ಕೋಲಾರನ್ಯೂಸ್

ಚಿಕ್ಕ ಅಂಕಂಡಹಳ್ಳಿ ಗ್ರಾಮದ ಕೂಸಿನ ಮನೆ ಇಡೀ ತಾಲ್ಲೂಕಿಗೆ ಮಾದರಿ ತಾಲೂಕು ಪಂಚಾಯಿತಿ ಇ ಓ ರವಿಕುಮಾರ್

ಚಿಕ್ಕ ಅಂಕಂಡಹಳ್ಳಿ ಗ್ರಾಮದ ಕೂಸಿನ ಮನೆ ಇಡೀ ತಾಲ್ಲೂಕಿಗೆ ಮಾದರಿ ತಾಲೂಕು ಪಂಚಾಯಿತಿ ಇ ಓ ರವಿಕುಮಾರ್

(KOLARA): ಬಂಗಾರಪೇಟೆ :ಕೂಸಿನ ಮನೆ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಗಿದ್ದು ಎಲ್ಲಾ ಗ್ರಾಮೀಣ ಪ್ರದೇಶದವರಿಗೆ ಕೂಲಿ ಕಾರ್ಮಿಕರಿಗೆ ಚಿಕ್ಕ ಮಕ್ಕಳಿಗೆ ಪಾಲನೆ ಮಾಡುವ ಮನೆ ಗ್ರಾಮೀಣ ಭಾಗದ 6 ತಿಂಗಳಿಂದ 6 ವರ್ಷದ ಮಕ್ಕಳಿಗೆ ಎಲ್ಲಾ ಮಕ್ಕಳಿಗೆ ಇವೊಂದು ಕೇಂದ್ರದಲ್ಲಿ ಹಾರೈಕೆ ಮಾಡಲಾಗುವುದು ಎಂದು ತಾಲೂಕು ಪಂಚಾಯಿತಿ ಇ ಓ ರವಿಕುಮಾರ್ . ತಿಳಿಸಿದರು.

ಈ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಹೆಚ್ಚಾಗವುದು ಮತ್ತೆ ಮಕ್ಕಳಿಗೆ ಉತ್ತಮ ಆರೋಗ್ಯ ಪೌಷ್ಟಿಕ ಆಹಾರ ಜ್ಞಾನ ಹೆಚ್ಚಾಗುತ್ತದೆ. ಈ ಯೋಜನೆ ಯಡಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ಮಕ್ಕಳಿಗೆ ಮಧ್ಯಾಹ್ನದ ಊಟ ಹಾಲು,ಮೊಟ್ಟೆ, ಬಾಳೆಹಣ್ಣು ಚಿಕ್ಕಿ ಮತ್ತು ಪೌಷ್ಟಿಕ
ಆಹಾರವನ್ನು ನೀಡಲಾಗುತ್ತದೆ.

ಈ ಸೌಲಭ್ಯವನ್ನು ತಾಲ್ಲೂಕಿನ ಎಲ್ಲಾ ಪಂಚಾತಿಯ ಪೋಷಕರು ಹಾಗು ಮಕ್ಕಳು ಸದ್ಭಾಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು .

ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ
ಗಿರಿಜಮ್ಮ ಶ್ರೀನಿವಾಸ್, ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಸಿ ಎಂ ಹರೀಶ್ ಕುಮಾರ್ ರವರು ಶಂಕರ್. ಪಿ ಡಿ ಓ ದೇವರಾಜ್ ರವರು ಎನ್ ಆರ್ ಎಲ್ ಎಂ ಅಧ್ಯಕ್ಷರಾದ ರುಕ್ಮಿಣಿ ರವರು ಹಾಗು ಮುಂತಾದವರು ಉಪಸ್ಥಿತರಿದ್ದರು.

ವರದಿ:ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code