ಜಿಲ್ಲೆನ್ಯೂಸ್

ಸಾಂದೀಪನಿ ಪಬ್ಲಿಕ್ ಶಾಲೆಯಲ್ಲಿ ಮಕರ ಸಂಕ್ರಾತಿಯ ಹಬ್ಬದ ಆಚರಣೆ

ಸಾಂದೀಪನಿ ಪಬ್ಲಿಕ್ ಶಾಲೆಯಲ್ಲಿ ಮಕರ ಸಂಕ್ರಾತಿಯ ಹಬ್ಬದ ಆಚರಣೆ

(KOLARA): ಬಂಗಾರಪೇಟೆ :ಪಟ್ಟಣದ ಸಾಂದೀಪನಿ ಪಬ್ಲಿಕ್ ಶಾಲೆಯಲ್ಲಿ ಮಕರ ಸಂಕ್ರಾತಿಯ ಹಬ್ಬದ ಹಳ್ಳಿಯ ಸೊಗಡನ್ನು ಬಿಂಬಿಸುವ ಮಾದರಿಯನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಶಾಲೆಯ ಶಿಕ್ಷಕರು ಸೇರಿದಂತೆ ಮಕ್ಕಳು ಕೂಡ ಹಳ್ಳಿಯ ವೇಷಭೂಷಣಗಳಲ್ಲಿ ಕಂಗೊಳಿಸಿದರು.ಬಳಿಕ ಶಾಲಾ ಆವರಣದಲ್ಲಿ ಬೆರಣಿಗಳನ್ನು ಸುಡುವ ಮೂಲಕ ಹಾಲು ಉಕ್ಕಿಸಿ ಹಬ್ಬವನ್ನು ಆಚರಣೆ ಮಾಡಲಾಯಿತು.

ಈ ವೇಳೆ ಶಿಕ್ಷಕಿ ಕವಿತಾ ಮಾತಾನಾಡಿ ಮಕ್ಕಳಲ್ಲಿ ಹಬ್ಬ ಹರಿದಿನಗಳನ್ನು ನಮ್ಮ ಗ್ರಾಮೀಣ ಮಟ್ಟದಲ್ಲಿ ಯಾವ ರೀತಿ ಆಚರಿಸುತ್ತಾರೆ,ಇದರ ಭಾಗವಾಗಿ ಮಕ್ಕಳಿಗೆ ಸಾಂಪ್ರಾದಾಯಿಕ ಹುಡುಗೆ, ತೊಡುಗೆ ತೊಟ್ಟು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಮೂಲಕ ಮಕ್ಕಳಿಗೆ ನಮ್ಮ ಆಚರಣೆಯ ಬಗ್ಗೆ ಸಂಪೂರ್ಣ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ.

ಹಾಗೂ ಸಂಕ್ರಾಂತಿ ಪೌರಾಣಿಕ ಮತ್ತು ವೈಜ್ಞಾನಿಕ ಹಿನ್ನಲೆಯುಳ್ಳ ಹಬ್ಬವಾಗಿದೆ ಹಾಗೂ ಹಬ್ಬ ಒಂದೇ ಆದರೂ ಬೇರೇ ಬೇರೇ ರಾಜ್ಯಗಳಲ್ಲಿ ಬೇರೇ ಬೇರೇ ಹೆಸರಿನಿಂದ ಆಚರಿಸುವಂತಹ ಬಹಳಷ್ಟು ಹಬ್ಬಗಳಿದ್ದು “ಸಂಕ್ರಾಂತಿ” ಈ ರೀತಿಯ ಆಚರಣೆಗೆ ಒಳಪಡುವ ಹಬ್ಬವಾಗಿದೆ. ಹಾಗೂ ಮಕರ ಸಂಕ್ರಾಂತಿಯಂದು ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಪಡೆಯುತ್ತಾನೆ. ಇದು ಸೂರ್ಯನು ಉತ್ತರ ದಿಕ್ಕಿಗೆ ಪ್ರಯಾಣ ಮಾಡುವುದರ ಜೊತೆಗೆ ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಈ ದಿನದಂದು ಜಾನುವಾರಗಳನ್ನು ಕಿಚ್ಚಿಗೆ ಹಾಯಿಸುವುದು. ಎಳ್ಳುಬೆಲ್ಲದಿಂದ ತಯಾರಿಸಿದ ಸಿಹಿತಿನಿಸುಗಳನ್ನು ತಿನ್ನುವುದು, ವಿವಿಧ ರೀತಿ ಆಚರಣೆಗಳು ಮತ್ತು ಈ ಹಬ್ಬದ ಭಾಗವಾಗಿದೆ ಎಂದು ಹೇಳಿದರು.

ಈ ಎಲ್ಲಾ ಕಾರ್ಯಕ್ರಗಳು ರುವಾರಿಗಳಿ ನಮ್ಮ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ರವರು.ಅವರ ಮಾರ್ಗದರ್ಶನದಲ್ಲಿ ನಾವು ಈ ಎಲ್ಲಾ ಕಾರ್ಯಕ್ರಮ ಮಾಡುತ್ತೇವೆ ಎಂದು‌ ಹೇಳಿದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code