ನ್ಯೂಸ್ಶಿವಮೊಗ್ಗ

ರೈತರಿಗೆ ಸಾವಯುವ ಔಷಧಿ ಉತ್ಪನ್ನಗಳು ಪರಿಚಯಿಸಿದ ಡಾ. ಹೈನಿಶ್ ಆಗ್ರೋ ಸೊಲ್ಯೂಷನ್ಸ್ ಇಂಡಿಯಾ ಪ್ರೈ.ಲಿ.

ರೈತರಿಗೆ ಸಾವಯುವ ಔಷಧಿ ಉತ್ಪನ್ನಗಳು ಪರಿಚಯಿಸಿದ ಡಾ. ಹೈನಿಶ್ ಆಗ್ರೋ ಸೊಲ್ಯೂಷನ್ಸ್ ಇಂಡಿಯಾ ಪ್ರೈ.ಲಿ.

ಸಾಗರ ವಿಶ್ವದ 80ಕ್ಕೂ ಹೆಚ್ಚು ದೇಶಗಳಲ್ಲಿ ರೈತರಿಗಾಗಿ ಕೆಲಸ ಮಾಡುತ್ತಿರುವ ಸಂಸ್ಥೆಯು ಭಾರತದಲ್ಲಿ ಮಲೆನಾಡು ಭಾಗದ ರೈತರಿಗೆ ಅದರಲ್ಲೂ ಪ್ರಮುಖವಾಗಿ ಅಡಕೆ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಸಾವಯವ ಔಷಧಿಗಳು, ಉತ್ಪನ್ನಗಳನ್ನು ಪರಿಚಯಿಸಿದೆ ಎಂದು ಡಾ. ಹೈನಿಶ್ ಆಗ್ರೋ ಸೊಲ್ಯೂಷನ್ಸ್ ಇಂಡಿಯಾ ಪ್ರೈ.ಲಿ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ರಜನೀ ರಾಣಾ ಹೇಳಿದರು.


ತಾಲೂಕಿನ ವರದಾಮೂಲದಲ್ಲಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ, ವರದಾಂಬಾ ದೇವಸ್ಥಾನ ಅಭಿವೃದ್ಧಿ ಮಂಡಳಿ, ವರದಾಮೂಲ ಹಾಲು ಉತ್ಪಾದಕರ ಸಂಘಗಳ ಆಶ್ರಯದಲ್ಲಿ ರೈತರೊಂದಿಗಿನ ಸಂವಾದದಲ್ಲಿ ಅವರು ಭಾನುವಾರ ಪಾಲ್ಗೊಂಡು ಮಾತನಾಡಿದರು.
ಇದು ಜರ್ಮನಿ ಮೂಲದ ಕಂಪೆನಿಯಾಗಿದ್ದು, ಈಗ ಭಾರತದಲ್ಲಿ ಪ್ರಮುಖವಾಗಿ ಮಲೆನಾಡು ಭಾಗದ ಅಡಕೆ ಬೆಳೆಗಾರರು ಈ ಉತ್ಪನ್ನಗಳನ್ನು ಬಳಸುವುದರಿಂದ ಅಡಗೆ ಬೆಳೆಯ ಇಳುವರಿ ಹೆಚ್ಚಿಸಬಹುದಾಗಿದೆ. ಜತೆಯಲ್ಲಿ ರೈತರು ಎದುರಿಸುತ್ತಿರುವ ಎಲೆ ಚುಕ್ಕಿ ರೋಗ, ಮಣಿಕಟ್ಟು ಉದುರುವ ಸಮಸ್ಯೆ, ಮೊದಲಾದ ರೋಗಗಳ ಹತೋಟಿಗೂ ಸಹಕಾರಿಯಾಗಲಿದೆ. ಭಾರತದ ವಿಜ್ಞಾನಿಗಳೂ ನಮ್ಮೊಂದಿಗೆ ಕೈಜೊಡಿಸಿದ್ದು, ಅವರ ಮಾರ್ಗದರ್ಶನದಲ್ಲಿ ಕೃಷಿಕರಿಗೆ ಅಗತ್ಯವಿರುವ ಔಷಧಿಗಳ ತಯಾರಿಕೆಗೆ ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ರೈತರು, ಪ್ರಗತಿಪರ ಕೃಷಿಕರ ಸಲಹೆ, ಸಹಕಾರವೂ ಅಗತ್ಯವಿದೆ ಎಂದರು.
ಕೃಷಿ ಮತ್ತು ಕುಕ್ಕುಟೋದ್ಯಮ ವಲಯದ ನವೀನ ಉತ್ಪನ್ನಗಳ ಸುಸ್ಥಿರ ಅಭಿವೃದ್ಧಿಗೆ ಬದ್ಧವಾಗಿದೆ. ಕೃಷಿ ಸಂಬoಧಿತ ಉದ್ಯಮ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದ ಸಂಸ್ಥೆಯಾಗಿದ್ದು, ನಿಖರ ಮತ್ತು ಸ್ಮಾರ್ಟ್ ಕೃಷಿ ವ್ಯವಸ್ಥೆಗಳಲ್ಲಿ ಇತ್ತೀಚಿನ ಪ್ರಗತಿಯ ನ್ಯಾನೊ ತಂತ್ರಜ್ಞಾನದೊoದಿಗೆ ರೈತರಿಗೆ ಗುಣಮಟ್ಟದ ಉತ್ಪನ್ನಗಳನ್ನು ತಲುಪಿಸುವ ಉದ್ದೇಶ ಹೊಂದಿದೆ. ಜತೆಯಲ್ಲಿ ಪರಿಸರ ಸ್ನೇಹಿ ಕೃಷಿ ಪರಿಹಾರಗಳಿಗೆ ಬದ್ಧವಾಗಿದೆ ಎಂದು ಹೇಳಿದರು.


ಸ್ಥಳೀಯ ತೋಟದಲ್ಲಿ ಕಂಪೆನಿಯ ಉತ್ಪನ್ನಗಳ ಸಿಂಪಡಣೆ ಹಾಗೂ ರೈತರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಕರ‍್ಯಕ್ರಮದ ಅಧ್ಯಕ್ಷತೆಯನ್ನು ವರದಾಮೂಲ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ. ಮಂಜುನಾಥ ವಹಿಸಿದ್ದರು. ವೇದಿಕೆಯಲ್ಲಿ ಭೀಮನಕೋಣೆ ಪ್ಯಾಕ್ಸ್ ಅಧ್ಯಕ್ಷ ರಾಜೇಶ್ ಕೇಡಲಸರ, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಅಶೋಕ ಕಾಶಿ, ಡಾ. ನಾರಾಯಣ ಸ್ವಾಮಿ, ಡಾ. ಮಂಜುನಾಥ, ಡಾ. ನರೇಂದ್ರ, ವ.ಶಂ. ರಾಮಚಂದ್ರ ಭಟ್, ರಾಜಶೇಖರ, ಲಕ್ಷ್ಮಿನಾರಾಯಣ, ಗಣಪತಿ ವರದಾಮೂಲ, ವರದ ಭಟ್, ಅಮರ ಮೊದಲಾದವರು ಹಾಜರಿದ್ದರು. ಬಸವರಾಜ್ ಸ್ವಾಗತಿಸಿದರು. ನಾರಾಯಣ ಸ್ವಾಮಿ ವಂದಿಸಿದರು.
ಫೋಟೋ 2೦ ಎಸ್‌ಜಿಆರ್ 2 ತಾಲೂಕಿನ ವರದಾಮೂಲದಲ್ಲಿ ಡಾ. ಹೈನಿಶ್ ಆಗ್ರೋ ಸಂಸ್ಥೆಯವರು ಅಡಕೆ ಬೆಳೆಗಾರರೊಂದಿಗೆ ಸಂವಾದ ನಡೆಸಿದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code