ಮದ್ದೇರಿ ಕೆನರಾ ಬ್ಯಾಂಕ್ ನಲ್ಲಿ ಬ್ಯಾಂಕ್ ಸಂಸ್ಥಾಪಕ ಶ್ರೀ ಅಮ್ಮೆಮ್ ಬಾಳ ಸುಬ್ಬಾ ರಾವ್ ಪೈ ರವರ ದಿನಾಚರಣೆ
(KOLARA): ಕೋಲಾರ : ತಾಲೂಕಿನ ವೇಮಗಲ್ ಹೋಬಳಿಯ ಮದ್ದೇರಿ ಗ್ರಾಮದಲ್ಲಿ ದಿವಂಗತ ಶ್ರೀ ಎಸ್ ರಾಮೇಗೌಡ ಮತ್ತು ದೊಡ್ಡಪ್ಪಯ್ಯ ನವರ ಶ್ರಮದಿಂದ ಗಡಿ ಭಾಗದ ಜನರಿಗೆ ಹಣಕಾಸು ವ್ಯವಹಾರ ಸೇವಾ ಸೌಲಭ್ಯ ಗಳ ವಿವಿಧ ಅನುಕೂಲಗಳನ್ನು ಪಡೆದು ಆರ್ಥಿಕವಾಗಿ ಬಲವಾಗಲು ಕೆನರಾ ಬ್ಯಾಂಕ್ ನಿರ್ಮಾಣ ಮಾಡಲು ಪಣ ತೊಟ್ಟರು ಎಂದು ಬ್ಯಾಂಕಿನ ನಿವೃತ್ತ ಕ್ಯಾಷಿಯರ್ ಎ ನಾರಾಯಣಸ್ವಾಮಿ ರವರು ತಿಳಿಸಿದರು,
ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ವೇಳೆ ನಿವೃತ್ತ ಕ್ಯಾಶಿಯರ್ ಅಧಿಕಾರಿ ಎ ನಾರಾಯಣಸ್ವಾಮಿ ಯವರಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿ ಗ್ರಾಹಕರಿಗೆ ಸಿಹಿ ಹಂಚಿ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಇಂದ್ರಜಿತ್ ಸಿಂಗ್ ಕೋಲಾರ ಜಿಲ್ಲೆ ಗಡಿ ಭಾಗದಲ್ಲಿ ಕೆನರಾ ಬ್ಯಾಂಕ್ ನಿರ್ಮಿಸಿ ಉತ್ತಮವಾದ ಸೇವೆ ನೀಡುತ್ತಿದ್ದು ಸಾಲ ಪಡೆದುಕೊಂಡು ಮರುಪಾವತಿ ಇತರೆ ಹಣಕಾಸು ವ್ಯವಹಾರ ಉತ್ತಮವಾಗಿ ನಡೆಯುತ್ತಿದೆ ಇದೇ ರೀತಿ ಮುಂದೆಯು ಕೆನರಾ ಬ್ಯಾಂಕ್ ನಿಂದ ಸೇವೆಗಳು ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಿ ಎಂದು ನುಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಇಂದ್ರಜಿತ್ ಸಿಂಗ್, ಕಿರಿಯ ಅಧಿಕಾರಿ ಮಹೇಶ್, ಕ್ಯಾಶಿಯರ್ ಸುಬ್ರಮಣಿ, ಬ್ಯಾಂಕ್ ಸಿಬ್ಬಂದಿ ಮಂಜುನಾಥ್, ಮಧು, ಬ್ಯಾಂಕ್ ಮಿತ್ರರಾದ ಪಚ್ಚಾರ್ಲಹಳ್ಳಿ ರಾಜೇಶ್ ಬಾಬು ವಿ ಎಲ್, ಹಾಗೂ ಸೀತಿ ಹೊಸೂರು ಶಿವಕುಮಾರ್ ಮತ್ತು ಗ್ರಾಹಕರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ