ಆಟೋಮೋಬೈಲ್ ಕ್ಷೇತ್ರದಲ್ಲಿ ಕ್ಯಾಸ್ಟಲ್ ಹೊಸ ಮೈಲಿಗಲ್ಲು
(KOLARA): ಬಂಗಾರಪೇಟೆ: ಆಟೋಮೊಬೈಲ್ ಕ್ಯಾಸ್ಟಲ್ ಸಂಸ್ಥೆಯು ಆಯಿಲ್ ಎಕ್ಸ್ಪ್ರೆಸ್ ಎಂಬ ನೂತನ ತಂತ್ರಜ್ಞಾನದ ಯಂತ್ರವನ್ನು ಲೋಕಾರ್ಪಣೆ ಮಾಡಿದ್ದು, ಗ್ರಾಹಕರಿಗೆ ಶುದ್ದ ಹಾಗೂ ಗುಣಮಟ್ಟದ ಇಂಜಿನ್ ಆಯಿಲ್ ಪೂರೈಸಲು ಸಾಧ್ಯವಾಗುತ್ತೆಂದು ಕ್ಯಾಸ್ಟಲ್ ಮೇಲೆ ಸಜ್ಜೆ ಇದೆ ಅಣ್ಣ ಸಂಸ್ಥೆ ವ್ಯವಸ್ಥಾಪಕ ಜಾರ್ಜ್ ಹೇಳಿದರು.
ಕೋಲಾರ ಮುಖ್ಯರಸ್ತೆಯ ವಿವೇಕಾನಂದನಗರ ಬಸ್ ನಿಲ್ದಾಣದ ಬಳಿ ಇರುವ ಸಾಗರ್ ಆಟೋಮೊಬೈಲ್ಸ್ ಅಂಗಡಿಯಲ್ಲಿ ನೂತನ ಯಂತ್ರವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಶುದ್ದ ಇಂಜಿನ್ ಆಯಿಲ್‌ನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ದಾಪುಗಾಲಾಕಿದ್ದು, ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಭಾರಿಗೆ ಬಂಗಾರಪೇಟೆ ಪಟ್ಟಣದಲ್ಲಿ ಆಯಿಲ್ ಎಕ್ಸ್ಪ್ರೆಸ್ ಯಂತ್ರವನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ವಾಹನಗಳಲ್ಲಿ ಅಧಿಕ ಮೈಲೇಜ್ ಹಾಗೂ ವೇಗದ ಪ್ರಮಾಣ ಹೆಚ್ಚಾಗುವುದಕ್ಕೆ ಪರಿಣಾಮಕಾರಿಯಾಗಿದೆ ಹಾಗೂ ಸಾಧಾರಣವಾಗಿ ವಾಹನದ ಆಯಿಲ್ ಬದಲಿಸುವ ಸಮಯದಲ್ಲಿ ಶೇ.40ರಷ್ಟು ಹಳೇಯ ಆಯಿಲ್ ಇಂಜಿನ್‌ನಲ್ಲಿರುವ ಸಾಧ್ಯತೆಗಳಿವೆ, ಆದರೆ ಆಯಿಲ್ ಎಕ್ಸ್ಪ್ರೆಸ್ ಯಂತ್ರದ ಸಹಾಯದಿಂದ ಶೇ.99ರಷ್ಟು ಹಳೇಯ ಆಯಿಲ್‌ನ್ನು ಹೊರತೆಗೆದು ಹೊಸ ಆಯಿಲ್‌ನ್ನು ಹಾಕಬಹುದು ಇದರಿಂದ ಇಂಜಿನ್ ಹೆಚ್ಚು ದಿನಗಳ ಕಾಲ ಬಾಳಿಕೆ ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖಂಡರಾದ ಸ್ಪೇನ್ ಜೋಸೆಪ್, ರೊಹನ್, ರಸಿಂಗ್‌ರಾವ್ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ