Entertainmentಮನರಂಜನೆ

ಮಜ್ಜಿಗೆ ಸಾರಿಗೆ ಗಾಳಿಸೋಕಿನ ಬೀಜ ಮತ್ತು ಗಿಡ.

ಮಜ್ಜಿಗೆ ಸಾರಿಗೆ ಗಾಳಿಸೋಕಿನ ಬೀಜ ಮತ್ತು ಗಿಡ.

(ARTICAL): ಇವತ್ತು ಯಾಕೋ ಬೇಜಾರು ಆತು ಇಷ್ಟು ದಿನ ಮಹಾಲಯ ಉಂಡು ಉಂಡು ನವರಾತ್ರಿಲಿ ಹೊಲಸು ಮಾಡಾಂಗಿಲ್ಲ. ಏನ್ಮಾಡೋದು ಆಂತ ಚಿಂತಿ ಮಾಡ್ತಾ ಕೂತೇ..ನಮ್ಮವು ಏಳೆಂಟು ದನ ಬೇರೆ ಇದಾವೆ ಬೇಜಾರಾತು ಗುಡ್ಡದ ಕಡೆಗೆ ಹೋದೇ. ಮನಿಗೆ ಬಂದ್ರೆ ಇವತ್ತು ಸೋಮವಾರ ನನಗೆ ವಾರ ಬೇರೆ ಹೋಯ್. ಹೊಲಸು ಮಾಡಾಕೆ ನವರಾತ್ರಿ ಬೇರೆ ಹೋಯ್. ನಮ್ಮವು ಮಲೆನಾಡು ಗಿಡ್ಡ ದನ ಬೇರೆ ಇದಾವೆ. ಮನೆಲಿ ಹಾಲು ಮಜ್ಜಿಗೆ ಆತದೇ ಬಾಯಿ ಬೇರೆ ಚಪ್ಪಗೆ ಆತಿತು. ಸುಮ್ನೆ ದನ ಬಿಟ್ಕೊಂಡಿದ್ನಾ ಗುಡ್ಡದಾಗೇ. ಮಜ್ಜಿಗೆ ಸಾರಿಗೆ ಹಾಕೋದೂ ಗಾಳಿ ಸೋಕಿನಾ ಗಿಡ ಕಂಡ್ವೂ. ಹೋಗಿ ನೋಡ್ನಿ ಒಣಗಿ ನಿಂತಾವೆ ಮಾರ್ರೇ ಆವಾಗ ಗ್ಯಾನ ಮಾಡ್ದೇ ಮನಿಗೆ ಮಜ್ಜಿಗೆ ಮೊಸರು ಐತೇ,,, ಮಜ್ಜಿಗೆ ಸಾರು ಅಮ್ಮನ ಹತ್ರ ಮಾಡ್ಸನಾ ಆಂತ ಗ್ಯಾನಾ ಆತು. ಮಜ್ಜಿಗೆ ಸಾರು ಮಾಡ್ಸೋಕೆ ಐಟಂ ಬೇಕಲ್ಲ ಅಮ್ಮನಿಗೆ ಹೇಳ್ದೇ ಅವರು ನೋಡ್ದ್ರೇ ಸುಮಾರು ಐಟಂ ಹೇಳಿ ಬಿಡಾದ ನಂಗೆ ಹೆಸ್ರೂ ಬೇರೆ ಗೊತ್ತಿಲ್ಲ ಮಜ್ಜಿಗೆ /ಮೊಸರು, ಜೀರ್ಮೇಣ್ಸಿನಕಾಯಿ, ಜುಮ್ನುಕಾಯಿ, ಗಾಳಿಸೋಕಿನ ಬೀಜ, ಬೆಳ್ಳುಳ್ಳಿ, ಕಾಳ್ಮೆಣಸು, ಶುಂಠಿ, ಜೀರಿಗೆ ಬೇವಿನ್ಸೋಪ್ಪು, ಸ್ವಲ್ಪ ಅಕ್ಕಿ, ಹೋಯ್. ಇಷ್ಟು ಬೇಕು ಆಂತು ಅಮ್ಮ ಹೋಯ್ ಜುಮ್ನುಕಾಯಿ, ಗಾಳಿಸೋಕಿನ ಬೀಜ ಆಂದ್ರೇ ಎಂತ ಆಂತ ಗೊತ್ತಿಲ್ಲ. ಜೀರ್ಮೇಣ್ಸಿನಕಾಯಿ, ಶುಂಠಿ, ಕಾಳ್ಮೆಣಸು, ಬೇವಿನ್ಸೋಪ್ಪು, ಜೀರಿಗೆ ಆದ್ರೇ ಗೊತ್ತು ಹೋಯ್ ಇವು ಆದ್ರೇ ತೋಟದಾಗೇ ಪಾಠದಾಗೇ ಸಿಕ್ತಾವೆ.

ಅಮ್ಮಗೆ ಹೇಳ್ದೇ ಗೊತ್ತಿದವ್ನ ತರ್ತ್ನಿ ಆಂತ ಅವ್ನೇ ತಂದು ಕೊಡು ಜುಮ್ನುಕಾಯಿ, ಗಾಳಿಸೋಕಿನ ಬೀಜ ಇದಾವೆ ಇಟ್ಟಿನಿ ಆಂತು ಅಮ್ಮ. ಆವ್ನೇಲ್ಲ ತಂದು ಕೊಟ್ಟೇ. ಇವತ್ತು ಬೇರೆ ಕರೆಂಟ್ ಬೇರೆ ಇಲ್ಲ ಹೋಯ್ ಪವರ್ ಕಟ್ ಮಿಕ್ಸಿಗೆ ಹಾಕೋಕೆ ಏನ್ ಮಾಡೋದು ನಾನು ಉಣ್ಬೇಕು ದನ ಹೋಡ್ಕೋಂಡು ಗುಡ್ಡಕ್ಕೆ ಬೇರೆ ಹೋಗಿ ಬಂದೀನಿ ಹಸಿವು ತಡಿಕೆ ಆಗ್ತಾ ಇಲ್ಲ ಹೋಯ್. ತಡಿ ಕಡೆ ಕಲ್ಲು ಇತೇ ಕಡೆದೂ ಸಾರು ಮಾಡ್ತೀನಿ ಆಂತು ಹೋಯ್. ಆಮೇಲೆ ಬೇಗ ಬೇಗ ಮಜ್ಜಿಗೆ, ಉಪ್ಪು, ಅಮ್ಮ ಕಡೆದಿದಾ ಐಟಂ ಹಾಕಿ ಬೇಗ ಕದ್ರೀ ಕಟ್ಗೇ ಮಾಡಿ ಕೊಡ್ತೂ ಹೋಯ್. ಎಂತ ಗಮ್ಮತ್ ಊಟ ಅಂತೀರಾ ಮಹಾಲಯದಾಗೇ ಹೊಲಸು ತಿಂದಿದ್ದೂ ಎಲ್ಲ ಕತ್ರಿಸಿ ಹೋಯ್ತು ಹೋಯ್. ಇವ್ನ ತಿಂದ್ರೇ ಬಿ ಪಿ ಶುಗರ್ ಎಲ್ಲ ಹೋತದೇ ಹೋಯ್ ಈಗ ಎಲ್ಲ ರೆಡಿಮಡ್ ಹೋಯ್ ರೊಟ್ಟಿ, ಚಪಾತಿ, ಪರೋಟ, ಚಟ್ನಿ, ಪಲ್ಯ, ಎಲ್ಲ. ಯಾಕೆ ಹಿಂದ್ನವರ್ ಗಟ್ಟಿ ಮುಟ್ಟು ಆಂದ್ರೇ ಇವ್ನ ತಿಂದೇ ಹೋಯ್.

ರಘುಪತಿ ವಿ ಸಿ ಗೌಡ.
ಶೌರ್ಯ ವಿಪತ್ತು ನಿರ್ವಹಣಾ ಘಟಕ ಖಾಂಡ್ಯ, ಬಿದರೆ.

Leave a Reply

Your email address will not be published. Required fields are marked *

Scan the code