರಾಜ್ಯಾಧ್ಯಕ್ಷ ಚಲಪತಿ, ದಲಿತ ಮುಖಂಡರಾದ ಸಿ.ಜೆ.ನಾಗರಾಜ್, ಐಪಳ್ಳಿ ನಾರಾಯಣಸ್ವಾಮಿ, ವೇಣುಗೋಪಾಲ್, ಬಾಬು, ಕಲಾವಿದ ರವಿಚಂದ್ರ, ಮಾರುತಿ ಪ್ರಸಾದ್, ಕಾಂಗ್ರೆಸ್ ಮಲ್ಲೇಶ ಮುನಿಸ್ವಾಮಿ, ಶಿಕ್ಷಕ ಮುರಳಿ, ಅಪ್ಪಯ್ಯಪ್ಪ ಇತರರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code