ಕೋಲಾರನ್ಯೂಸ್

ಪೋಷನ್ ಅಭಿಯಾನ ಸಭೆಗೆ ಇಒ ಗೈರು- ಕೆಂಡಮಂಡಲರಾದ ಮಹಿಳಾ ಆಯೋಗದ ಅಧ್ಯಕ್ಷೆ

ಪೋಷನ್ ಅಭಿಯಾನ ಸಭೆಗೆ ಇಒ ಗೈರು- ಕೆಂಡಮಂಡಲರಾದ ಮಹಿಳಾ ಆಯೋಗದ ಅಧ್ಯಕ್ಷೆ

(KOLARA): ಬಂಗಾರಪೇಟೆ : ನಾನು ಸಭೆಗೆ ಬಂದಾಗ ಎಲ್ಲಾ ಅಧಿಕಾರಿಗಳು ಭಾಗವಹಿಸಬೇಕು ಆದರೆ ಇಲ್ಲಿನ ಇಒ ಗೈರು ಆಗಿದ್ದಾರೆ. ನಾನು ಡಿಸಿ ಅವರಿಗೆ ಪತ್ರ ಬರೆಯುತ್ತೇನೆ ಅವರ ಮೇಲೆ ಕ್ರಮ ಜರಗಿಸಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ರವರು ಕೆಂಡಮಂಡಲರಾದರು.

ತಾಲೂಕಿನ ಚಿಕ್ಕ ಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಟ್ರಕುಂಟೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಶಿಬಿರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೋಷನ್ ಅಭಿಯಾನದ ಕಾರ್ಯಕ್ರಮಕ್ಕೆ ಭಾಗವಹಿಸಿ ಮಾತನಾಡುತ್ತಾ, ನಾನು ಯಾವುದೇ ಅಧಿಕಾರ ಚಲಾಯಿಸಲು ಬರುವುದಿಲ್ಲ, ನಾವು ಮಹಿಳೆಯರಿಗೆ ಶಕ್ತಿ ತುಂಬಲು ಹಾಗೂ ಧ್ವನಿಯಾಗಲು ಹಾಗೂ ಅಧಿಕಾರಿಗಳು ಯಾವ ಕೆಲಸಗಳು ಮಾಡಿದ್ದೀರಿ ಎಂದು ತಿಳಿದುಕೊಳ್ಳಲು ಬರುತ್ತೇವೆ ಎಂದರು.

ನೀವು ಯಾವ ಕೆಲಸ ಮಾಡಿದ್ದೀರಿ ,ಏಕೆ ಮಾಡಿಲ್ಲ, ಮಾಡುತ್ತೀನಿ ಅಂದರೆ ಯಾವಾಗ ಮಾಡುತ್ತೀರಿ,ಯಾವುದೇ ಕೆಲಸಗಳು ಮಾಡೇ ಇಲ್ಲ ಎಂದರೆ ಏನು ಕಾರಣ ಎಂದು ಪ್ರಶ್ನಿಸುತ್ತೇವೆ ತಕ್ಕ ಉತ್ತರ ನೀಡಿಲ್ಲ ಎಂದರೆ ಅಂತ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೆ ಸಂಬಂಧಪಟ್ಟ ಅಧಿಕಾರಿಗಳ ಮುಖಾಂತರ ಸಸ್ಪೆಂಡ್ ಮಾಡಲಾಗುತ್ತದೆ ಎಂದು ಹೇಳಿದರು.

ನಾನು ಇಡೀ ರಾಜ್ಯ್ಯಾದ್ಯಂತ ಓಡಾಡುತ್ತೇನೆ ಕೆಲ ಅಧಿಕಾರಿಗಳು ಇಲ್ಲಸಲ್ಲದ ನೆಪ ಉಡ್ಡಿ ಸಭೆಗಳಿಗೆ ಗೈರು ಆಗುತ್ತಾರೆ, ಮೊದಲೇ ಸಂಬಂಧಪಟ್ಟ ಅಧಿಕಾರಿಗಳ ಮುಖಾಂತರ ಮಾಹಿತಿಯನ್ನು ನೀಡಿರುತ್ತೇವೆ, ಆದರೆ ಇಓ ಗೈರು ಆಗಿರುವುದು ಖಂಡಿಸುತ್ತೇನೆ,ಈ ಸಭೆಗೆ ಅವರು ಇರುವುದು ಬಹಳ ಮುಖ್ಯ, ಎಷ್ಟು ಹಣವನ್ನು ಮಹಿಳೆಯರಿಗೆ ಖರ್ಚು ಮಾಡಿದ್ದೀರಿ ಮತ್ತು ಯಾರ್ಯಾರಿಗೆ ಸಾಲ ನೀಡಿದ್ದೀರಿ ಎಂಬ ಮಾಹಿತಿ ತಿಳಿಸಬೇಕು, ಒಬ್ಬ ಮಹಿಳಾ ಆಯೋಗದ ಅಧ್ಯಕ್ಷರು ಬಂದಾಗಲೇ ನೀವು ಬರಲಿಲ್ಲ ಎಂದರೆ ಮತ್ತೆ ಬೇರೆ ಟೈಮಲ್ಲಿ ಯಾವಾಗ ಜನಕ್ಕೆ ಸಿಗುತ್ತೀರಿ ಅವರಿಗೆ ಯಾವ ಸೌಲಭ್ಯವನ್ನು ಒದಗಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀವು ಮನೆಯಲ್ಲಿ ಕುಳಿತುಕೊಂಡರೆ, ನೀವು ಮನೆಯಲ್ಲಿ ಕುಳಿತುಕೊಳ್ಳುವುದಕ್ಕೆ ಸರ್ಕಾರ ಹಣವನ್ನು ನೀಡುತ್ತಿಲ್ಲ, ನೀನು ಈ ಸಭೆಗೆ ಬರುವುದಿಲ್ಲ ಎಂದು ನನಗೆ ಏನಾದರೂ ಪತ್ರ ನೀಡಿದ್ದೀಯ, ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲ, ಸರ್ಕಾರಿ ಉದ್ಯೋಗ ಪಡೆದ ಮೇಲೆ ಕೆಲಸ ಮಾಡಬೇಕು,ಇಲ್ಲವಾದ ಪಕ್ಷದಲ್ಲಿ ಸರ್ಕಾರಿ ಉದ್ಯೋಗ ಪಡೆಯಬಾರದು ನಿಮಗೆ ಸಂಬಳ ಕೊಡುತ್ತಿದ್ದೇವೆ ಅದು ಜನರ ದುಡ್ಡು ಕೆಲಸ ಮಾಡಿಲ್ಲ ಅಂದರೆ ನಾವು ನಿಮ್ಮನ್ನು ಇಟ್ಟುಕೊಳ್ಳದಿಲ್ಲ, ನಿನ್ನೆ ನಡೆದ ಎಂತಹ ಬೇಸರದ ಸಂಗತಿ ಎಂದರೆ ಕೋಲಾರ ಜಿಲ್ಲೆಯ ರಾಯಲಪಾಡು ಹಕ್ಕಿಪಿಕ್ಕಿ ಕಾಲೋನಿಗೆ ಅಲ್ಲಿರುವಂತಹ ಅಂಗನವಾಡಿ ಕೇಂದ್ರದಲ್ಲಿ ಊಟ ನೀಡುವುದಿಲ್ಲ,ಗರ್ಭಿಣಿಯರಿಗೆ ಯಾವುದೇ ಸೌಲಭ್ಯ ನೀಡಿರುವುದಿಲ್ಲ ಹಾಗೂ ಆರು ತಿಂಗಳಿನಿಂದ ಮೊಟ್ಟೆಯು ಸಹ ನೀಡದೆ ಇದ್ದಾರೆ ಮತ್ತು ಮಧ್ಯಾಹ್ನದ ಊಟವೂ ಸಹ ಇಲ್ಲ ಎಂತಹ ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಇಲ್ಲಿ ಬಂದಿರುವಂತಹ ಎಲ್ಲಾ ಮಹಿಳೆಯರು ಸಹ ತಮ್ಮ ಹಕ್ಕುಗಳ ಬಗ್ಗೆ ತಿಳಿಯಬೇಕು ಹಾಗೂ ಕಾನೂನು ಬಗ್ಗೆ ಅರಿವು ತಿಳಿದಿರಬೇಕು ಆಗ ಮಾತ್ರ ನೀವು ಪ್ರಶ್ನಿಸಲು ಸಾಧ್ಯ,ಸರ್ಕಾರದಿಂದ ನಿಮಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು, ನಿಮ್ಮ ರಕ್ಷಣೆಗಾಗಿ ಸದಾ ಪೊಲೀಸ್ ಇಲಾಖೆ ಇದೆ ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ ನಿಮಗೆ ಏನೇ ಸಮಸ್ಯೆ ಬಂದರೂ ಸಹ ತಕ್ಷಣ ಕರೆ ಮಾಡಿ ಹತ್ತರಿಂದ ಹದಿನೈದು ನಿಮಿಷದಲ್ಲಿ ನಿಮ್ಮ ರಕ್ಷಣೆಗೆ ಬರುತ್ತಾರೆ ಎಂದು ಹೇಳಿದರು.

ಈ ವೇಳೆ ಗ್ರಾಮದ ಗರ್ಭಿಣಿ ಮಹಿಳೆಯರಿಗೆ ಶ್ರೀಮಂತ ನೆರವೇರಿಸಿದರು ಹಾಗೂ ಒಂದು ವರ್ಷ ತುಂಬಿದ ಮಕ್ಕಳಿಗೆ ಅನ್ನ ಸಂತರ್ಪಣೆಯನ್ನು ಸಹ ನೆರವೇರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರಿಜಮ್ಮ, ಮಹಿಳಾ ಸಂಘದ ಅಧ್ಯಕ್ಷ ಗೀತಾ, ಡಿ.ಡಿ ನಾರಾಯಣಸ್ವಾಮಿ, ಡಿಎಚ್ಒ ಶ್ರೀನಿವಾಸ್, ಟಿಎಚ್ಒ ಸುನಿಲ್, ಸಿ ಡಿ ಪಿ ಓ ಮುನಿರಾಜು, ಮಾಜಿ ಅಧ್ಯಕ್ಷರಾದ ಹರೀಶ್ ಕುಮಾರ್, ಕನ್ನಡಪರ ಹೋರಾಟಗಾರ ವೆಂಕಟಪ್ಪ, ಅಂಜಲಿ, ಪ್ರೇಮ, ಅನಿತಾ, ಚಂದ್ರಣ್ಣ, ಶಾಂತಮ್ಮ, ಹರೀಶ್ ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code