ಕೋಲಾರನ್ಯೂಸ್

ಚಾಕಾರಸನಹಳ್ಳಿ ಶಾಲೆಯಲ್ಲಿ ನೋಟ್ ಪುಸ್ತಕ ಮತ್ತು ಬ್ಯಾಗ್ ವಿತರಣೆ

ಚಾಕಾರಸನಹಳ್ಳಿ ಶಾಲೆಯಲ್ಲಿ ನೋಟ್ ಪುಸ್ತಕ ಮತ್ತು ಬ್ಯಾಗ್ ವಿತರಣೆ

(KOLARA): ಕೋಲಾರ : ತಾಲೂಕಿನ ಬೆಳಮಾರನಹಳ್ಳಿ ಪಂಚಾಯತಿಯ ಚಾಕಾರಸನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಪ್ಸನ್  ಇಂಡಿಯಾಪ್ರೈವೇಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ಒಂದರಿಂದ ಐದನೇ ತರಗತಿ ಮಕ್ಕಳಿಗೆ ಪುಸ್ತಕ ಮತ್ತು ಬ್ಯಾಗ್ 6 ರಿಂದ 7ನೇ ತರಗತಿ ಮಕ್ಕಳಿಗೆ ನೋಟ್ ಪುಸ್ತಕ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಶಾಲೆಯ ಮುಖ್ಯೋಪದ್ಯಾಯರಾದ ಡಾ.ಇಂಚರ ನಾರಾಯಣಸ್ವಾಮಿ ರವರು ಮಾತನಾಡಿ ಎಪ್ಸನ್ ಸಂಸ್ಥೆ ಸುಮಾರು ಹತ್ತು ವರ್ಷಗಳಿಂದ ಶಿಕ್ಷಕರ ಗೆಳೆಯರ ಬಳಗದೊಂದಿಗೆ ಒಡಗೂಡಿ ತಾಲ್ಲೂಕಿನ ಎಲ್ಲಾ ಮಕ್ಕಳ ವಿದ್ಯಾರ್ಜನೆಗೆ ಶ್ರಮಿಸುತ್ತಿರುವ ಸಂಸ್ಥೆಗೆ ನಾವೆಂದಿಗೂ ಚಿರಋಣಿಗಳು ಎಂದು ಹೇಳಿದರು. ಹಾಗೆಯೇ ಈ ಶಾಲೆಗೆ ಸ್ಮಾರ್ಟ್ ಕ್ಲಾಸ್ ಗೆ ಬೇಕಾದಂತ ಪರಿಕರಗಳನ್ನು ಒದಗಿಸಿ ಕೊಡಬೇಕೆಂದು ಇದೇ ಸಂದರ್ಭದಲ್ಲಿ ಅವರ ಗಮನಕ್ಕೆ ತಂದರು.

ಸಂಸ್ಥೆಯಿಂದ ಆಗಮಿಸಿದಂತ ದಿವಾಕರ್ ಸುನಿಲ್ ಕುಮಾರ್ ಮತ್ತು ಸಾಗರ್ ಮಾರ್ಗದರ್ಶಿಕ ಶಿಕ್ಷಕರಾಗಿ ಆಯ್ಕೆಯಾಗಿ ಆಗಮಿಸಿದಂತ ವೆಂಕಟರಾಮ್ ಇವರ ಸೇವೆ ಮತ್ತು ಸರಳತೆಯನ್ನು ಕಂಡು ಮಕ್ಕಳು ಖುಷಿಪಟ್ಟರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಹೇಮಲತಾ.ಎಂ, ರಮೇಶ್, ಜಿಪಿಟಿ ಶಿಕ್ಷಕರಾದಂತಹ ಆಶಾ ನಾಯ್ಕ, ಆರ್ ಜಲ ರವರು ಉಪಸ್ಥಿತರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code