ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ 8 ವರ್ಷದ ಬಾಲಕಿ ಮೇಲೆ 52 ವರ್ಷದ ವ್ಯಕ್ತಿಯಿಂದ ಲ್ಯೆಂಗಿಕ ದೌರ್ಜನ್ಯ.
(SHIVAMOGA): ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಎಂಟು ವರ್ಷದ ಬಾಲಕಿ ಮೇಲೆ 52 ವರ್ಷದ ವ್ಯಕ್ತಿಯೊಬ್ಬನು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಈ ಘಟನೆ ವರದಿಯಾಗಿದೆ.
ಆರೋಪಿಯನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚಂದ್ರಪ್ಪ (52) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಹೊಸನಗರ ಸಮಾಜ ಕಲ್ಯಾಣ ಇಲಾಖೆಯಲ್ಲಿ ನೌಕರನಾಗಿದ್ದಾನೆ.
ಭಾನುವಾರ ಸಂಜೆ ಸಮಯದಲ್ಲಿ ಆರೋಪಿ ಚಂದ್ರಪ್ಪ ನಿಗೆ ಸೇರಿದ ದಿನಸಿ ಅಂಗಡಿಗೆ ಚಾಕೋಲೆಟ್ ಖರೀದಿಸಲು ಬಂದ ಎಂಟು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ನಂತರದಲ್ಲಿ ಈ ವಿಷಯ ಯಾರಿಗೂ ತಿಳಿಸದಂತೆ 10 ರೂ ಹಣ ನೀಡಿ ನಾಳೆ ಬಾ ಮತ್ತಷ್ಟು ಚಾಕೊಲೇಟ್ ಕೊಡುತ್ತೇನೆ ಎಂದಿದ್ದಾನೆ. ಆ ನಂತರದಲ್ಲಿ ಬಾಲಕಿ ಅಳುತ್ತಾ ಮನೆಗೆ ಹೋಗಿ ಪೋಷಕರಿಗೆ ವಿಷಯವನ್ನು ತಿಳಿಸಿದ್ದಾಳೆ.ತಕ್ಷಣ ಬಾಲಕಿಯ ಪೋಷಕರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೋಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಚಂದ್ರಪ್ಪ ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ ರಾಘವೇಂದ್ರ ತಾಳಗುಪ್ಪ