ಮಾದಕ ದ್ರವ್ಯಗಳನ್ನು ತ್ಯಜಿಸಿ,ಸಾಮಾಜಿಕ ಜೀವನಕ್ಕೆ ಮುನ್ನುಡಿ ಬರೆಯಿರಿ: ಪಟ್ಟಣದಲ್ಲಿ ಡಿವೈಎಸ್ಪಿ ಪಾಂಡುರಂಗ
(KOLARA) ಪ್ರಸ್ತುತ ಯುವ ಸಮುದಾಯ ಮಾದಕ ವಸ್ತುಗಳ ಬಳಕೆಯಿಂದ ತನ್ನ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸದೆ ತನ್ನ ಜೀವನವನ್ನು ತಾನೇ ಅಂತ್ಯಗೊಳಿಸಿಕೊಳ್ಳುವುದರ ಮೂಲಕ, ಸಮಾಜಕ್ಕೆ ಮಾರಕವಾಗಿ ಬೆಳೆಯುತ್ತಿರುವುದು ಅತ್ಯಂತ ದುರಾದೃಷ್ಟಕರ, ಆದ್ದರಿಂದ ಯುವ ಸಮುದಾಯ ಮಾದಕ ವಸ್ತುಗಳನ್ನು ತ್ಯಜಿಸುವುದರ ಮೂಲಕ ಉತ್ತಮ ಸಾಮಾಜಿಕ ಜೀವನಕ್ಕೆ ಮುನ್ನುಡಿ ಬರೆಯಬೇಕು ಎಂದು ಡಿ ವೈ ಎಸ್ ಪಿ ಪಾಂಡುರಂಗ ಅಭಿಪ್ರಾಯಪಟ್ಟರು.
ಬಂಗಾರಪೇಟೆ: ಪಟ್ಟಣದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಬಂಗಾರಪೇಟೆ ಪೊಲೀಸ್ ಅಧಿಕಾರಿಗಳು ಮಾದಕ ವಸ್ತುಗಳ ವಿರೋಧಿ ಜಾತಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು.
ಮಾದಕ ದ್ರವ್ಯ ಸೇವನೆಯಿಂದ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಅಥವಾ ನಡವಳಿಕೆಯ ಸ್ಥಿತಿಯನ್ನು ಬದಲಾಯಿಸುವ ಮೂಲಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ,
ಮಾದಕ ಸೇವನೆ ಮೆದುಳು ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುವ ಒಂದು ಸ್ಥಿತಿಯಾಗಿದೆ ಆಲ್ಕೋಹಾಲ್, ಗಾಂಜಾ ಮತ್ತು ನಿಕೋಟಿನ್ ಔಷಧಿಗಳೆಂದು ಪರಿಗಣಿಸಲ್ಪಡುವ ವಸ್ತುಗಳ ಉದಾಹರಣೆಗಳಾಗಿವೆ ಮಾದಕ ವ್ಯಸನವು ನಿರಂತರವಾದ, ಮರುಕಳಿಸುವ ಮಿದುಳಿನ ಸ್ಥಿತಿಯಾಗಿದ್ದು, ಗೀಳಿನ ಮಾದಕ ವ್ಯಸನ ಮತ್ತು ಬಳಕೆಯಿಂದ ಗುರುತಿಸಲ್ಪಟ್ಟಿದೆ, ಹಾಗೆ ಮಾಡುವುದರಿಂದ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಯುವ ಸಮುದಾಯ ಇಂತಹ ವ್ಯಸನಿಗಳಿಂದ ಮುಕ್ತರಾಗಿ ಸದೃಢ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು, ಎಂದರು.
ಈ ಜಾತ ಕಾರ್ಯಕ್ರಮ ಜೂನಿಯರ್ ಕಾಲೇಜು ಮೈದಾನದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ವೃತ ನಿರೀಕ್ಷಕ ನಂಜಪ್ಪ, ಸಬ್ ಇನ್ಸ್ಪೆಕ್ಟರ್ ರಾಜಣ್ಣ, ಎಎಸ್ಐ ಭಾನು, ಮುಖ್ಯೋಪಾಧ್ಯಾಯರಾದ ಶಂಕರಪ್ಪ, ಶಿಕ್ಷಕರಾದ ನಂಜುಂಡಪ್ಪ, ದೈಹಿಕ ಶಿಕ್ಷಕ ಚಂದ್ರು ಇತರರು ಉಪಸ್ಥಿತರಿದ್ದರು.
ವರದಿ ವಿಷ್ಣು ಕೋಲಾರ