ದತ್ತ ಜಯಂತಿ ಅಂಗವಾಗಿ ಬಾಳೆಹೊನ್ನೂರಿನಲ್ಲಿ ಜಿಲ್ಲಾ ಮಟ್ಟದ ಛದ್ಮ ವೇಶ ಸ್ಪರ್ದೆ
(CHIKKAMAGALURU): ಮಕ್ಕಳಲ್ಲಿ ಹಿಂದೂ ಧಾರ್ಮಿಕ ಪ್ರಜ್ಞೆ ಜಾಗೃತ ಗೊಳಿಸುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನೂರಿನ ವಿಶ್ವಹಿಂದೂ ಪರಿಷತ್ ಬಜರಂಗದಳ ಹಮ್ಮಿಕೊಳ್ಳುತ್ತಿರುವ ಜಿಲ್ಲಾ ಮಟ್ಟದ ಹಿಂದು ದೇವರ ಮತ್ತು ಹಿಂದೂ ನಾಯಕರ ಛದ್ಮವೇಶ ಸ್ಪರ್ಧೆಯು ಇದೇ ಮುಂಬರುವ 12-12-2024 ರಂದು ಸಂಜೆ 6.30 ಕ್ಕೆ ಬಾಳೆಹೊನ್ನೂರಿನ ಜೆ ಸಿ ಸರ್ಕಲ್ ನಲ್ಲಿ ದತ್ತಮಾಲಾ ಮತ್ತು ದತ್ತಜಯಂತಿ ಅಂಗವಾಗಿ ನೆಡೆಯಲಿರುವ ಧಾರ್ಮಿಕ ಸಭೆಯಲ್ಲಿ ನೆಡೆಯಲಿದೆ ಎಂದು ಬಾಳೆಹೊನ್ನೂರು ಬಜರಂಗದಳ ಪ್ರಖಂಡ ಸಂಯೋಜಕ್ ಅಣ್ಣಪ್ಪ ಹೇರೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲು ಹೋಬಳಿ ಮಟ್ಟದಲ್ಲಿ ನೆಡೆಯುತಿದ್ದ ಈ ಛದ್ಮವೇಶ ಸ್ಪರ್ದೆಗೆ ಮಕ್ಕಳ ಪೋಷಕರ ಉತ್ಸಾಹ ಗಮನಿಸಿ ತಾಲ್ಲೂಕು ಮಟ್ಟಕ್ಕೆ ವಿಸ್ತರಿಸಲಾಯಿತು ನಂತರ ಕಳೆದ ವರ್ಷದಿಂದ ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿದ್ದು ತೀರ್ಪುಗಾರರಿಗೆ ಕಷ್ಟ ವೆನಿಸುವಷ್ಟು ಚೆಂದವಾಗಿ ಮಕ್ಕಳನ್ನು ಅಲಂಕರಿಸಿಕೊಂಡು ಬರುತ್ತಿರುವುದು ಪಾಲಕ ಪೋಷಕರ ಧಾರ್ಮಿಕ ಶ್ರದ್ದೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಹಾಗಾಗಿ ಪೋಷಕರಿಗೆ ಅಲಂಕರಿಸಲು ಮತ್ತು ಬಂದು ಹೋಗಲು ತಗಲುವ ವೆಚ್ಚ ಹೆಚ್ಚಾಗುವುದನ್ನು ಗಮನಿಸಿ ಬಹುಮಾನ ಮೊತ್ತವನ್ನು ಹೆಚ್ಚಿಸಿದ್ದು ಪ್ರಥಮ ಬಹುಮಾನ ರೂ 3000 ಹಾಗೂ ಪಾರಿತೋಷಕ ಹಾಗೂ ಪ್ರಮಾಣ ಪತ್ರ, ದ್ವಿತೀಯ ಬಹುಮಾನ 2000 ರೂ ನಗದು ಪಾರಿತೋಷಕ ಮತ್ತು ಪ್ರಮಾಣ ಪತ್ರ, ತೃತಿಯ ಬಹುಮಾನ 1000 ರೂ ನಗದು ಪಾರಿತೋಷಕ ಹಾಗೂ ಪ್ರಮಾಣ ಪತ್ರ ಒಳಗೊಂಡಿದ್ದು ಮಕ್ಕಳಲ್ಲಿ ಬೇದಭಾವ ಮಾಡಬಾರದೆಂಬ ಉದ್ದೇಶದಿಂದ ಸ್ಪರ್ದಿಸಿದ ಎಲ್ಲರಿಗೂ ಪಾರಿತೋಷಕ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು. ಸಮಸ್ತ ಹಿಂದೂ ಬಾಂದವರು ಈ ವೇದಿಕೆಯ ಸದುಪಯೋಗ ಪಡಿಸಿಕೊಳ್ಳುವುದಲ್ಲದೇ ಹೆಚ್ಚಿನ ಮಾಹಿತಿಗೆ ಶ್ರೀ ಅಣ್ಣಪ್ಪ ಹೇರೂರು 9110457626 ಶ್ರೀ ಉಮೇಶ್ 7975504847 ಶ್ರೀ ಸಂದೀಪ್ ಶೆಟ್ಟಿ 9380569687 ಸಂಪರ್ಕಿಸುವಂತೆ ಅಣ್ಣಪ್ಪ ಹೇರೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.