ಸಮ- ಸಮಾಜದ ತಲಹದಿ ಸಂವಿಧಾನ: ಎಸ್ ಎನ್ ನಾರಾಯಣಸ್ವಾಮಿ
(KOLARA): ದೇಶದಲ್ಲಿದ್ದಂತಹ ತಾರತಮ್ಯ ಧೋರಣೆಗೆ ಅಂತ್ಯಹಾಕಿ ಜಾತಿ, ಮತ, ಪಂಥ, ಭೇದ -ಭಾವಗಳ ಎಲ್ಲೇಯನ್ನು ಮೀರಿ ಸಮ-ಸಮಾಜ ನಿರ್ಮಾಣಕ್ಕೆ ಭದ್ರ ತಲಹದಿಯಾಗಿ ಸಂವಿಧಾನ ರೂಪಗೊಂಡಿದೆ, ಎಂದು ಶಾಸಕ ಎಸ್ ಎಸ್ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು
ಪಟ್ಟಣದ ಅಂಬೇಡ್ಕರ್ ಉದ್ಯಾನವನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ಕರುಡು ಸಮಿತಿಯ ಅಧ್ಯಕ್ಷರಾಗಿ ದೇಶವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಆಧಾರದ ಮೇಲೆ ಸಮಾನತೆ ಮತ್ತು ಭ್ರಾತೃತ್ವ ಭಾವನೆಯ ನೆಲೆಗಟ್ಟಿನಲ್ಲಿ ದೂರ ದೃಷ್ಟಿ ಮತ್ತು ದೃಢಸಂಕಲ್ಪದೊಂದಿಗೆ ರಚಿಸಿದ್ದಾರೆ ಎಂದರು.
ಶೋಷಿತ ವರ್ಗಗಳ ಭವಿಷ್ಯ ರೂಪಿಸಿದ ಸಂವಿಧಾನ:
1949 ನವೆಂಬರ್ 26ರಂದು ಇಡೀ ವಿಶ್ವಕ್ಕೆ ಮಾದರಿಯಾದ ಬೃಹತ್ ಲಿಖಿತ ಸಂವಿಧಾನವನ್ನು ನಮ್ಮ ದೇಶಕ್ಕೆ ಸಮರ್ಪಿಸಿಕೊಂಡ ಸುದಿನವಾಗಿದೆ, ಅದರ ಸವಿನೆನಪಿಗಾಗಿ ಪ್ರತಿ ವರ್ಷ ನವಂಬರ್ 26ರಂದು ಸಂವಿಧಾನ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ, ಶೋಷಿತರ ಬದುಕಿಗೆ ಆಸರೆಯಾಗಿ ರಾಜಕೀಯವಾಗಿ ಅರ್ಥಿಕವಾಗಿ ಸಾಮಾಜಿಕವಾಗಿ ನ್ಯಾಯ ಒದಗಿಸಿಕೊಟ್ಟ ಸುಸಂದರ್ಭ, ಸಂವಿಧಾನವೆಂದರೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಒಳಗೊಂಡ ಪುಸ್ತಕವಲ್ಲ ಅದು ಕಾನೂನು ಕಟ್ಟಲೆ, ನೀತಿ ನಿಯಮಗಳು, ಸರ್ಕಾರದ ಕಾರ್ಯ ವ್ಯಾಪ್ತಿಯನ್ನು ಸವಿವರವಾಗಿ ಒಳಗೊಂಡ ಆಗಾರ ಗ್ರಂಥವಾಗಿದೆ ಎಂದರು.
ನಂತರ ತಾಲೂಕು ಪಂಚಾಯಿತಿ ಕಛೇರಿಯಲ್ಲಿ ಸಹದ್ಯೋಗಿಗಳೊಂದಿಗೆ ಸಂವಿಧಾನದ ಪ್ರಸ್ಥಾವನೆ ವಾಚನ ಮಾಡಿ ಇ ಓ ರವಿಕುಮಾರ್ ಮಾತನಾಡಿ,
ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಿವಿಧತೆಯಲ್ಲಿ ಏಕತೆ ಹೊಂದಿರುವ ಬೃಹತ್ ರಾಷ್ಟ್ರವಾದ ಭಾರತಕ್ಕೆ ಸಮಾಜವಾದಿ, ಜಾತ್ಯಾತೀತ, ಭ್ರಾತೃತ್ವ, ಸಮಾನತೆಯ ನೆಲೆಗಟ್ಟಿನ ಆಧಾರದ ಮೇಲೆ ಸಂವಿಧಾನವನ್ನು ರಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ತಳಹದಿ ಹಾಕಿಕೊಟ್ಟರು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಗೋವಿಂದ, ಗ್ಯಾರಂಟಿ ಸಮಿತಿ ಅಧ್ಯಕ್ಷ ಪಾರ್ಥಸಾರಥಿ, ತಹಸೀಲ್ದಾರ್ ವೆಂಕಟೇಶಪ್ಪ, ಇಓ ರವಿಕುಮಾರ್, ಬಿಇಒ ಗುರುಮೂರ್ತಿ, ಸಿಒ ಸತ್ಯನಾರಾಯಣ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶೀವಾ ರೆಡ್ಡಿ, ಕೃಷಿ ಇಲಾಖೆ ಅಧಿಕಾರಿ ಪ್ರತೀಭಾ, ಸಿಡಿಪಿಓ ಮುನಿರಾಜು, ಪುರಸಭೆ ಸದಸ್ಯರಾದ ಬಾಳೆ ಹಣ್ಣು ವೆಂಕಟೇಶ್, ಶಂಶುದ್ದಿನ್ ಬಾಬು, ಅರುಣಾಚಲಂ ಮಣಿ, ನಂದಾ, ರಾಕೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಇತರರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ