ಕೋಲಾರನ್ಯೂಸ್

ನಡು ರಸ್ತೆಯಲ್ಲಿ ಯುವಕರ ಡೆಡ್ಲಿ ವೀಲಿಂಗ್ ಹುಚ್ಚಾಟ, ಸಾರ್ವಜನಿಕರಿಗೆ ತೊಂದರೆ.

ನಡು ರಸ್ತೆಯಲ್ಲಿ ಯುವಕರ ಡೆಡ್ಲಿ ವೀಲಿಂಗ್ ಹುಚ್ಚಾಟ, ಸಾರ್ವಜನಿಕರಿಗೆ ತೊಂದರೆ.

(KOLARA): ತಾಲೂಕಿನ ಕಾಮಸಮುದ್ರದ ಮುಖ್ಯರಸ್ತೆಯಲ್ಲಿ ಬೈಕ್ನಲ್ಲಿ ಯುವಕರು ಡೆಡ್ಲಿ ವಿಲೀಂಗ್ ಮಾಡಿ ಹುಚ್ಚಾಟ ಮೆರೆದಿದ್ದು, ಈ ಪುಂಡರ ಹುಚ್ಚಾಟವನ್ನ ಸಾರ್ವಜನಿಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದು, ವಿಲೀಂಗ್ ಹುಚ್ಚಾಟದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ತಾಲೂಕಿನ ಕಾಮಸಮುದ್ರದ ಮುಖ್ಯ ರಸ್ತೆಯಲ್ಲಿ ಯುವಕರು ರಸ್ತೆ ಉದ್ದಕ್ಕೂ ವೀಲಿಂಗ್ ಮಾಡುತ್ತಾ ಹೋಗಿರುವ ಘಟನೆ ಶನಿವಾರ ಮಧ್ಯಾಹ್ನ 2:30 ರಲ್ಲಿ ನಡೆದಿದೆ.

ಪೊಲೀಸ್ ಇಲಾಖೆ ಎಷ್ಟೇ ಕಠಿಣ ಕ್ರಮ ಕೈಗೊಂಡರು ಪುಂಡರ ವೀಲಿಂಗ್ ಹಾವಳಿ ಮಾತ್ರ ತಡೆಯಲಾಗುತ್ತಿಲ್ಲ. ಹೌದು ತಾಲೂಕಿನಲ್ಲಿ ವೀಲಿಂಗ್ ಪುಂಡರ ಹಾವಳಿ ಮೀತಿಮೀರಿದೆ. ಇವರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ಯುವಕರು ವ್ಹೀಲಿಂಗ್ ಮಾಡುತ್ತಾ ಇತರೆ ಸವಾರರಿಗೆ ತೊಂದರೆ ಕೊಡುತ್ತಿದ್ದಾರೆ. ರಸ್ತೆಯಲ್ಲಿ ಬರುವ ಇತರೆ ವಾಹನಗಳಿಗೆ ದಾರಿ ಬಿಡದೆ ಪುಂಡಾಟವಾಡುತ್ತಿದ್ದಾರೆ. ಯುವಕರು ವ್ಹೀಲಿಂಗ್ ಮಾಡುತ್ತಿರುವ ದೃಶ್ಯವನ್ನು ಕಾರಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಿತ್ಯವೂ ಇಂತಹ ವ್ಹೀಲಿಂಗ್ ಪುಂಡರಿಂದ ವಾಹನ ಸವಾರರಿಗೆ ಫಜೀತಿಯಾಗಿದೆ. ಈ ಪುಂಡರಿಂದ ವಾಹನ ಸವಾರರು ಪ್ರಾಣಾಪಾಯ ಭೀತಿಯಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಪುಂಡರು ಕಿಲೋಮೀಟರ್ಗಟ್ಟಲೆ ವ್ಹೀಲಿಂಗ್ ಮಾಡುತ್ತಾ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಇತರೆ ವಾಹನ ಸವಾರರು ಆಗ್ರಹಿಸಿದ್ದಾರೆ.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code