1.06 ಕೋಟಿ ಮೌಲ್ಯದ ಚಿನ್ನಾಭರಣ ವಶ,ಬಂಗಾರಪೇಟೆ ಪೊಲೀಸರಿಂದ ಐದು ಮಂದಿ ಆರೋಪಿಗಳ ಬಂಧನ.
(KOLARA): ಬಂಗಾರಪೇಟೆ: ಬೆಂಗಳೂರಿನಿಂದ ಚಿನ್ನದ ಆಭರಣ ತಂದು ಪಟ್ಟಣದ ಬಸ್ ನಿಲ್ದಾಣದಲ್ಲಿ ಟೊಮೆಟೋ ತೆಗೆದುಕೊಳ್ಳುವ ವೇಳೆ ಕಳುವಾಗಿದ್ದ ಚಿನ್ನಾಭರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಬಂಧಿಸಿ, ಅವರಿಂದ 1.06 ಕೋಟಿ ರೂ. ಮೌಲ್ಯದ 1.400 ಕೆ.ಜಿ. ತೂಕದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ನಂಜಪ್ಪ ನೇತೃತ್ವದ ಪೊಲೀಸರ ತಂಡವು ಯಶಸ್ವಿಯಾಗಿದೆ.
ಕೆಜಿಎಫ್‌ನ ನಿವಾಸಿ ಯು.ಗೌತಮ್ ಚಂದ್ ಎಂಬ ಚಿನ್ನದ ವ್ಯಾಪಾರಿಯು ಫೆ.25ರಂದು ಬಂಗಾರಪೇಟೆ ಪಟ್ಟಣದ ಜ್ಯೂವೆಲ್ಲರಿ ಅಂಗಡಿಗಳಿಗೆ ಚಿನ್ನಾಭರಣಗಳನ್ನು ಸರಬರಾಜು ಮಾ ಡಲು ಬಂದು, ವ್ಯಾಪಾರ ವಹಿವಾಟು ಮುಗಿಸಿ ಅಂದು ಮಧ್ಯಾಹ್ನ ಕೆಜಿಎಫ್‌ಗೆ ವಾಪಸ್ ಆಗುವಾಗ ಪಟ್ಟಣದ ಬಸ್ನಿಲ್ದಾಣದ ಸಮೀಪ ಯಾರೋ ಇಬ್ಬರು ಅಪರಿಚಿತ ಕಳ್ಳರು ದ್ವಿಚಕ್ರ ವಾಹ ನದಲ್ಲಿ ಬಂದು ಕೆಜಿಎಫ್‌ನ ಯು.ಗೌತಮ್‌ಚಂದ್ ಎಂಬ ಚಿನ್ನದ ವ್ಯಾಪಾರಿಯ ಗಮನವನ್ನು ಬೇರೆಡೆಗೆ ಸೆಳೆದು ಅವರ ಚಿನ್ನಾಭರಣ ಹಾಗೂ ನಗದು ಇದ್ದಂತಹ ಬ್ಯಾಗ್‌ನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಪ್ರಕರಣ ದೂರು ದಾಖಲುಗೊಂಡಿತ್ತು.
ವಿಶೇಷ ಕಾರಾಚರಣೆ: ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಂಗಾರಪೇಟೆ ಅಪ ರಾಧ ಭಾಗದ ಪೊಲೀಸರು ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಡಿವೈಎಸ್ಪಿ ಎಸ್. ಪಾಂಡುರಂಗ ಅವರ ಮಾರ್ಗ ದರ್ಶನದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಎಂ.ನಂಜಪ್ಪ, ಸಿಬ್ಬಂದಿಗಳು ಆರೋಪಿಗಳ ಮತ್ತು ಮಾಲಿನ ಪತ್ತೆಗಾಗಿ ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ವಿಶೇಷ ಕಾರ್ಯಚರಣೆ ಕೈಗೊಂಡಿದ್ದರು.
ಪೊಲೀಸರ ಕಾರವೈಖರಿಗೆ ಶ್ಲಾಘನೆ: ಆರೋಪಿಗಳಾದ ಆಂಧ್ರಪ್ರದೇಶ ರಾಜ್ಯದ ಕೆ.ಡಿ.ಪೇಟೆಯ ನಿವಾಸಿ ಎಂ.ಘಂಟ ಶ್ರೀಕಾಂತ್, ಚಿನ್ನಯ್ಯಪಾಳ್ಯಂ ಗ್ರಾಮದ ಮೇಕಲ ಹರಿಕಿರಣ್ ಪಾಂಡು, ಮೇಕಲ ಲಾವ, ಒರಿಸ್ಸಾ ರಾಜ್ಯದ ಗಂಜಂ ಜಿಲ್ಲೆ ನಾರಾಯಣಪುರದ ಜಿ. ಅರೇಶ್ ಮತ್ತು ಜಿ.ಲಕ್ಷ್ಮೀದಾಸ್ ಅವರನ್ನು ಬಂಧಿಸಲಾ ಗಿದೆ. ಪೊಲೀಸರ ಕಾರವೈಖರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಡಿವೈಎಸ್ಪಿ ಎಸ್.ಪಾಂಡುರಂಗ ಶ್ಲಾಘಿಸಿದ್ದಾರೆ.
ವರದಿ: ವಿಷ್ಣು ಕೋಲಾರ