ಶಬರಮಲೆಯಲ್ಲಿ ನಾಲ್ಕು ಭಾಷೆಯಲ್ಲಿ ಅನೌನ್ಸ್ ಮಾಡುವ ವ್ಯಕ್ತಿ ಚಿಕ್ಕಮಗಳೂರಿ ನವರ
(KERALA):ಚಿಕ್ಕಮಗಳೂರು ಜಿಲ್ಲೆಯ ಬೈರವಳ್ಳಿ ಗ್ರಾಮ ಪಂಚಾಯತಿ ಸದಸ್ಯರಾಗಿರುವ 49 ವರ್ಷ ವಯಸ್ಸಿನ ಕುಮಾರ್ ಅವರು ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುವುದಕ್ಕೆ ಸದಾ ಮುಂದಾಗುತ್ತಾರೆ. ಆದಾಗ್ಯೂ, ಕುಮಾರ್ ಪ್ರತಿ ವರ್ಷ ಶಬರಿಮಲೆ ಯಾತ್ರೆಯ ಸಮಯದಲ್ಲಿ ಭಕ್ತನಾಗಿ ಮಾತ್ರವಲ್ಲದೆ ಯಾತ್ರಿಕರಿಗೆ ಮಾರ್ಗಸೂಚಿಗಳು, ನಿಯಮಗಳು ಮತ್ತು ಸೂಚನೆಗಳ ಬಗ್ಗೆ ತಿಳಿಸುವ ಅನೌನ್ಸರ್ ಆಗಿ ಬೆಟ್ಟದ ದೇಗುಲಕ್ಕೆ ಬರಲು ಸಮಯ ಮಾಡಿಕೊಳ್ಳುತ್ತಾರೆ.
ಶಬರಿಮಲೆಗೆ ಬರುವ ಭಕ್ತರಿಗೆ ನಾಲ್ಕು ಭಾಷೆಯಲ್ಲಿ ಮಾಹಿತಿಯನ್ನು ನೀಡುವ ಕುಮಾರ್ ಅವರು ಮಲಯಾಳಂ, ಕನ್ನಡ, ತಮಿಳು, ತೆಲುಗು ಈ ಭಾಷೆಗಳಲ್ಲಿ ಮಾರ್ಗಸೂಚಿಯನ್ನು ತಿಳಿಸುತ್ತಾ ಬಂದಿರುತ್ತಾರೆ.
ಕುಮಾರ್ ಮೊದಲು ಮೈಕ್ ಕೈಗೆತ್ತಿಕೊಂಡಾಗ 26 ವರ್ಷ ವಯಸ್ಸಾಗಿತ್ತು. ಅದು 2000ನೇ ಇಸವಿಯಲ್ಲಿ ಆರಂಭಗೊಂಡ ಅವರ ಅನೌನ್ಸ್ಮೆಂಟ್ ವೃತ್ತಿಯು ಪಂಪೆ, ಹಾಗೂ ನೀಲಕ್ಕಲ್ ನಲ್ಲಿ ಭಕ್ತರಿಗೆ ಸೂಚನೆ ಅನೌನ್ಸ್ಮೆಂಟ್ ಗಳನ್ನು ಮಾಡುತ್ತಿದ್ದು ಈಗ ಶಬರಿಮಲೆಯಲ್ಲಿ ಅನೌನ್ಸ್ ಮಾಡಲು ಎಂದಿದ್ದಾರೆ.