News & UpdatesSportsದೇಶ

ಆತನನ್ನು ಎದುರಿಸುವ ಸಾಮರ್ಥ್ಯ ಇವರಿಗಿಲ್ಲ ( ಟೀಂ ಇಂಡಿಯಾ ಆಟಗಾರರ ಕಾಲೆಳೆದ ಪಾಕ್ ಮಾಜಿ ಪ್ರಧಾನಿ.)

ಆತನನ್ನು ಎದುರಿಸುವ ಸಾಮರ್ಥ್ಯ ಇವರಿಗಿಲ್ಲ ( ಟೀಂ ಇಂಡಿಯಾ ಆಟಗಾರರ ಕಾಲೆಳೆದ ಪಾಕ್ ಮಾಜಿ ಪ್ರಧಾನಿ.)

( IND vs PAK) : ಪಾಕ್ ವೇಗಿಗಳನ್ನು ಸಮರ್ಥವಾಗಿ ಎದುರಿಸಲು ವಿಫಲರಾದ ಟೀಂ ಇಂಡಿಯಾ ಆಟಗಾರರನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ವ್ಯಾಂಗ್ಯವಾಗಿ ಟೀಕಿಸಿ ಟ್ವೀಟ್ ಮಾಡಿದ್ದಾರೆ. ಟೀಂ ಇಂಡಿಯಾದ ಬಲಿಷ್ಠ ಬ್ಯಾಟಿಂಗ್ ಪಡೆ ಸ್ಟಾರ್ ವೇಗಿ ಶಾಹೀನ್ ಅಫ್ರಿದಿ ಮುಂದೆ ಮಂಡಿಯೂರಿತು. ಅದರಲ್ಲೂ ಶಾಹೀನ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಕ್ಯಾಂಡಿಯ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಏಷ್ಯಾಕಪ್ 2023 ಪಂದ್ಯ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಈ ಪಂದ್ಯದಲ್ಲಿ ಪಾಕ್ ವೇಗಿಗಳನ್ನು ಸಮರ್ಥವಾಗಿ ಎದುರಿಸಲು ವಿಫಲರಾದ ಟೀಂ ಇಂಡಿಯಾ ಆಟಗಾರರನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ವ್ಯಂಗ್ಯವಾಗಿ ಟೀಕಿಸಿ ಟ್ವೀಟ್ ಮಾಡಿದ್ದಾರೆ. ವಾಸ್ತವವಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬಲಿಷ್ಠ ಬ್ಯಾಟಿಂಗ್ ಪಡೆ ಸ್ಟಾರ್ ವೇಗಿ ಶಾಹೀನ್ ಅಫ್ರಿದಿ (Shaheen Afridi) ಮುಂದೆ ಮಂಡಿಯೂರಿತು. ಅದರಲ್ಲೂ ಶಾಹೀನ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇದರಿಂದ ಭಾರತ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು.

4 ವಿಕೆಟ್ ಉರುಳಿಸಿದ ಶಾಹೀನ್ ಇದಕ್ಕೆ ತದ್ವಿರುದ್ಧವಾಗಿ ಟೀಂ ಇಂಡಿಯಾವನ್ನು ಕಾಡಿದ ಶಾಹೀನ್ ತಮ್ಮ 10 ಓವರ್‌ಗಳ ಖೋಟಾದಲ್ಲಿ ಕೇವಲ 35 ರನ್‌ಗಳನ್ನು ನೀಡಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಇದರಲ್ಲಿ ಆರಂಭಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ವಿಕೆಟ್ಗಳು ಸೇರಿದ್ದವು.

ಇದು ಸಾಲದೆಂಬಂತೆ ಮೊದಲ 10 ಓವರ್‌ಗಳಲ್ಲಿಯೇ ಭಾರತದ ಟಾಪ್ ಮೂರು ಬ್ಯಾಟರ್ಗಳು ಪಾಕ್ ವೇಗಿಗಳ ದಾಳಿಗೆ ತತ್ತರಿಸಿ ಪೆವಿಲಿಯನ್ ಸೇರಿಕೊಂಡರು. ಅದರಲ್ಲೂ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಕಡಿಮೆ ಸ್ಕೋರ್‌ಗಳಿಗೆ ಔಟ್ ಮಾಡುವ ಮೂಲಕ ಶಾಹೀನ್ ಪಾಕಿಸ್ತಾನಕ್ಕೆ ಕನಸಿನ ಆರಂಭವನ್ನು ನೀಡಿದರು. ಭಾರತದ ನಾಯಕ ರೋಹಿತ್ ಕೇವಲ 11 ರನ್ ಗಳಿಸಿದರೆ, ಮಾಜಿ ನಾಯಕ ವಿರಾಟ್ ಕೇವಲ ನಾಲ್ಕು ರನ್ಗಳಿಗೆ ಸುಸ್ತಾದರು.ಭಾರತದ ಬ್ಯಾಟರ್ಗಳ ಕಾಲೆಳೆದ ಷರೀಫ್ ಪಾಕ್ ವೇಗಿ ಶಾಹೀನ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೆ ಪೆವಿಲಿಯನ್ ಸೇರಿಕೊಳ್ಳುತ್ತಿದ್ದ ಟೀಂ ಇಂಡಿಯಾ ಆಟಗಾರರನ್ನು ಕಂಡು ಒಂದೆಡೆ ಟೀಂ ಇಂಡಿಯಾ ಫ್ಯಾನ್ಸ್ ಹಿಡಿ ಶಾಪ ಹಾಕುತ್ತಿದ್ದರೆ, ಇತ್ತ ಪಾಕಿಸ್ತಾನದ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್, ಭಾರತದ ಬ್ಯಾಟರ್ಗಳ ಕಾಲೆಳೆದಿದ್ದಾರೆ. ಮತ್ತು ಪಂದ್ಯದ ಕುರಿತು ಮಾತನಾಡುವುದಾದರೆ, ಟೀಂ ಇಂಡಿಯಾ ತನ್ನ ಅಗ್ರ ಕ್ರಮಾಂಕದ ವಿಫಲತೆಯ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸಿದ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಅವರ 138 ರನ್ಗಳ ಜೊತೆಯಾಟದಿಂದಾಗಿ 266 ರನ್ ಕಲೆಹಾಕಿತು. ಭಾರತದ ಇನ್ನಿಂಗ್ಸ್ ಬಳಿಕ ಮಳೆ ಬಂದಿದ್ದರಿಂದಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು.

Leave a Reply

Your email address will not be published. Required fields are marked *

Scan the code