Newsಗದಗ

ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಅಭಿಯಾನ

ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಅಭಿಯಾನ

(GADAGA):  ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮವು ಐತಿಹಾಸಿಕ ಪಾರಂಪರಿಕ ಪ್ರದೇಶವಾಗಿದ್ದು ಈ ಪಾರಂಪರಿಕ ಗ್ರಾಮದಲ್ಲಿ ಸಾಕಷ್ಟು ಶಿಲೆಗಳು, ಶಾಸನಗಳು ಮತ್ತು ಪ್ರಾಚ್ಯಾವಶೇಷಗಳು ಗ್ರಾಮದಲ್ಲಿ ಹಾಗೂ ಗ್ರಾಮಸ್ಥರ ಮನೆಗಳಲ್ಲಿ ಲಭ್ಯವಿರುತ್ತವೆ.

ಐತಿಹಾಸಿಕ ಲಕ್ಕುಂಡಿಯನ್ನು ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಪಟ್ಟಿಗೆ ಸೇರಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸುವ ಕಾರ್ಯ ಪರಿಣಾಮಕಾರಿಯಾಗಬೇಕು. ಈ ನಿಟ್ಟಿನಲ್ಲಿ ಪೂರಕ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಂತಹ ಅವಶೇಷಗಳನ್ನು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿಪ್ರಾಧಿಕಾರ ಜೊತೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಲಕ್ಕುಂಡಿ ಗ್ರಾಮದಲ್ಲಿ 10 ತಂಡಗಳನ್ನು ಅಭಿಯಾನದ ರೂಪದಲ್ಲಿ ಗ್ರಾಮದ ಮನೆ, ಕಟ್ಟೆ, ತಿಪ್ಪಿ, ಒಳಗಟ್ಟಿ ಇತರೆಡೆಗಳಲ್ಲಿರುವ ಪ್ರಾಚ್ಯಾವೇಶಗಳನ್ನು ಸಂಗ್ರಹಿಸಲು ನಿರ್ದೇಶಿಸಲಾಗಿದೆ.

 

ಈ ನಿಟ್ಟಿನಲ್ಲಿ ನವೆಂಬರ್ 22 ರಿಂದ 24 ರವರೆಗೆ ಮೂರು ದಿನಗಳ ಕಾಲ ಲಕ್ಕುಂಡಿ ಪಾರಂಪರಿಕ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ (ಸಂಗ್ರಹಣಾ ಅಭಿಯಾನವನ್ನು) ಅನ್ವೇಷಣೆಯನ್ನು ಹಮ್ಮಿಕೊಳ್ಳಲಾಗಿದೆ.

ತಂಡಗಳ ವಿವರ ಇಂತಿದೆ: ವಾರ್ಡ ಸಂಖ್ಯೆ 5 ಕರಿಯವರ ಓಣಿ, ತಹಶೀಲ್ದಾರರ ಓಣಿ ವ್ಯಾಪ್ತಿಯಲ್ಲಿ ರಾಜ್ಯದ ಕಾನೂನು, ನ್ಯಾಯ ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿ ಅಧ್ಯಕ್ಷರಾದ ಎಚ್.ಕೆ.ಪಾಟೀಲ ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶ .ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿಯ ಸದಸ್ಯರಾದ ಸಿದ್ಧಲಿಂಗೇಶ್ವರ ಪಾಟೀಲ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ.ಶರಣು ಗೋಗೇರಿ, ಗದಗ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ವಿ.ನಡುವಿನಮನಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪೀರಸಾಬ ನದಾಫ್ , ಶ್ರೀಮತಿ ರಜಿಯಾಬೇಗಂ ಆರ್ ತಹಶೀಲ್ದಾರ, ಶ್ರೀಮತಿ ಅನ್ನಪುರ್ಣ ರಿತ್ತಿ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ ಸಂಖ್ಯೆ 9 , ಕುಂಬಾರ ಓಣಿ ಕಮತರ ಓಣಿ ಮತ್ತು ಗೌರಿ ಓಣಿ ವ್ಯಾಪ್ತಿಯಲ್ಲಿ ನರಗುಂದ ಶಾಸಕರಾದ ಸಿ.ಸಿ.ಪಾಟೀಲ ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್. ನೀಲಗುಂದ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾ ಮೆಣಸಿನಕಾಯಿ, ಲಲಿತಾ ಗದಗಿನ, ವೀರಣ್ಣ ಮಲ್ಲಪ್ಪ ಚಕ್ರಸಾಲಿ, ಮಹಾಂತೇಶ ಕಮತರ, ಶಿವಪ್ಪ ಬಳಿಗೇರ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ ಸಂಖ್ಯೆ 2 ರ ಅಂಬಕ್ಕಿಯವರ ಓಣಿ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಸಲ್ಮಾ ಫಾಹೀನ್ ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ ಮೀನಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ ಸಿ ಭಾವಿ , ಶ್ರೀಮತಿ ಅನಸವ್ವ ಅಂಬಕ್ಕಿ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ 8 ರ ಅನ್ನದಾನೇಶ್ವರ ನಗರ, ಕುರುಬರ ಓಣಿ ಮತ್ತು ಬಜಾರ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಕೆ.ವಿ.ರಾಜೇಂದ್ರ ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ , ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ವಿರುಪಾಕ್ಷಪ್ಪ ಬೆಟಗೇರಿ, ಶ್ರೀಮತಿ ನೀಲವ್ವ ಬಂಡಿ, ಶ್ರೀಮತಿ ಶಾಂತವ್ವ ಮಣಕವಾಡ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ ಸಂಖ್ಯೆ 3 ಗೊಲ್ಲರ ಓಣಿ ಕಲ್ಮೇಶ್ವರ ನಗರ, ಕೊರವರ ಓಣಿ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಉಪವಿಭಾಗಾಧಿಕಾರಿ ಎಂ. ಗಂಗಪ್ಪ, ತಹಶೀಲ್ದಾರರಾದ ಶ್ರೀನಿವಾಸ ಕುಲಕರ್ಣಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ರೋಷನಬಿ ನದಾಫ್ , ಬಸವರಾಜ ಹಟ್ಟಿ, ಕುಬೇರಪ್ಪ ಬೆಂತೂರ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ ಸಂಖ್ಯೆ 6 ಮಲ್ಲಿಕಾರ್ಜುನ ಗುಡಿ ಓಣಿ , ಯರಗುಡಿಯವರ ಓಣಿ ಮತ್ತು ಬಜಾರ್ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಭರತ್ ಎಸ್ ಅವರು ತಂಡದ ಮುಖ್ಯಸ್ಥರಾಗಿದ್ದು , ಸಂಚಾಲಕರಾಗಿ ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಅಮೀನಾ ಹುಬ್ಬಳ್ಳಿ ಹಾಗೂ ಬಸವರಾಜ ಯಲಿಶಿರುಂದ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ ಸಂಖ್ಯೆ 1 ಗೌಡ ಓಣಿ ವ್ಯಾಪ್ತಿಯಲ್ಲಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ ಅವರು ತಂಡದ ಮುಖ್ಯಸ್ಥರಾಗಿದ್ದು ಹೆಚ್ಚುವರಿ ಪೊಲೀಸ ವರಿಷ್ಟಾದಿಕಾರಿ ಎಂ.ಬಿ.ಸಂಕದ ಹಾಗೂ ಗ್ರಾ.ಪಂ. ಸದಸ್ಯರಾದ ಪುಷ್ಪಲತಾ ಪಾಟೀಲ, ಸುಮಿತ್ರವ್ವ ರೋಣದ , ರೇವಣಸಿದ್ಧಪ್ಪ ಮುಳಗುಂದ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ ಸಂಖ್ಯೆ 7 ಕುರುಬರ ಓಣಿ ವ್ಯಾಪ್ತಿಯಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ದೇವರಾಜು ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ , ಪುರಾತತ್ವ ಮತ್ತುಸಂಗ್ರಹಾಲಯ ಪರಂಪರೆ ಇಲಾಖೆಯ ಕ್ಯೂರೇಟರ್ ರಾಜಾರಾಮ್ ಹಾಗೂ ಗ್ರಾ.ಪಂ. ಸದಸ್ಯರಾದ ಶ್ರೇಯಾ ಕಟಿಗಾರ, ಹನುಮಂತಪ್ಪ ಬಂಗಾರಿಯವರ, ಲಕ್ಷ್ಮಣ ಗುಡಸಲವಾಸಿ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ ಸಂಖ್ಯೆ 4 ನದಾಫ್ ಗಲ್ಲಿ ,ಬಿನ್ನಾಳ ಬಸವೇಶ್ವರ ಓಣಿ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಕುಲಪತಿ ಗಳು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಗ್ರಾ. ಪಂ.ರಾ. ವಿಶ್ವ ವಿದ್ಯಾಲಯದ ವಿಶೇಷಾಧಿಕಾರಿ ಉಮೆಶ ಬಾರಕೇರ ಹಾಗೂ ಗ್ರಾ.ಪಂ. ಸದಸ್ಯರಾದ ಫಕೀರವ್ವ ಬೇಲೇರಿ, ಚಂದ್ರವ್ವ ರಿತ್ತಿ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ ಸಂಖ್ಯೆ 10 ಕಟಗಿಯವರ ಓಣಿ ಹಿರೇಹಾಳರವರ ಓಣಿ, ಅನ್ನದಾನೇಶ್ವರ ನಗರ ವ್ಯಾಪ್ತಿಯಲ್ಲಿ ಲಕ್ಕುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಲಕ್ಕುಂಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಕುಮಾರ ಭಜಂತ್ರಿ, ಹಾಗೂ ಗ್ರಾ.ಪಂ. ಸದಸ್ಯರಾದ ಗಂಗವ್ವ ಪೂಜಾರ, ಈರವ್ವ ಛಬ್ಬರಭಾವಿ, ರುದ್ರಪ್ಪ ಮುಸ್ಕಿನಭಾವಿ ಅವರನ್ನು ತಂಡವು ಒಳಗೊಂಡಿದೆ.

ಪ್ರತಿ ತಂಡಗಳಿಗೆ ಪ್ರತ್ಯೇಕವಾಗಿ ಇತಿಹಾಸ ಉಪನ್ಯಾಸಕರುಗಳನ್ನು ಹಾಗೂ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ.

ನವೆಂಬರ್ 22 ರಿಂದ 24 ರವರೆಗೆ ಜರುಗುವ ಲಕ್ಕುಂಡಿ ಪಾರಂಪರಿಕ ಪ್ರದೇಶ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಸಂಗ್ರಹಣಾ ಅಭಿಯಾನದ ವೇಳಾಪಟ್ಟಿ ಈ ಕೆಳಗಿನಂತಿದೆ:

ನವೆಂಬರ್ 22 ರಂದು ಬೆ 9.30 ಗಂಟೆಗೆ ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸುವ ಕುರಿತು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ , ಸ್ವಯಂ ಸೇವಕರುಗಳಿಗೆ ಹಾಗೂ ತಂಡದ ಸದಸ್ಯರುಗಳು ತರಬೇತಿಯಲ್ಲಿ ಭಾಗವಹಿಸುವುದು.

ನವೆಂಬರ್ 22 ರಂದು ಮಧ್ಯಾಹ್ನ 3 ಗಂಟೆಗೆ ಲಕ್ಕುಂಡಿ ಗ್ರಾಮದ ಕ್ಷೇತ್ರ ಕಾರ್ಯಕ್ಕೆ ತೆರಳಿ ತಮಗೆ ವಹಿಸಿರುವ ಸ್ಥಳ ಹಾಗೂ ಲಭ್ಯವಿರಬಹುದಾದ ಪ್ರಾಚ್ಯಾವಶೇಷಗಳನ್ನು ಗುರುತಿಸುವುದು.

ನವೆಂಬರ್ 23 ರಂದು ಲಕ್ಕುಂಡಿ ಗ್ರಾಮದಲ್ಲಿ ಪ್ರಾಚ್ಯವಸ್ತುಗಳ ಸಂಗ್ರಹಣೆ ಮತ್ತು ಶೇಖರಣೆ ಕುರಿತು ಮನೆ-ಮನೆ ಸಮೀಕ್ಷೆ ಕೈಗೊಳ್ಳುವುದು ಹಾಗೂ ಸಮೀಕ್ಷೆಯ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಕ್ರೂಢೀಕರಿಸುವುದು.

ನವೆಂಬರ್ 24 ರಂದು ಲಕ್ಕುಂಡಿ ಗ್ರಾಮದಲ್ಲಿ ಅಭಿಯಾನದ ತಂಡದವರೊಂದಿಗೆ ಹಿಂದಿನ ದಿನ ಸಮೀಕ್ಷೆಯಲ್ಲಿ ಗುರುತಿಸಲಾದ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸುವುದು.

ನವೆಂಬರ್ 22 ರಿಂದ 24 ರವರೆಗೆ ಜರುಗುವ ಪ್ರಾಚ್ಯಾವಶೇಷಗಳ ಅನ್ವೇಷಣೆ ಅಭಿಯಾನವನ್ನು ತಂಡದವರು ಪರಸ್ಪರ ಸಮನ್ವಯತೆ ಸಾಧಿಸಿ ಸಂಪೂರ್ಣ ಯಶಸ್ವಿಗೊಳಿಸಲು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

Scan the code