ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪುರುಷ ತಂಡಕ್ಕೆ ಚಿನ್ನದ ಪದಕ
(NEW DELHI): ಏಷ್ಯನ್ ಗೇಮ್ಸ್‌ನಲ್ಲಿ ನಮ್ಮ ಪುರುಷರ ಹಾಕಿ ತಂಡದಿಂದ ರೋಮಾಂಚನಕಾರಿ ಚಿನ್ನದ ಪದಕ ಜಯ! ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ತಂಡಕ್ಕೆ ಪ್ರಧಾನಿ ಮತ್ತು ದೇಶದಲ್ಲಿ ಎಲ್ಲರೂ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಈ ತಂಡದ ಅಚಲವಾದ ಬದ್ಧತೆ, ಉತ್ಸಾಹ ಮತ್ತು ಸಿನರ್ಜಿ ಪಂದ್ಯವನ್ನು ಮಾತ್ರವಲ್ಲದೆ ಅಸಂಖ್ಯಾತ ಭಾರತೀಯರ ಹೃದಯವನ್ನೂ ಗೆದ್ದಿದೆ. ಈ ಗೆಲುವು ಅವರ ಉತ್ಸಾಹಕ್ಕೆ ಸಾಕ್ಷಿಯಾಗಿದೆ.
ಭಾನುವಾರ ಕ್ರೀಡಾಕೂಟದ ಕೊನೆಯ ದಿನವಾಗಿದೆ. ಆದರೆ ಭಾರತದ ಕ್ರೀಡಾಸ್ಪರ್ಧೆಗಳು ಶನಿವಾರವೇ ಮುಕ್ತಾಯಗೊಳ್ಳಲಿವೆ. ಶನಿವಾರ ಭಾರತ ಒಟ್ಟು 6 ಫೈನಲ್ಗಳಲ್ಲಿ ಚಿನ್ನಕ್ಕಾಗಿ ಹೋರಾಡಲಿದೆ. ಜತೆಗೆ ಚೆಸ್ನಲ್ಲಿ ಅವಳಿ ಪದಕದ ನಿರೀಕ್ಷೆ ಇದೆ. ಕುಸ್ತಿ, ಸ್ಕೇಟಿಂಗ್ನಲ್ಲೂ ಪದಕಕ್ಕೆ ಸೆಣಸಲಿದೆ. ಮಹಿಳಾ ಹಾಕಿ, ಆರ್ಚರಿಯಲ್ಲಿ ಕಂಚಿಗೆ ಹೋರಾಡಲಿದೆ.