ಮಕ್ಕಳು ಬಿಳಿ ಹಾಳೆ ಇದ್ದಹಾಗೆ, ನಿಮ್ಮ ಮಕ್ಕಳು ನಿಮ್ಮ ಭವಿಷ್ಯದ ಸಂಕೇತ.
(SHIVAMOGA): ಸೊರಬ: ಮಕ್ಕಳು ಬಿಳಿ ಹಾಳೆ ಇದ್ದಹಾಗೆ, ನಿಮ್ಮ ಮಕ್ಕಳು ನಿಮ್ಮ ಭವಿಷ್ಯದ ಸಂಕೇತಗಳು, ಅವರು ನಿಮ್ಮ ಕನಸಿನ ಕೂಸುಗಳು. ಅವರನ್ನು ಸಂಸ್ಕಾರಯುತವಾಗಿ ಬೆಳೆಸಿ, ಸಮಾಜಕ್ಕೆ ಪೂರಕವಾಗಿ ಬೆಳೆಸಿ ಎಂದು ಕೃಷ್ಣಮೂರ್ತಿ ಎಂ. ಪಿ. ಹೇಳಿದರು.
ಪಟ್ಟಣದ ಖ್ಯಾತ ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್ನ ಶೈನಿಂಗ್ ಸ್ಟಾರ್ ಕಿಡ್ಸ್ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳ ಶಿಕ್ಷಣದ ಅವಧಿಯಲ್ಲಿ ಪೋಷಕರ ಕೆಲವು ತ್ಯಾಗ ಅವಶ್ಯಕ, ನೀವು ಮೊಬೈಲ್, ಟಿವಿ ವೀಕ್ಷಣೆ ಕಡಿಮೆ ಮಾಡಿದರೆ ಮಕ್ಕಳು ಕೂಡ ಅದರತ್ತ ಆಕರ್ಷಿತರಾಗುವುದಿಲ್ಲ ಎಂಬುದನ್ನ ಅರಿತುಕೊಂಡು ಅವರ ಮನೊವಿಕಾಸಕ್ಕೆ ಮುಂದಾಗಿ ಎಂದರು.
ನಿಮ್ಮ ಕನಸನ್ನ ನಿಮ್ಮ ಮಕ್ಕಳು ನೆರವೆರಿಸುವಂತೆ ಬೆಳೆಸಿ, ಅವರಿಗೆ ಯಾವುದು ಸರಿ ತಪ್ಪು ತಿಳಿಸಿಕೊಡಿ. ನೀಡುವ ಶಿಕ್ಷೆ ಮತ್ತೆ ತಾನು ತಪ್ಪು ಮಾಡಬಾರದು ಎಂಬಂತಿರಬೇಕೆ ಹೊರತು ಘಾಸಿಗೊಳ್ಳುವಂತಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶ್ರೀ ಷಣ್ಮುಖಾಚಾರ್ ಎನ್., ಶಿಕ್ಷಕರು ಅಧ್ಯಕ್ಷರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸೊರಬ, ಮಾತನಾಡಿ, ಗುಣಾತ್ಮಕ ಶಿಕ್ಷಣಕ್ಕೆ ಶಿಕ್ಷಕರಷ್ಟೆ ಅಲ್ಲ ಪೋಷಕರ ಶ್ರಮವೂ ಅವಶ್ಯ, ಮನೆಯಿಂದಲೇ ಅವರಿಗೆ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸಬೇಕು. ಮಾನವೀಕ ಮೌಲ್ಯದ ಗುಣಗಳನ್ನು ಪರಿಚಯಿಸಬೇಕು ಎಂದು ತಿಳಿಸಿದರು.
ಸಂಸ್ಕಾರಯುತ ಶಿಕ್ಷಣ ಮಕ್ಕಳ ಮನೋದೈಹಿಕ ದೃಢತೆಗೆ ನೆರವಾಗುತ್ತದೆ. ಗುಣಾತ್ಮಕ ವಿವೇಚನೆಗಳು ಅವರಿಗೆ ನಿಮ್ಮಿಂದಲೆ ದೊರಕುವಂತಾಗಬೇಕು ಎಂದರು.
ಶ್ರೀ ರಾಜು ಹಿರಿಯಾವಲಿ ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ಸೊರಬ ಕಾರ್ಯಕ್ರಮವನ್ನು ಉದ್ಘಾಟಿಸಿದರು,
ಶ್ರೀ ದೇವಿ ಸೌಂಡ್ಸ್ ಅವರ ವರ್ಣಮಯ ವೇದಿಕೆಯಲ್ಲಿ ಭಾರತೀಯ ಸಾಂಸ್ಕೃತಿಕ ಮೌಲ್ಯಗಳ ಹಾಡುಹಸೆ,ಗೀತಗಾಯನ, ನೃತ್ಯ, ಏಕಪಾತ್ರಾಭಿನಯ ಮೊದಲಾದ ಸುಪ್ತ ಚಟುವಟಿಕೆಗಳು ಪ್ರೀ ಪ್ರೈಮರಿ ಮಕ್ಕಳಿಂದ ಅನಾವರಣಗೊಂಡವು.
ಮುಖ್ಯ ಅತಿಥಿಗಳಾಗಿ ಶ್ರೀ ಆಸೀಫ್ ಶುಂಠಿ ವ್ಯಾಪರಸ್ತರು ಸೊರಬ, ಶ್ರೀಮತಿ ಪ್ರೇಮಾ ಟೋಕಪ್ಪ ಸದಸ್ಯರು ಪುರಸಭೆ, ಸೊರಬ, ಶ್ರೀ ಮಧುರಾಯ ಜಿ. ಶೇಟ್ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಪುರಸಭೆ, ಸೊರಬ, ಶ್ರೀಮತಿ ಸುಧಾ ಸಿ.ಆರ್.ಪಿ., ಪಿಡಬ್ಲ್ಯೂಡಿ ಕ್ಲಸ್ಟರ್, ಸೊರಬ,ಶ್ರೀ ನಾಗರಾಜ್ ಗುತ್ತಿ ಉದ್ಯಮಿಗಳು, ಸೊರಬ,ಶ್ರೀ ಕೃಷ್ಣಮೂರ್ತಿ ಗುಡಿಗಾರ್ ಮಾಜಿ ಸದಸ್ಯರು ಪಟ್ಟಣ ಪಂಚಾಯತ್, ಸೊರಬ,
ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಎಂ. ಪಿ. ಮುಖ್ಯ ಶಿಕ್ಷಕಿ ಕಲ್ಪನಾ ರಾಘವೇಂದ್ರ, ಶಿಕ್ಷಕಿಯರಾದ ಶ್ವೇತ, ಗ್ರೀಷ್ಮ, ಪ್ರಿಯಾಂಕಾ, ಹಾಗೂ ಸಿಬ್ಬಂದಿ, ಪೋಷಕ ವರ್ಗದವರು ಇದ್ದರು.
ವರದಿ: ಮಧು ರಾಮ್ ಸೊರಬ