ವೃದ್ಧನ ಮೇಲೆ ಕಾಡುಕೋಣ ದಾಳಿ: ಆಸ್ಪತ್ರೆಗೆ ದಾಖಲು
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮುಜೇಕಾನು ಸಮೀಪ ಕಾಡುಕೋಣಗಳ ಉಪಟಳಕ್ಕೆ ಇಂದು ವೃದ್ಧರೊಬ್ಬರ ಮೇಲೆ ಕಾಡುಕೋಣ ದಾಳಿ ಮಾಡಿರುವ ಘಟನೆ ನಡೆದಿದೆ.
ನಲ್ಲಿಕೋಟದಲ್ಲಿ ಸುಬ್ಬೇಗೌಡ (65) ಸುಬ್ರಮಣ್ಯ ಅವರ ತೋಟದಲ್ಲಿ ಕೆಲಸ ಮಾಡುವ ವೇಳೆಗೆ ಇದ್ದಕ್ಕಿದ್ದಂತೆ ಸುಬ್ಬೇಗೌಡರ ಮೇಲೆ ಕಾಡುಕೋಣ ಎರಗಿಗೆ. ಕಾಡುಕೋಣ ದಾಳಿಗೆ ಸುಬ್ಬೇಗೌಡರ ತಲೆ ಕುತ್ತಿಗೆಯಲ್ಲಿ ರಂಧ್ರಗಳಾಗಿದ್ದು ರಕ್ತಸ್ರಾವ ಉಂಟಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫಾದರ್ ಮುಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಡುಕೋಣದ ದಾಳಿಯಿಂದ ಗಾಯಗೊಂಡಿರುವ ಸುಬ್ಬೇಗೌಡರಿಗೆ ಅರಣ್ಯ ಇಲಾಖೆ ಪರಿಹಾರ ನೀಡಬೇಕು ಚಿಕಿತ್ಸೆ ವೆಚ್ಚವನ್ನು ಇಲಾಖೆ ಭರಿಸಬೇಕು ಎಂದು ಕಳಸ ತಾಲ್ಲೂಕು ಗೌಡಲು ಜನಾಂಗದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅನಿಲ್ ಮುಂಜೇಕಾನು ಆಗ್ರಹಿಸಿದ್ದಾರೆ.