Newsರಾಜಕೀಯರಾಜ್ಯ

ರುನಾಡದೇವತೆ ಚಾಮುಂಡೇಶ್ವರಿಗೆ ಮೊದಲ ‘ಗೃಹಲಕ್ಷ್ಮೀ’ ಕಾಣಿಕೆ ಸಲ್ಲಿಸಿದ ಸಿದ್ದು…

ರುನಾಡದೇವತೆ ಚಾಮುಂಡೇಶ್ವರಿಗೆ ಮೊದಲ ‘ಗೃಹಲಕ್ಷ್ಮೀ’ ಕಾಣಿಕೆ ಸಲ್ಲಿಸಿದ ಸಿದ್ದು…

ರುನಾಡದೇವತೆ ಚಾಮುಂಡೇಶ್ವರಿಗೆ
ಮೊದಲ ‘ಗೃಹಲಕ್ಷ್ಮೀ’ ಕಾಣಿಕೆ ಸಲ್ಲಿಸಿದ ಸಿದ್ದು…

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಬಂದರೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮೇ 9ರಂದು ಚಾಮುಂಡೇಶ್ವರಿ ಎದುರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ವಾಗ್ದಾನ ಮಾಡಿದ್ದರು. ಇದೀಗ ಆ ಬೇಡಿಕೆ ಈಡೇರಿದ್ದರಿಂದ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ  ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಕೆ ತೀರಿಸಿದರು.ಅಲ್ಲದೇ ನಾಡದೇವತೆಯಾದ ಚಾಮುಂಡೇಶ್ವರಿಗೆ ಮೊದಲ ‘ಗೃಹಲಕ್ಷ್ಮೀ’ ಯೋಜನೆಯ 2000 ರೂ. ಕಾಣಿಕೆಹಾಕಿದರು.ವಿಧಾನಸಭೆ ಚುನಾವಣೆ ಸಂಧರ್ಭದಲ್ಲಿ ಬೇಡಿಕೆಕೊಂಡಿದ್ದನ್ನು ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ದೇವಿ ಈಡೇರಿಸಿದ್ದಾಳೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ)
ಹರಕೆ ತೀರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಇಂದು (ಆಗಸ್ಟ್ 29)
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹಸಿರು ಮತ್ತು ಕೆಂಪು ಸೀರೆ, ಕನಕಾಂಬರ, ಮಲ್ಲಿಗೆ, ಗುಲಾಬಿ ಹೂವಿನ ಹಾರ ಮತ್ತು ಫಲ ಸಮರ್ಪಣೆ ಮಾಡುವ ಮೂಲಕ ತಾಯಿ ಚಾಮುಂಡೇಶ್ವರಿಗೆ ಹೊತ್ತುಕೊಂಡಿದ್ದ ಹರಿಕೆಯನ್ನು ಸಿಎಂ ಹಾಗೂ ಡಿಸಿಎಂ ತೀರಿಸಿದರು.

ಇನ್ನು ಕಾಂಗ್ರೆಸ್‌ನ ಮಹತ್ವದ ಗ್ಯಾರಂಟಿಗಳಲ್ಲೊಂದಾದ ಮನೆ ಯಜಮಾನಿಗೆ ನೀಡುವ 2000 ರೂ. ಗೃಹ ಲಕ್ಷ್ಮೀ ಮೊದಲ ಹಣವನ್ನು ತಾಯಿ ಚಾಮುಂಡೇಶ್ವರಿಗೆ ನೀಡಿರುವುದು ವಿಶೇಷವಾಗಿದೆ. ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ತಲಾ 2000 ರೂ. ಕಾಣಿಕೆ ನೀಡಿ ಆಶೀರ್ವಾದ ಪಡೆದುಕೊಂಡರು.

ಈ ಯೋಜನೆಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕ್ಕೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮೇ 9ರಂದು ಚಾಮುಂಡೇಶ್ವರಿ ಎದುರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ವಾಗ್ದಾನ ಮಾಡಿದ್ದರು.

ಕಾಂಗ್ರೆಸ್ ಸರ್ಕಾರ ಬರಲು ಆಶೀರ್ವಾದ ಮಾಡು ತಾಯಿ, ಜನರ ಯೋಜನೆಗಳನ್ನು ಜಾರಿಗೊಳಿಸಲು ಅನುಕೂಲ ಮಾಡಿಕೊಡು ಎಂದು ಕೋರಿ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗಳನ್ನು ಮಲ್ಲಿಗೆ, ಕನಕಾಂಬರ,ಹೂವಿನ ಹಾರ, ತುಪ್ಪ, ಹಣ್ಣು ಹಾಗೂ ಸೀರೆಯೊಂದಿಗೆ ಪೂಜೆ ಸಲ್ಲಿಸಿದರು ಇದೀಗ ಆ ಬೇಡಿಕೆ ಈಡೇರಿದ್ದರಿಂದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಕೆ ತೀರಿಸಿದರು.

Leave a Reply

Your email address will not be published. Required fields are marked *

Scan the code