“ಅಣಬೆ ಬೇಸಾಯದಿಂದ ಉತ್ತಮ ಆದಾಯ”
(SHIVAMOGA): ಅತ್ಯಧಿಕ ಪ್ರೋಟೀನ್ ಇರುವ ಆಹಾರ ವರ್ಧಕ ಅಣಬೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅಣಬೆ ಕೃಷಿಯಿಂದ ಕಡಿಮೆ ವೇಳೆಯಲ್ಲಿ ಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು ಎಂದು ಸೂಕ್ಷ್ಮ ಜೀವಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಶಿಲ್ಪ ತಿಳಿಸಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಳೇಮುಗಳಗೆರೆ ಗ್ರಾಮದಲ್ಲಿ ನಡೆದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಣಬೆ ಬೇಸಾಯ ವಿಷಯ ಕುರಿತು ಮಾತನಾಡಿದರು.
ವರ್ಷವಿಡೀ ಮಾಡಬಹುದಾದ ಅಣಬೆ ಕೃಷಿಯನ್ನು ಮನೆಯ ಒಳಗಡೆ ಮಾಡಬಹುದು. ಭಾರತದಲ್ಲಿ ಆಯಿಸ್ಟರ್ ಅಣಬೆ, ಬಿಳಿ ಅಣಬೆ, ಕಪ್ಪೆ ಚಿಪ್ಪಿನ ಅಣಬೆ, ಭತ್ತದ ಹುಲ್ಲಿನ ಅಣಬೆ ಗುಂಪಿಗೆ ಸೇರಿದ ಎಲ್ಲ ಅಣಬೆ ತಳಿಗಳನ್ನು ಬೆಳೆಯಬಹುದು. ಅಣಬೆ ಸೇವಿಸುವುದರಿಂದ ವಿಟಮಿನ್ ಡಿ ಯುಕ್ತ, ಆ್ಯಂಟಿ ಆಕ್ಸಿಡೆಂಟ್, ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಮಾರಕ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದ ಅವರು ಅಣಬೆ ಬೆಳೆಯುವ ವಿಧಾನವನ್ನು ವಿವರಿಸಿದರು.
ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಿಯಾ ಮೇಡಂ ಉತ್ತಮ ಬೀಜದ ಆಯ್ಕೆ ಮತ್ತು ಬೀಜೋಪಚಾರದ ಕುರಿತು ಮಾತನಾಡಿದರು.
ಇಮ್ಯೂನ್ ಕಾಯಿಲೆಗಳನ್ನು ನಿರ್ವಹಿಸಲು ನೆರವಾಗುತ್ತದೆ.ಆ್ಯಂಟಿ ವೈರಲ್, ಆ್ಯಂಟಿ ಮೈಕ್ರೋಬಿಯಲ್, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೆಗ್ಲಿ ಸರೈಡ್ಸ್ ಅಂಶವನ್ನು ಕಡಿಮೆ ಮಾಡುತ್ತದೆ.
ಕಾಲೇಜು ಶಿಬಿರಾರ್ಥಿಗಳೊಂದಿಗೆ ಅನೇಕ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ಮಧು ರಾಮ್ ಸೊರಬ