ಕೋಲಾರ ಜಿಲ್ಲೆಯ 11 ಕ್ಷೇತ್ರಗಳಿಗೆ ಕ್ಷೇತ್ರ ವಿಂಗಡನೆ ಮಾಡಬೇಕೆಂದು ಸರ್ಕಾರದಿಂದ ಆದೇಶ ಬಂದಿರುತ್ತದೆ.
(KOLARA): ಬಂಗಾರಪೇಟೆ: ಕೋಲಾರ ಜಿಲ್ಲೆಯ 11 ಕ್ಷೇತ್ರಗಳಿಗೆ ಕ್ಷೇತ್ರ ವಿಂಗಡನೆ ಮಾಡಬೇಕೆಂದು ಸರ್ಕಾರದಿಂದ ಆದೇಶ ಬಂದಿರುತ್ತದೆ. ಇಲ್ಲಿ ಎಂಡಿ ಆಗಿರುವ ಗೋಪಾಲ ಸ್ವಾಮಿಯವರು ಉದ್ದೇಶ ಪೂರಕವಾಗಿ ಸರ್ಕಾರದ ಕಾನೂನನ್ನು ಗಾಳಿಗೆ ತೂರಿ, ಕ್ಷೇತ್ರ ವಿಂಗಡಣೆಯನ್ನು ಮಾಡಿ ರೈತರಿಗೆ ಹಾಗೂ ಹಾಲು ಉತ್ಪಾದಕರಿಗೆ ಮೋಸ ಮಾಡಿದ್ದಾರೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಆರೋಪ ಮಾಡಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಈ ಜಿಲ್ಲೆಯಲ್ಲಿ ಹಾಲು ಒಕ್ಕೂಟದ ಉತ್ಪಾದಕರನ್ನ ಹಾಲು ಕೊಡುವ ರೈತರನ್ನು ಸಂಘಗಳ ಮುಖಾಂತರ ಒಕ್ಕೂಟ ಮಾಡಿಕೊಂಡು ಕೋಚಿ ಮೂಲ್ ನಲ್ಲಿ ದೊಡ್ಡ ಷಡ್ಯಂತ್ರ ಮಾಡುತ್ತಿದ್ದಾರೆ. ಒಂದು ಕುಟುಂಬದ ಮನೆಯಂತೆ ಸರ್ಕಾರಿ ಕ್ಷೇತ್ರವನ್ನು ಮಾಡಿಕೊಂಡಿದ್ದಾರೆ. ಗೋಪಾಲ ಸ್ವಾಮಿಯವರ ಪ್ರಭಾವದಿಂದ ಇದನ್ನ ಬಂಡವಾಳ ಮಾಡಿಕೊಂಡಿರುವ.ಜೆ ಆರ್ ಅಶ್ವತ್ ನಾರಾಯಣ ರವರು ಏಕಾಏಕಿ ಕ್ಷೇತ್ರಗಳು ವಿಂಗಡಣೆ ಆಗಿದೆ ಎಂದು ಆದೇಶ ಮಾಡಿದ್ದಾರೆ. ಜೆ ಆರ್ ಆದೇಶ ಮಾಡಿರುವ ಆದೇಶದ ಇಂದೇ ಅನೇಕ ಆರೋಪಗಳಿವೆ. ಜೆ ಆರ್ ಮಟ್ಟದಲ್ಲಿ ಅನೇಕ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆದಿದೆ ಎಂದು. ಆದರೆ ನನಗೆ ಸಂಪೂರ್ಣ ಮಾಹಿತಿ ಇಲ್ಲ, ಇದರಲ್ಲಿ ಅನೇಕರು ಸಹ ಹಣಕ್ಕೆ ಶಾಮಿಲಾಗಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ ಎಂದರು.
ಇಂದು ಕೋಲಾರ ಜಿಲ್ಲೆಗೆ ಮೋಸ ಮಾಡಿ, ಸಾರ್ವಜನಿಕರಿಗೆ ಮೋಸ ಮಾಡಿ, ಸಾರ್ವಜನಿಕರ ಆಕ್ಷೇಪಗಳನ್ನು ಪಡೆಯದೆ. ಈ ಒಂದು ಕ್ಷೇತ್ರಗಳನ್ನು ವಿಭಜನೆ ಮಾಡಿರುವುದು. ಕಾನೂನು ಬಾಹಿರ ನಾನಾದರೂ ಭಾವಿಸುತ್ತೇನೆ ಎಂದರು. ಎಂ ಡಿ ರವರು ಜನರಿಗೆ, ಸಾರ್ವಜನಿಕರಿಗೆ , ರೈತ ಸಹಕಾರಿ ಹಾಲು ಉತ್ಪಾದಕರ ಸಂಘಗಳಿಗೆ ಮೋಸ ಮಾಡಬೇಕೆಂಬ ಉದ್ದೇಶದಿಂದ ತಮ್ಮ ಪ್ರಭಾವಿತರನ್ನ ಹಾಗೂ ತಮಗೆ ಬೇಕಾದವರನ್ನು ಮತ್ತೆ ಆಯ್ಕೆ ಮಾಡಲು ಸುಲಭವಾಗುವ ರೀತಿಯಲ್ಲಿ ಷಡ್ಯಂತ್ರವನ್ನು ರೂಪಿಸಿ, ಈ ಒಂದು ಕಾರ್ಯಕ್ಕೆ ಎಂಡಿ ಅವರನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಸರ್ಕಾರದ ಜೆ ಆರ್ ರವರನ್ನು ಸಹ ದುರುಪಯೋಗ ಮಾಡಿಕೊಂಡಿದ್ದಾರೆ. ಇದು ರೈತನಿಗೆ ಹಾಗೂ ಹಾಲು ಉತ್ಪಾದಕನಿಗೆ ಕೋಲಾರ ಜನತೆಗೆ ಮಾಡಿರುವಂತಹ ಮೋಸ ಎಂದರು.
ಕನಿಷ್ಠಪಕ್ಷ ಕೋಲಾರ ಜಿಲ್ಲೆಯಲ್ಲಿ ನಾನು ಒಬ್ಬ ಶಾಸಕನಿದ್ದೇನೆ, ನಾನು ಪತ್ರ ಕೊಟ್ಟರು ಸಹ, ಸೌಜನ್ಯ ಕಾದರೂ ಸಹ ಕ್ಷೇತ್ರ ವಿಂಗಡನೆ ಮಾಡುವ ಸಂದರ್ಭದಲ್ಲಿ ನನ್ನ ಗಮನಕ್ಕೆ ತರದೆ. ಷಡ್ಯಂತ್ರವನ್ನು ಮಾಡಿದ್ದಾರೆ. ಹಾಲು ಒಕ್ಕೂಟವನ್ನು ಸ್ವಂತಕ್ಕೆ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಒಂದು ಕಾರ್ಯ ಮಾಡಿದ್ದಾರೆ. ಇದರ ಬಗ್ಗೆ ಈಗಾಗಲೇ ಸಂಬಂಧಪಟ್ಟ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿದ್ದೇನೆ. ಈ ಮೋಸ ಸಂಬಂಧಪಟ್ಟ ಸಚಿವರಿಗೆ ಹಾಗೂ ಜಿಲ್ಲಾ ಮಟ್ಟದ ಉಸ್ತುವಾರಿ ಸಚಿವರ ಗಮನಕ್ಕ ಬರಲಿಲ್ಲ, ಹಾಗೂ ಆಡಳಿತ ಅಧಿಕಾರಿಯಾಗಿರುವ ಎಸಿ ರವರ ಗಮನಕ್ಕೂ ಸಹ ಬಂದಿಲ್ಲ, ಎಂ ಡಿ ಹಾಗೂ ಸಿಬ್ಬಂದಿ ವರ್ಗದವರು ಮೋಸ ಮಾಡಿದ್ದಾರೆ ಎಂದು ಹೇಳಿದರು.
ಇದರಲ್ಲೇ ಇಷ್ಟೊಂದು ಮೋಸ ಮಾಡಿದರೆ ಇನ್ನಷ್ಟು ಕುತಂತ್ರಗಳು ಹಾಲು ಒಕ್ಕೂಟದಲ್ಲಿ ಮಾಡಿರುವುದಿಲ್ಲ ಪ್ರಶ್ನೆ ಮಾಡಿದರು. ಕ್ಷೇತ್ರ ವಿಂಗಡಣೆ ಮಾಡುವುದನ್ನೇ ಮರೆಮಾಚುತ್ತಾರೆ ಎಂದರೆ. ಇದರಲ್ಲೇ ಅಕ್ರಮ ಮಾಡುತ್ತಾರೆ ಎಂದರೆ. ಕೊಚಿಮೂಲ್ ನಲ್ಲಿ ನಡೆಯುವಂತಹ ಎಲ್ಲಾ ಕೆಲಸಗಳಲ್ಲೂ ಸೂತ್ರವಾಗಿ ಇದಿಯಾ ಎಂದರು. ಎಂ ವಿ ಕೆ ಗೋಲ್ಡನ್ ಡೈರಿ ನಿರ್ಮಾಣದಲ್ಲಿ ಎಲ್ಲಾ ದಾಖಲೆಗಳು ಸರಿಯಾಗಿದೆಯಾ. ಗೋಲ್ಡನ್ ಡೈರಿಯ ನಿರ್ಮಾಣದಲ್ಲಿ ಸಂಪೂರ್ಣವಾಗಿ ಒಂದೇ ಕುಟುಂಬ ಕಾರ್ಯನಿರ್ವಹಿಸುತ್ತಿದೆ. ಈ ಡೈರಿ ನಿರ್ಮಾಣದಲ್ಲೂ ಸಹ ಅನೇಕ ಅವ್ಯವಹಾರಗಳು ನಡೆದಿದೆ. ಇದನ್ನೆಲ್ಲಾ ತನಿಖೆ ಮಾಡಬೇಕು ಎಂದು ಸಂಬಂಧಪಟ್ಟ ಸಚಿವರಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಗೋವಿಂದ, ಕೆಯುಡಿಎ ಅಧ್ಯಕ್ಷ ಗೋಪಾಲ ರೆಡ್ಡಿ, ಪುರಸಭೆ ಸದಸ್ಯರಾದ ಸಂಸುದ್ದೀನ್ ಬಾಬು, ಅರುಣಾಚಲಂ ಮಣಿ, ಕೆ ಚಂದ್ರಾರೆಡ್ಡಿ, ರಾಕೇಶ್ ಗೌಡ, ಶಫಿ, ಸಾಧಿಕ್,ಪ್ರಶಾಂತ್, ಅರುಣ್ ಹಾಗೂ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ