65ನೇ ವರ್ಷದ ಶ್ರೀ ವಿದ್ಯಾಗಣಪತಿ ಮಹೋತ್ಸವ, (ರಾಜ್ಯಕ್ಕೆ ದ್ವಿತೀಯ ಸ್ಥಾನ)
ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಬಾಳೆಹೊನ್ನೂರು
ತಮ್ಮೆಲ್ಲರ ಶ್ರದ್ಧೆ ಭಕ್ತಿ ಮತ್ತು ಅಮೂಲ್ಯ ಸಹಕಾರದಿಂದ ಸತತ 64 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ವಿದ್ಯಾಗಣಪತಿ ಮಹೋತ್ಸವವು ಸ್ವಸ್ತಿ ಶ್ರೀ ಶಾಲಿವಾಹನ ಶಕವರ್ಷ 1946ನೇ ಶ್ರೀಮನ್ ಶೋಭಕ್ಷಾಮ ಸಂವತ್ಸರದ ದಕ್ಷಿಣಾಯನ ವರ್ಷಋತು ಭಾದ್ರಪದ ಮಾಸ ಶುಕ್ಲಪಕ್ಷದ ತೃತೀಯ ಅಂದರೆ ದಿನಾಂಕ 18-09-20236: ಸೋಮವಾರದಿಂದ ಪ್ರಾರಂಭವಾಗಿ ಭಾದ್ರಪದಮಾಸ ಕೃಷ್ಣಪಕ್ಷದ ದ್ವಿತೀಯ ದಿನಾಂಕ 01-10-2023ನೇ ಭಾನುವಾರದ ಪರ್ಯಂತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ತಮ್ಮೆಲ್ಲರ ಶ್ರದ್ಧೆ, ಭಕ್ತಿ ಮತ್ತು ತುಂಬುಹೃದಯದ ಸಹಕಾರದಿಂದ ಸಂಪನ್ನಗೊಳ್ಳಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ತಾವು ಸಕುಟುಂಬ ಸಹಿತ ಆಗಮಿಸಿ ಮಹೋತ್ಸವದ ಯಶಸ್ಸಿನಲ್ಲಿ ಭಾಗಿಗಳಾಗಿ ಶ್ರೀವಿದ್ಯಾಗಣಪತಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ.
ಪ್ರತಿ ದಿನದ ಕಾರ್ಯಕ್ರಮದ ವಿವರಗಳು ಕೆಳಗಿನಂತಿವೆ