ರಾಸುವಿಗೆ ಸಮತೋಲನ ಆಹಾರ ನೀಡಿ ಮತ್ತು ಹಾಲಿನಲ್ಲಿ ಕೊಬ್ಬಿನ ಅಂಶ ಇರುವಂತೆ ಹಾಲಿನ ಗುಣಮಟ್ಟ ಕಾಪಾಡಲು ಮನವಿ
(KOLARA ): ಬಂಗಾರಪೇಟೆ :ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಉತ್ಪಾದಿಸಿ ಸಹಕಾರ ಸಂಘಕ್ಕೆ ನೀಡಬೇಕು ಹಾಗೂ ತಮ್ಮ ರಾಸುವಿಗೆ ಸಮತೋಲನ ಆಹಾರ ನೀಡಿ ಮತ್ತು ಹಾಲಿನಲ್ಲಿ ಕೊಬ್ಬಿನ ಅಂಶ ಇರುವಂತೆ ಹಾಲಿನ ಗುಣಮಟ್ಟ ಕಾಪಾಡಲು ಹಾಲು ಉತ್ಪಾದಕರಲ್ಲಿ ವಿಸ್ತಾರಣಾಅಧಿಕಾರಿ ಕಿರಣ್ ಕುಮಾರ್ ಮನವಿ ಮಾಡಿದರು.
ದೊಡ್ಡ ಅಂಕಂಡಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ರತ್ನಮ್ಮ ರವರ ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು,ಹಾಲು ಉತ್ಪಾದಕರ ಸಂಘಕ್ಕೆ 3 ಲಕ್ಷಕ್ಕೂ ಹೆಚ್ಚು ನಿವ್ವಳ ಲಾಭ, ದೊಡ್ಡ ಅಂಕಂಡಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ 2023-24ನೇ ಸಾಲಿಗೆ ನಿವ್ವಳ ಲಾಭ ಬಂದಿದೆ ಎಂದು ಹೇಳಿದರು.
ಹಾಲು ಉತ್ಪಾದಕರನ್ನು ಉತ್ತೇಜಿಸಲು ಸರಕಾರ ಪ್ರೋತ್ಸಾಹಧನ ನೀಡುತ್ತಿದೆ. ಅಲ್ಲದೆ ಸಂಘದ ವತಿಯಿಂದ ಪಿಡ್ಸ್, ಹಸಿರುಮೇವು, ಬಿತ್ತನೆಬೀಜ ನೀಡಲಾಗುತ್ತದೆ. ಹಾಗಾಗಿ ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡುವ ಮೂಲಕ ಇನ್ನು ಹೆಚ್ಚಿನ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.
ರೈತರು ತಮ್ಮ ಜಾನುವಾರುಗಳಿಗೆ ಒಕ್ಕೂಟದಿಂದ ವಿಮೆ ಮಾಡಿಸುವುದು ಅತೀ ಅಗತ್ಯವಾಗಿದ್ದು ದೊಡ್ಡ ಅಂಕಂಡಹಳ್ಳಿ ಸಂಘವು ಇನ್ನು ಸುಮಾರು ಜನ ವಿಮೆ ಮಾಡಿಸಿಕೊಳ್ಳದೆ ಇದ್ದಾರೆ. ವರ್ಷಕ್ಕೆ ಎರಡು ಬಾರಿ ಜನವರಿ ಹಾಗೂ ಜೂನ್ ನಲ್ಲಿ ವಿಮೆಯನ್ನು ಕಟ್ಟಿಸಿಕೊಳ್ಳುತ್ತಿದ್ದೇವೆ ದಯವಿಟ್ಟು ಎಲ್ಲರೂ ವಿಮೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.ವಿಮೆ ಮಾಡಿಸಿದ ಜಾನುವಾರುಗಳಿಗೆ ಏನಾದರೂ ಪ್ರಾಣಪಾಯ ಸಂಭವಿಸಿದಲ್ಲಿ ವಿಮೆ ಮಾಡಿಸುವುದರಿಂದ ಉಪಯುಕ್ತವಾಗುತ್ತದೆ ಎಂದು ಸಲಹೆ ನೀಡಿದರು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಬಾಬು ರವರು ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇದುವರೆಗೂ ಸ್ವಂತ ಕಟ್ಟಡವಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಪ್ರತಿಸಲ ಬಂದಾಗಲೂ ಕಟ್ಟಡದ ಬಗ್ಗೆ ಮಾತನಾಡುತ್ತಿದ್ದೇವೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಸರ್ಕಾರಿ ಜಾಗವನ್ನು ಗುರುತಿಸಿ ಹಾಲು ಉತ್ಪಾದಕರ ನೂತನ ಕಟ್ಟಡ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದೊಡ್ಡ ಅಂಕಂಡಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ರತ್ನಮ್ಮ, ಉಪಾಧ್ಯಕ್ಷರಾದ ಲಕ್ಷ್ಮಿ ದೇವಿ, ನಿರ್ದೇಶಕರಾದ ಜಯಮ್ಮ,ನಾರಾಯಣಮ್ಮ, ಪುಷ್ಪ, ಸುಶೀಲಮ್ಮ, ಜಯಮ್ಮ,ಮುನಿರತ್ನಮ್ಮ, ಭಾಗ್ಯ, ಅಕ್ಕಮ್ಮ, ಕಾರ್ಯದರ್ಶಿಗಳಾದ ಮಮತಾ,ಗ್ರಾಮಸ್ಥರಾದ ವೆಂಕಟೇಶ್, ಆರ್ಮುಗಂ, ಶಂಕರ್,ಲಕ್ಷ್ಮೀನಾರಾಯಣ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ