2023-24 ನೇ ಸಾಲಿನ ಎನ್.ಆರ್.ಪುರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ.
(ಚಿಕ್ಕಮಗಳೂರು): 2023-24ನೇ ಸಾಲಿನ ಎನ್.ಆರ್.ಪುರ ತಾಲ್ಲೂಕು ದಸರಾ ಕ್ರೀಡಾ ಕೂಟವನ್ನು ದಿನಾಂಕ:25-09-2023ರಂದು ಈರು ಸರ್ಕಾರಿ ಪ್ರೌಢ ಶಾಲೆ, ಆಟದ ಮೈದಾನ ಮೇಲ್ಪಾಲ್ ಹಾಗೂ ಗ್ರಾಮ ಪಂಚಾಯಿತಿ ಆಟದ ಮೈದಾನ ಕರ್ಕೆಶ್ವರ, ಎನ್.ಆರ್. ಪುರ ತಾಲ್ಲೂಕು, ಇಲ್ಲಿ ಬೆಳಗ್ಗೆ 9-10ಕ್ಕೆ ಪುರುಷರು ಮತ್ತು ಮಹಿಳೆಯರಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ: 22-09-2023 ರೊಳಗೆ ಶ್ರೀ ಸುಬ್ಬರಾಯ ದೈಹಿಕ ಶಿಕ್ಷಣ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರ್ಕೇಶ್ವರ ಅವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಕೋರಲಾಗಿದೆ.
ಕ್ರೀಡಾಕೂಟದ ಸ್ಪರ್ಧೆಗಳ ವಿವರ ಈ ಕೆಳಕಂಡಂತ್ತಿರುತ್ತದೆ.
ಪುರುಷರಿಗೆ : 100 ಮೀ,200 ಮೀ, 400 ಮೀ, 800 ಮೀ ,1500 ಮೀ , 5000 ಮೀ , 10,000 ಮೀ ಓಟ.
ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ , ತ್ರಿಬಲ್ ಜಂಪ್, ಜಾವಲಿನ್ ಎಸೆತ, 4 X 100 ರಿಲೆ, 4* 400 ರಿಲೆ ,
ಗುಂಪು ಸ್ಪರ್ಧೆಗಳು: ವಾಲಿಬಾಲ್, ಕಬಡ್ಡಿ, ಖೋಖೋ, ಥ್ರೋ ಬಾಲ್, ಯೋಗ, ಸೆಟಲ್ ಬ್ಯಾಡ್ಮಿಂಟನ್ , ಬಾಲ್ ಬ್ಯಾಡ್ಮಿಂಟನ್, ತಾಲೂಕು ಮಟ್ಟದಲ್ಲಿ ಆಯ್ಕೆ ಮಾಡಲಾಗುವುದು.
ಮಹಿಳೆಯರಿಗೆ : 100 ಮೀ,200 ಮೀ, 400 ಮೀ, 800 ಮೀ ,1500 ಮೀ , 5000 ಮೀ , 10,000 ಮೀ ಓಟ.
ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ , ತ್ರಿಬಲ್ ಜಂಪ್, ಜಾವಲಿನ್ ಎಸೆತ, 4 X 100 ರಿಲೆ, 4* 400 ರಿಲೆ ,
ಫುಟ್‌ಬಾಲ್, ಹಾಕಿ , ಹ್ಯಾಂಡ್ ಬಾಲ್ , ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್ ಸ್ಪರ್ಧೆಗಳನ್ನು ಜಿಲ್ಲಾ ಮಟ್ಟದಲ್ಲಿ ನೇರವಾಗಿ ನಡೆಸಲಾಗುವುದು.
ಸಾರ್ವಜನಿಕರು, ಕ್ರೀಡಾಪಟುಗಳು ಈ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಾಗಿ ಉಪ ನಿರ್ದೇಶಕರು,ಯುವ ಸಬಲೀಕರಣ, ಕ್ರೀಡಾ ಇಲಾಖೆ ಚಿಕ್ಕಮಗಳೂರು ಇವರು ಕೋರಿದ್ದಾರೆ.