ಜಿಲ್ಲೆನ್ಯೂಸ್

ಜ.26 ರಂದು ಕೋಟಿಪುರದಲ್ಲಿ ಜಿಲ್ಲಾ ಮಟ್ಟದ ಐದನೇ ಜಾನಪದ ಸಮ್ಮೇಳನ ಮತ್ತು ಯುವ ಸಂಭ್ರಮ ಕಾರ್ಯಕ್ರಮ

ಜ.26 ರಂದು ಕೋಟಿಪುರದಲ್ಲಿ ಜಿಲ್ಲಾ ಮಟ್ಟದ ಐದನೇ ಜಾನಪದ ಸಮ್ಮೇಳನ ಮತ್ತು ಯುವ ಸಂಭ್ರಮ ಕಾರ್ಯಕ್ರಮ


(SHIVAMOGA): ಸೊರಬ: ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಶಿವಮೊಗ್ಗ ಹಾಗೂ ಸೊರಬ ತಾಲೂಕು ಘಟಕದ ಸಹಕಾರದೊಂದಿಗೆ ಜ.26 ರಂದು ಆನವಟ್ಟಿಯ ಎವರಾನ್ ಶಾಲಾ ಆವರಣದಲ್ಲಿ ಜಿಲ್ಲಾ ಮಟ್ಟದ ಐದನೇ ಜಾನಪದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಅನವಟ್ಟಿ ಘಟಕದ ಅಧ್ಯಕ್ಷ ಖಲಂದರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂದು ಬೆಳಿಗ್ಗೆ 9 ಗಂಟೆಯಿಂದ ಜಿಲ್ಲೆಯ ಎಲ್ಲಾ ಕಲಾ ತಂಡಗಳಿಂದ ಪುರ ಮೆರವಣಿಗೆ ಏರ್ಪಡಿಸಲಾಗಿದ್ದು, ಪುರ ಮೆರವಣಿಗೆಯ ನಂತರ ಸಂಜೆ 4 ಗಂಟೆಯವರೆಗೆ ಜಿಲ್ಲೆಯ ಪ್ರಸಿದ್ದ ಕಲಾ ತಂಡಗಳಿಂದ ಪ್ರದರ್ಶನ ನಡೆಯಲಿದೆ. ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಮಾತನಾಡಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಡಿ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಲಾವಣಿ ಕಲಾವಿದ ಈಸೂರಿನ ಬೇಗೂರು ಶಿವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಯುವ ಸಂಭ್ರಮ ಕಾರ್ಯಕ್ರಮ:

ತಾಲೂಕು ಯುವ ಜನ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್ ಕಾರ್ತಿಕ್ ಸಾಹುಕಾರ್ ಮಾತನಾಡಿ ಅದೇ ದಿನ ಸಂಜೆ 6 ಗಂಟೆಯಿಂದ ತಾಲೂಕು ಯುವಜನ ಸಂಘದ ವಾರ್ಷಿಕೋತ್ಸವದ ಅಂಗವಾಗಿ *ಯುವ ಸಂಭ್ರಮ ಕಾರ್ಯಕ್ರಮ* ವನ್ನು ಏರ್ಪಡಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಧಾರವಾಹಿ ಖ್ಯಾತಿಯ ನಾಯಕ ನಟ ತಾಂಡವ್ ಚಿತ್ರನಟ ನಾಗೇಶ್ವರ್, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಅಂಬರೀಶ್ ಅವರಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ಆಯ್ದ ಶಾಲಾ ಮಕ್ಕಳಿಂದ ವಿಶಿಷ್ಟ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ತಾಲೂಕು ಯುವಜನ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಹುರುಳಿಕೊಪ್ಪ ಮಾತನಾಡಿ, ತಾಲೂಕು ಯುವಜನ ಸಂಘವು ಕಳೆದ 29 ವರ್ಷಗಳಿಂದ ಚಟುವಟಿಕೆಯಲ್ಲಿದ್ದು, ಆರೋಗ್ಯ ತಪಾಸಣಾ ಶಿಬಿರ, ಸಾಧಕರಿಗೆ ಸನ್ಮಾನ, ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕಗಳ ವಿತರಣೆ ಮುಂತಾದ ಸಾಮಾಜಿಕ ಕಾರ್ಯವನ್ನು ಮುಂದುವರೆಸಿಕೊಂಡು ಬರುತ್ತಿದ್ದು, 30 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಯುವ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಲಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್, ಕನ್ನಡ ಸಾಹಿತ್ಯ ಪರಿಷತ್ ಅನವಟ್ಟಿ ಘಟಕದ ಅಧ್ಯಕ್ಷ ಬಸವನಗೌಡ ಮಲ್ಲಾಪುರ, ಸಂಪತ್ ಕುಮಾರ್ ಹೆಚ್.ಸಿ, ಅಭಿಲಾಷ್ ಹುರುಳಿಕೊಪ್ಪ, ಸತೀಶ್ ಹೊಸಳ್ಳಿ, ಮಂಜುನಾಥ ಇ.ಡಿ ಉಪಸ್ಥಿತರಿದ್ದರು.


ವರದಿ: ಸಂದೀಪ ಯು.ಎಲ್, ವೆಸ್ಟರ್ನ್ ಘಾಟ್ ನ್ಯೂಸ್ ಸೊರಬ

Leave a Reply

Your email address will not be published. Required fields are marked *

Scan the code