ಮತದಾನ ಮತ್ತು ಮತಎಣಿಕೆ ದಿನಗಳಂದು ಮದ್ಯ ಮಾರಾಟ ನಿಷೇಧಿಸಿ.. “ಒಣ ದಿನ” (DryDays) ಆಚರಣೆ..!
(SHIVAMOGA): ಭಾರತ ಚುನಾವಣಾ ಆಯೋಗ, ನವದೆಹಲಿ ರವರ ದಿನಾಂಕ: 16-03-2024 ರ ಪತ್ರದಲ್ಲಿ ಕರ್ನಾಟಕ ರಾಜ್ಯದಲ್ಲಿ ದಿನಾಂಕ: 26-04-2024 ಮತ್ತು 07-05-2024 ರಂದು ಎರಡು ಹಂತದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯುವುದಾಗಿ ಅಧಿಸೂಚನೆ ಹೊರಡಿಸಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ದಿನಾಂಕ: 07-05-2024 ರಂದು ಮತದಾನ ಹಾಗೂ ದಿನಾಂಕ: 04-06-2024 ರಂದು ಮತಎಣಿಕೆ ದಿನಾಂಕ ನಿಗದಿಯಾಗಿರುತ್ತದೆ. ಮತದಾನ ಮತ್ತು ಮತಎಣಿಕೆ ನಡೆಯುವ ದಿನಾಂಕಗಳಂದು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶಿಸುವಂತೆ ಉಲ್ಲೇಖ (2) ಮತ್ತು (3) ರ ಪತ್ರಗಳಲ್ಲಿ ಸೂಚಿಸಿರುತ್ತಾರೆ.
ಲೋಕ ಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಚುನಾವಣೆಯು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಯಲು ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಮತದಾನ ಅಂತ್ಯಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಮತ್ತು ಮತ ಎಣಿಕೆ ದಿನದಂದು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಒಣದಿನಗಳೆಂದು ಘೋಷಿಸಲು ನಿರ್ದೇಶನ ನೀಡಿರುವುದರಿಂದ ಮತದಾನ ಪ್ರಯುಕ್ತ ದಿನಾಂಕ: 05-05-2024 ರ ಸಂಜೆ 05-00 ಗಂಟೆಯಿಂದ ದಿನಾಂಕ:07-05-2024 ರ ಮಧ್ಯರಾತ್ರಿ 12-00 ಗಂಟೆಯವರೆಗೆ ಮತ್ತು ಮತ ಎಣಿಕೆ ಪ್ರಯುಕ್ತ ದಿ: 04- 06-2024 ರಂದು ಬೆಳಿಗ್ಗೆ 06-00 ಗಂಟೆಯಿಂದ ಮಧ್ಯರಾತ್ರಿ 12-00 ಗಂಟೆಯವರೆಗೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿದೆ .ಹಾಗು ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಶುಷ್ಕ ದಿನ (Dry Day) ಎಂದು ಘೋಷಿಸಿ ಆದೇಶಿಸಿದೆ. ಈ ದಿನಗಳಂದು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ತರಹದ ಮದ್ಯದ ತಯಾರಿಕೆ, ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಅನುಸಾರ ಗುರುದತ್ತ ಹೆಗಡೆ. ಭಾ.ಆ.ಸೇ., ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಆದ ನಾನು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967 ರ ನಿಯಮ 10-ಬಿ ಮತ್ತು ಪ್ರಜಾ ಪ್ರತಿನಿಧಿ ಕಾಯ್ದೆ-1951 ರ ಸೆಕ್ಷನ್-135ಸಿ ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಮತದಾನ ಪ್ರಯುಕ್ತ ಮದ್ಯಮಾರಾಟ ಮಾಡುವುದನ್ನು ನಿಷೇಧಿಸಿದೆ.
ಈ ಆದೇಶವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ,
ಶಿವಮೊಗ್ಗ ಜಿಲ್ಲೆ, ಇವರು ದಿನಾಂಕ: 10-04-2024 ರಂದು ಸಹಿ ಮತ್ತು ಮೊಹರಿನೊಂದಿಗೆ ಈ ಕಾಯ್ದೆಯನ್ನು ಹೊರಡಿಸುತ್ತಾರೆ ಹೊರಡಿಸಿರುತ್ತಾರೆ.