ಮೈಸೂರು ಗುಡಿಕಾರ ಸಹಕಾರ ಸಂಘ ಸಂಸ್ಥೆಯ ಐದು ವರ್ಷ ಅವಧಿಗೆ ಪದಾಧಿಕಾರಿಗಳ ಆಯ್ಕೆ.
(SHIVAMOGA): ಮೈಸೂರು ಗುಡಿಗಾರರ ಸಹಕಾರ ಸಂಘ ನಿ ಸಾಗರ ಸಂಸ್ಥೆಯ 5ವರ್ಷಗಳ ಅವದಿಗೆ ಜನವರಿ 1ರಂದು ಸಂಘದ ಕಛೇರಿಯಲ್ಲಿ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಲೋಕೇಶ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಎಸ್.ಆರ್.ಪ್ರಭಾಕರ್ ಅವರು ಅವಿರೋಧವಾಗಿ ಪುನರ್ ಆಯ್ಕೆಯಾಗಿದ್ದಾರೆ.
ಹಾಗೂಉಳಿದಂತೆ ನಿರ್ದೇಶಕರಾಗಿ ಸ್ಮಿತಾ ದೇವರಾಜ್, ಮೀನಾಕ್ಷಿ ಎಸ್.ಆರ್ ಮಹಿಳಾ ಮೀಸಲು ಕ್ಷೇತ್ರದಿಂದ,ಹಿಂದುಳಿದ ವರ್ಗಗಳ ಕ್ಷೇತ್ರದಿಂದ ಎಸ್.ಎಂ.ನಾಗರಾಜ್ ಅವರು ಅವಿರೋಧವಾಗಿ ಆಯ್ಕೆ ಆಗಿದ್ದು, ರಂಗನಾಥ ಬಿ.ಗುಡಿಗಾರ್, ರಂಗನಾಥ ಎಸ್.ಗುಡಿಗಾರ್,ವಿನಾಯಕ ಎಸ್.ಜಿ, ಶೇಷಾದ್ರಿ ಟಿ.ಡಿ, ವಿನಾಯಕ ಎಸ್.ಜಿ ವಿನೋಬನಗರ, ಕೃಷ್ಣಮೂರ್ತಿ ಜೆ.ಎ, ಕೃಷ್ಣಮೂರ್ತಿ ಕೆ.ಜಿ ಹಾಗೂ ಸುಬ್ರಹ್ಮಣ್ಯ ಎಸ್.ಎನ್ ಇವರು ಸಾಮಾನ್ಯ ಕ್ಷೇತ್ರಕ್ಕೆ ಡಿಸೆಂಬರ್ 24ರಂದು ನಡೆದ ಚುನಾವಣೆ ಮೂಲಕ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾ ಅಧಿಕಾರಿ ವಿ.ಟಿ.ಸ್ವಾಮಿ ತಿಳಿಸಿದ್ದಾರೆ.
ವರದಿ: ರಾಘವೇಂದ್ರ ತಾಳಗುಪ್ಪ