ಜಿಲ್ಲೆನ್ಯೂಸ್

ತಾಲೂಕಿನ ಡಿಕೆ ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ

ತಾಲೂಕಿನ ಡಿಕೆ ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ

(KOLARA): ಬಂಗಾರಪೇಟೆ :ತಾಲೂಕಿನ ಡಿಕೆ ಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಬೆಳಗ್ಗೆ 11 ಗಂಟೆಯಲ್ಲಿ ಅಧ್ಯಕ್ಷ ಸುರೇಶ್ ರವರ ನೇತೃತ್ವದಲ್ಲಿ ಸಾಮಾನ್ಯ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಅಧ್ಯಕ್ಷ ಸುರೇಶ್ ಅವರು ಮಾತನಾಡಿ, ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆಯ ನಡವಳಿಕೆಗಳನ್ನು ಓದಿ ಸಭೆಗೆ ತಿಳಿಸಿದ್ದೇವೆ, ಹಾಗೂ ಕೂಸಿನ ಮನೆ ಅನುಷ್ಠಾನ ಮಾಡುವ ಬಗ್ಗೆ,ಶೌಚಾಲಯ ಗುಂಡಿ ಸ್ವಚ್ಛಗೊಳಿಸುವ ಯಂತ್ರ ಬಗ್ಗೆ, ಮೂಲಭೂತ ಸೌಲಭ್ಯಗಳ ಬಗ್ಗೆ, ಜಮಾ ಖರ್ಚಿನ ಬಗ್ಗೆ, ಹಾಗೂ ವಿವಿಧ ಕಾಮಗಾರಿಗಳಿಗೆ ಮತ್ತು ಬಾಕಿ ಉಳಿದಿದ್ದ ಕಾಮಗಾರಿಗಳಿಗೆ ಚರ್ಚೆ ನಡೆಸಿ ಅನುಮೋದನೆಯನ್ನು ನೀಡಲಾಗಿದೆ ಎಲ್ಲಾ ಕಾಮಗಾರಿಗಳನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದೆಂದು ತಿಳಿಸಿದರು.

ಈಗ ಬೇಸಿಗೆ ಕಾಲ ಬರುತ್ತಿರುವ ಹಿನ್ನೆಲೆ ಕೆಟ್ಟು ನಿಂತಿರುವ ಎಲ್ಲಾ ಬೋರ್ವೆಲ್ ಗಳನ್ನು ರೀ ಬೋರ್ ಮಾಡಿ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳುತ್ತೇವೆ. ಶಾಸಕರ ಅನುದಾನದಿಂದ ನಮ್ಮ ಪಂಚಾಯಿತಿಗೆ ಶೌಚಾಲಯ ಗುಂಡಿ ಸ್ವಚ್ಛಗೊಳಿಸುವ ಯಂತ್ರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಸುಲೋಚನ, ಸದಸ್ಯರಾದ ರಾಮಯ್ಯ, ರಾಧಮ್ಮ, ಕಲಾವತಿ, ಸವಿತಾ ಬಾಬು, ಅಮರನಾರಾಯಣ,ಪಿಡಿಓ ಭಾಸ್ಕರ್ ಹಾಗೂ ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code