ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ
ಬೃಹತ್ ರಕ್ತದಾನ ಶಿಬಿರ
(SHIVAMOGA): ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿಗಳ ಕಛೇರಿ, ಶಿವಮೊಗ್ಗ. ರಕ್ತನಿಧಿ ಘಟಕ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ಶಿವಮೊಗ್ಗ. ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಸೊರಬ.
ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ, ಸೊರಬ.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸೊರಬ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದು
ದಿನಾಂಕ 01-06-2024 ನೇ ಶನಿವಾರ ಸಮಯ : ಬೆಳಿಗ್ಗೆ 9-00 ರಿಂದ ಸಂಜೆ 3-00 ರವರೆಗೆ ಸ್ಥಳ : ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸೊರಬ.
‘ರಕ್ತ ದಾನ ಜೀವ ದಾನ‘ ರಕ್ತದಾನ ಮಾಡುವವರು
ಕನಿಷ್ಠ 45 ಕೆ.ಜಿ. ದೇಹ ತೂಕ ಇರುವ ಆರೋಗ್ಯವಂತ ವ್ಯಕ್ತಿಗಳು 18 ರಿಂದ 60 ವರ್ಷದ ಒಳಗಿನ ಪ್ರಾಯದ ಪುರುಷರು ಮತ್ತು ಮಹಿಳೆಯರು ಕನಿಷ್ಟ 12.5 ಗ್ರಾಂ ಹಿಮೋಗ್ಲೋಬಿನ್ ಪ್ರಮಾಣ ರಕ್ತದಲ್ಲಿರಬೇಕು. ರಕ್ತದ ಒತ್ತಡ ಸಮವಾಗಿರಬೇಕು. ರಕ್ತ ದಾನ ಮಾಡಿ ಜೀವ ಉಳಿಸಿ
ಯಾರು ರಕ್ತದಾನ ಮಾಡುವಂತಿಲ್ಲ ? ಒಂದು ವರ್ಷದಿಂದೀಚೆಗೆ ಮಲೇರಿಯಾ, ಟೈಪೈಡ್, ಜಾಂಡೀಸ್ ಆದವರು ಒಂದು ವರ್ಷದಿಂದೀಚೆಗೆ ಶಸ್ತ್ರಚಿಕಿತ್ಸೆಗಳಿಗೆ ಒಳಪಟ್ಟವರು ಗರ್ಭಿಣಿ ಸ್ತ್ರೀಯರು, ಹಾಲುಣಿಸುವ ತಾಯಂದಿರು, ಋತುಸ್ರಾವದಲ್ಲಿರುವ ಸ್ತ್ರೀಯರು ರಕ್ತದಾನ ಮಾಡುವಂತಿಲ್ಲ.
ಬೃಹತ್ ರಕ್ತದಾನ ಶಿಬಿರವು ಏರ್ಪಡಿಸಿದ್ದು ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಹೆಚ್ಚು ಜೀವಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕೋರಿದ್ದಾರೆ.
ವಿವರಗಳಿಗೆ ಸಂಪರ್ಕಿಸಿರಿ : 9686498767, 9449101448, 9880199984, 9880447375 7975396642, 9740955836, 8867634080, 9538067205