ಜಿಲ್ಲೆನ್ಯೂಸ್

ಗ್ರಾಮ ಪಂಚಾಯಿತಿಯಲ್ಲಿ ನರೇಗಾದ ಕಾಮಗಾರಿಯ 30 ಲಕ್ಷ ಹಣ ದುರುಪಯೋಗ ದೂರು, ಸ್ಥಳಕ್ಕೆ ಒಂಬುಡ್ಸ್ ಪರ್ಸನ್ ಬೇಟಿ ಪರಿಶೀಲನೆ

ಗ್ರಾಮ ಪಂಚಾಯಿತಿಯಲ್ಲಿ ನರೇಗಾದ ಕಾಮಗಾರಿಯ 30 ಲಕ್ಷ ಹಣ ದುರುಪಯೋಗ ದೂರು, ಸ್ಥಳಕ್ಕೆ ಒಂಬುಡ್ಸ್ ಪರ್ಸನ್ ಬೇಟಿ ಪರಿಶೀಲನೆ

(KOLARA): ಬಂಗಾರಪೇಟೆ : ತಾಲ್ಲೂಕಿನ ಚಿಕ್ಕ ಅಂಕಂಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಕಾಮಗಾರಿಯಲ್ಲಿ 30 ಲಕ್ಷ ಹಣ ದುರುಪಯೋಗ, ಗ್ರಾಮಸ್ಥ ಅರುಣ್ ಕುಮಾರ್ ಜಿಲ್ಲಾ ಪಂಚಾಯಿತಿ ಒಂಬುಡ್ಸ್ ಪರ್ಸನ್ ದೇವರಾಜ್ ರವರಿಗೆ ದೂರು ನೀಡಿದ್ದಾರೆ.

ಚಿಕ್ಕ ಅಂಕಂಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿಗಳನ್ನು ಸುಮಾರು 30 ಲಕ್ಷಕ್ಕೂ ಹೆಚ್ಚು ಹಣವನ್ನು ಜನರಿಗೆ ಕೂಲಿ ಕೊಡುವ ನೆಪದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಇಂಜಿನಿಯರ್ ಸೇರಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಹಾಗೂ ಖಾಸಗಿ ಕಂಪನಿಗಳಿಗೆ ಹೋಗುವ ವ್ಯಕ್ತಿಗಳಿಗೆ ಹಣ ಪಾವತಿಸಿರುತ್ತಾರೆ.ಹಾಗೂ ಕೆಲವೊಂದು ಕಾಮಗಾರಿಗಳನ್ನು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡು, ಉದ್ಯೋಗ ಚೀಟಿದಾರರ ಕೈಯಲ್ಲಿ ಮಾಡಿಸದೆ ಜೆಸಿಬಿ ಯಂತ್ರ ಬಳಸಿ ಮಾಡಿಸಿದ್ದಾರೆ ಎಂದು ದೂರು ನೀಡಲಾಗಿದೆ.

ಈ ಬಗ್ಗೆ ದಾಖಲೆಗಳ ಸಹಿತ ದೂರನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ಇಂದು ಸ್ಥಳಕ್ಕೆ ಒಂಬುಡ್ಸ್ ಪರ್ಸನ್ ದೇವರಾಜ್ ಅವರು ಬೇಟಿ ಕೊಟ್ಟು ಕಾಮಗಾರಿಗಳನ್ನು ಪರಿಶೀಲನೆ ಮಾಡಿದ್ದಾರೆ.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code