ಕೋಲಾರನ್ಯೂಸ್

ಮಕ್ಕಳ ವಿವಿಧ ವೇಷಭೂಷಣಗಳು ಮಕ್ಕಳ ಸಂತೆಯ ದೃಶ್ಯಾವಳಿಯ ಮೆರಗು.

ಮಕ್ಕಳ ವಿವಿಧ ವೇಷಭೂಷಣಗಳು ಮಕ್ಕಳ ಸಂತೆಯ ದೃಶ್ಯಾವಳಿಯ ಮೆರಗು.

(KOLARA): ಬಂಗಾರಪೇಟೆ ತಾಲೂಕಿನ ಬೂದಿಕೋಟೆಯ ದಿ ಜ್ಯೋತಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ ವಿವಿಧ ವೇಷಭೂಷಣಗಳು ಮಕ್ಕಳ ಸಂತೆ ಹಾಗೂ ನಮ್ಮ ಹಿಂದೂ ಸಂಪ್ರದಾಯದ ಹಬ್ಬಗಳದ ಯುಗಾದಿ ಹಬ್ಬ, ಶ್ರೀ ರಾಮನವಮಿ, ಸಂಕ್ರಾಂತಿ ,ನವರಾತ್ರಿ, ವರಮಹಾಲಕ್ಷ್ಮಿ ಹಬ್ಬ,ದೀಪಾವಳಿ,ಗಣೇಶ ಹಬ್ಬ, ಹಾಗೂ ಮುಸಲ್ಮಾನರ ಹಬ್ಬಗಳಾದ ರಂಜಾನ್, ಬಕ್ರಿದ್, ಕ್ರೈಸ್ತರ ಹಬ್ಬವಾದ ಕ್ರಿಸ್ಮಸ್ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ವಿಶೇಷವಾಗಿ ಶಾಲೆಯಲ್ಲಿ ದೃಶ್ಯಾವಳಿ ಮೆರಗು ತಂದಿತ್ತು.

ಮಕ್ಕಳನ್ನು ಆಟ- ಪಾಠಗಳಲ್ಲಿ ಸಕ್ರಿಯವಾಗಿರಿಸಲು ಬೂದಿಕೋಟೆಯ ದಿ ಜ್ಯೋತಿ ಇಂಟರ್ನ್ಯಾಷನಲ್ ಶಾಲೆಯಲ್ಲಿ  ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ವೇಷ ಭೂಷಣ,ಆಯೋಜನೆ.ಇದರ ಭಾಗವಾಗಿ ಮಕ್ಕಳಿಗೆ ವ್ಯಾವಹಾರಿಕ ಜ್ಞಾನವನ್ನೂ ಕೂಡ ಬೆಳೆಸಲು ಒಂದು ದಿನದ ಮಕ್ಕಳ ಸಂತೆ, ಮಕ್ಕಳಿಗೆ ಹಿಂದೂ ಸಂಪ್ರದಾಯದ ಹಬ್ಬಗಳನ್ನು ಆಚರಣೆ ಮಾಡುವ ಈ ಕಾರ್ಯಕ್ರಮವನ್ನು ಜ್ಯೋತಿ ಸಮೂಹ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ  ಸತೀಶ್ ಕುಮಾರ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ,ಭಾರತದಲ್ಲಿ ಮೊದಲಿಗೆ ನವೆಂಬರ್ 20 ರಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿತ್ತು. ಕಾರಣ ವಿಶ್ವಸಂಸ್ಥೆಯು ಸಾರ್ವತ್ರಿಕ ಮಕ್ಕಳ ದಿನ ಎಂದು ಈ ದಿನಾಂಕವನ್ನು ಘೋಷಿಸಿತ್ತು.ಆದರೆ ಜವಾಹರಲಾಲ್‌ ನೆಹರೂ ರವರ ಮರಣದ ನಂತರ,ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾದ ಜವಾಹರಲಾಲ್ ನೆಹರು ರವರು 1947 ರಿಂದ 1964 ರವರೆಗೆ ಅಂದರೆ ಅವರ ಮರಣದವರೆಗೂ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು.ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ಅವರ ಧ್ಯೇಯ ವಾಗಿತ್ತು.ಆದ್ದರಿಂದ ಅವರ ಸವಿನೆನಪಿಗಾಗಿ ಅವರ ಜನ್ಮ ದಿನಾಂಕದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಪ್ರತಿವರ್ಷ ಜ್ಯೋತಿ ಇಂಟರ್ನ್ಯಾಷನಲ್ ಶಾಲೆಯಲ್ಲಿ  ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರಲು ವಿಭಿನ್ನ ರೀತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇಂದು ಶಾಲೆಯ ವಾತಾವರಣ ಒಂದು ಹಬ್ಬದ ರೀತಿಯಲ್ಲಿ ಕೂಡಿದೆ. ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸಹ ಮಕ್ಕಳಿಗೆ ನೀಡುತ್ತಿದ್ದಾರೆ.ಅದೇ ರೀತಿ ಈಗ ಹೊಸದಾಗಿ ಪಿಯುಸಿ ಕಾಲೇಜನ್ನು ಸಹ ಪ್ರಾರಂಭ ಮಾಡಿದ್ದಾರೆ.ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರಿಂದಲೇ ಮಕ್ಕಳ ದಾಖಲಾತಿ ಪ್ರತಿ ವರ್ಷ ಹೆಚ್ಚಳವಾಗುತ್ತಿದೆ. ಈ ಗಡಿ ಭಾಗದಲ್ಲಿ ಇದೇ ರೀತಿ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ನೀಡಿ ಎಂದರು.


ಈ ಸಂದರ್ಭದಲ್ಲಿ ಜ್ಯೋತಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ಸುಮಲತಾ, ಟ್ರಸ್ಟ್ ಸದಸ್ಯರಾದ  ಕಲಾವತಿ, ಮುಖ್ಯ ಶಿಕ್ಷಕರಾದ ಶಶಿಕಲಾ, ಉಮೇರ ತಾಜ್, ಶಿಕ್ಷಕರಾದ ರೇಣುಕಾ,ಮಮತಾ,ಪಲ್ಲವಿ,ಮಂಜುಳಾ,ಮಂಜುಳಾದೇವಿ, ಗ್ರೇಸ್ ಜಾಯ್ಸ್, ಹುಸೇನಾ, ವೇದಾ,ಪೂಜಾ, ನೇತ್ರಾ, ವಿದ್ಯಾ, ಕನಕ,ಜಯಶ್ರೀ, ಸುರೇಖಾ,ಸತೀಶ್,ರೇವತಿ,ವಿಜಯಲಕ್ಷ್ಮಿ ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code