ನ್ಯೂಸ್ಶಿವಮೊಗ್ಗ

ಬತ್ತಿದ ಲಿಂಗನಮಕ್ಕಿ: ನಿಂತ ಹಸಿರುಮಕ್ಕಿ ಲಾಂಚ್

ಬತ್ತಿದ ಲಿಂಗನಮಕ್ಕಿ: ನಿಂತ ಹಸಿರುಮಕ್ಕಿ ಲಾಂಚ್

(SHIVAMOGA): 2023 ರಲ್ಲಿ ಉತ್ತಮ ಮಳೆಯಾಗದೆ ನೀರಿನ ಮಟ್ಟ ಇಳಿಕೆಯಾದ ಹಿನ್ನೆಲೆ ಶರಾವತಿ ಹಿನ್ನೀರು ಭಾಗದ ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಳೆ ಕೊರತೆ ಮತ್ತು ಭಾರಿ ಬಿಸಿಲಿನ ಪರಿಣಾಮ ಶರಾವತಿ ನದಿಯಲ್ಲಿ ನೀರಿನ ಮಟ್ಟ ತಗ್ಗಿದೆ.


ನೀರಿನ ಆಳದಲ್ಲಿದ್ದ ಮರದ ದಿಮ್ಮಿಗಳು ಮೇಲೆ ಬರುತ್ತಿವೆ. ಇವು ಲಾಂಚ್‌ಗೆ ತಾಗಿ ಹಾನಿ ಉಂಟು ಮಾಡಲಿವೆ. ಈ ಹಿನ್ನೆಲೆ ಲಾಂಚ್‌ ಸೇವೆ ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ನೀರಿನ ಮಟ್ಟ ಹೆಚ್ಚಳವಾಗುವವರೆಗೆ ಹಸಿರುಮಕ್ಕಿ ಲಾಂಚ್‌ ಸೇವೆ ಇರುವುದಿಲ್ಲ. ಕಳೆದ ಒಂದು ವಾರದಿಂದ ಲಾಂಚ್‌ನಲ್ಲಿ ಜನರ ಜೊತೆಗೆ ಲಘು ಮತ್ತು ದ್ವಿಚಕ್ರ ವಾಹನಗಳನ್ನು ಮಾತ್ರ ದಾಟಿಸಲಾಗುತ್ತಿತ್ತು. ಈಗ ಲಾಂಚ್‌ ಸೇವೆ ಸಂಪೂರ್ಣಗ ಸ್ಥಗಿತವಾಗಿದೆ.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code