News & Updatesಚಿಕ್ಕಮಗಳೂರುಜಿಲ್ಲೆ

ಚಿಕ್ಕಮಗಳೂರು: ಪ್ರವಾಸಿಗರಿಗೆ ಮಟನ್ ಊಟ ಎಂದು ಗೋಮಾಂಸ ತಿನಿಸಿದ ಚಿಕ್ಕಮಗಳೂರು ನಗರದ ಎವರೆಸ್ಟ್ ಹೋಟೆಲ್.

ಚಿಕ್ಕಮಗಳೂರು: ಪ್ರವಾಸಿಗರಿಗೆ ಮಟನ್ ಊಟ ಎಂದು ಗೋಮಾಂಸ ತಿನಿಸಿದ ಚಿಕ್ಕಮಗಳೂರು ನಗರದ ಎವರೆಸ್ಟ್ ಹೋಟೆಲ್.

( ಚಿಕ್ಕಮಗಳೂರು, ಆಗಸ್ಟ್ – 31) – ಪ್ರವಾಸಿಗರಿಗೆ ಮಟನ್ ಊಟ ಎಂದು ಗೋಮಾಂಸ ತಿನಿಸಿದ ಚಿಕ್ಕಮಗಳೂರು ನಗರದ ಎವರೆಸ್ಟ್ ಹೋಟೆಲ್.
ಮಟನ್ ಊಟವೆಂದು, ಗೋ ಮಾಂಸದ ಊಟ ನೀಡುತ್ತಿದ್ದ ಚಿಕ್ಕಮಗಳೂರು ನಗರದ ಪ್ರತಿಷ್ಠಿತ ಹೋಟೆಲ್ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಸದ್ಯ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಎವರೆಸ್ಟ್ ಹೋಟೆಲ್ ಮಾಲೀಕ ಲತೀಫ್ ಮತ್ತು ಬೆಂಗಳೂರಿನ ಹೋಟೆಲ್ ಮಾಲೀಕ ಶಿವರಾಜ್ ಅವರನ್ನು ಬಂಧಿಸಿದ್ದಾರೆ.
ನಗರದ ಪ್ರತಿಷ್ಠಿತ ಹೋಟೆಲ್ಗಳ HOTEL ಮೇಲೆ ದಾಳಿ ಮಾಡಿ ಪೊಲೀಸರು ಗೋಮಾಂಸದ BEEF ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ನಗರದ ಬೆಂಗಳೂರು ಹೋಟೆಲ್, ಎವರೆಸ್ಟ್ ಹೋಟೆಲ್ಗಳು ಮಟನ್ ಬದಲು ಗೋಮಾಂಸದ ಬಿರಿಯಾನಿ ನೀಡುತ್ತಿದ್ದವು ಎಂಬ ಆರೋಪ ಕೇಳಿಬಂದಿದೆ. ಸದ್ಯ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಎವರೆಸ್ಟ್ ಹೋಟೆಲ್ ಮಾಲೀಕ ಲತೀಫ್ ಮತ್ತು ಬೆಂಗಳೂರಿನ ಹೋಟೆಲ್ ಮಾಲೀಕ ಶಿವರಾಜ್ ಅವರನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಚಿಕ್ಕಮಗಳೂರು ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ನ್ಯಾಮತ್ ಹೋಟೆಲ್‌ನಲ್ಲಿ ಸಂಗ್ರಹಿಸಲಾಗಿದ್ದ 20 ಕೆಜಿ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಹೊಟೇಲ್ ಮಾಲೀಕ ಇರ್ಷಾದ್ ಅಹಮದ್ ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಜೂನ್‌ನಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಹಾಸನದಿಂದ ನಗರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 140 ಕೆಜಿ ಗೋಮಾಂಸವನ್ನು ಚಿಕ್ಕಮಗಳೂರು ಪೊಲೀಸರು ವಶಪಡಿಸಿಕೊಂಡಿದ್ದರು. ಹಾಸನ ನಿವಾಸಿಗಳಾದ ಜಾಫರ್ ಉಮರ್ ಮತ್ತು ಮೊಹಮ್ಮದ್ ಮೊಹಲ್ಲಾ ಎಂಬುವರನ್ನು ಪೊಲೀಸರು ಬಂಧಿಸಿ, ದನದ ಮಾಂಸದೊಂದಿಗೆ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದರು.

Leave a Reply

Your email address will not be published. Required fields are marked *

Scan the code